Advertisement

ಮಾಲಿನ್ಯ ತಡೆ ಬಗ್ಗೆ ಅರಿವು ಮೂಡಿಸಲು ಮುಂದಾಗಿ

07:08 AM Feb 08, 2019 | Team Udayavani |

ದೇವನಹಳ್ಳಿ: ಮನುಷ್ಯರಿಗೆ ಅತಿ ಮುಖ್ಯವಾಗಿ ದಿನನಿತ್ಯ ನೀರು, ಆಹಾರ, ರಾಸಾಯನಿಕ ವಸ್ತು, ಬೆಳಕು ಅಗತ್ಯ. ಆದರೆ, ಇವುಗಳ ನಿಯಂತ್ರಣ ಸಾಧ್ಯವಾಗದ ಕಾರಣ ಮಾಲಿನ್ಯ ಹಾಳಾಗುತ್ತಿದೆ. ವಾಹನಗಳು ಹೆಚ್ಚಾದಂತೆ ಪರಿಸರ ಮಾಲಿನ್ಯ, ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಪುರಸಭಾ ಅಧ್ಯಕ್ಷ ಮೂರ್ತಿ ತಿಳಿಸಿದರು. ನಗರದ ರಾಣಿ ಸರ್ಕಲ್‌ನಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಮಕ್ಕಳಿಗೆ ವಾಹನ ನೀಡಿದರೆ ದಂಡ: ಸಂಚಾರ ಚಿಹ್ನೆಗಳು ಹಾಗೂ ಸಂಚಾರ ನಿಯಮಗಳನ್ನು ಅರಿತು ಪಾಲಿಸಿದಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿ ಸಲು ಸಾಧ್ಯ. ರಸ್ತೆ ನಿಯಮಗಳನ್ನು ಪಾಲಿಸ ಬೇಕು. ರಸ್ತೆ ಸುರಕ್ಷತೆ ಜೀವದ ರಕ್ಷೆ ಎಂಬ ವಾಕ್ಯ ವನ್ನು ಪಾಲಿಸಬೇಕು. ಸಾರಿಗೆ ಇಲಾಖೆ ಹಾಕಿರುವ ನಾಮಫ‌ಲಕಗಳ ಮಾರ್ಗಸೂಚಿಗಳನ್ನು ಅನುಸರಿ ಸಬೇಕು. ಸುರಕ್ಷಿತ ಪ್ರಯಾಣವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ಕೊಡಬಾರದು. ಮಕ್ಕಳಿಗೆ ವಾಹನ ಕುಡುವ ಬಗ್ಗೆ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತರು ತ್ತಿದೆ. ಪೋಷಕರು ಮಕ್ಕಳಿಗೆ ವಾಹನ ನೀಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾಹನಗಳ ನಿಯಮ ಪಾಲಿಸಿ: ವಕೀಲರ ಪರಿಷತ್‌ ಸಂಘದ ರಾಜ್ಯ ನಿರ್ದೇಶಕ ಹರೀಶ್‌ ಮಾತನಾಡಿ, ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಒಂದು ವರ್ಷ ಅಧ್ಯಯನ ಮಾಡಿದರೂ ಸಾಲದು. 365 ದಿನಗಳ ಕಾಲ ಓದಿ 366ನೇ ದಿನ ರಸ್ತೆ ಸುರಕ್ಷತೆ ಬಗ್ಗೆ ಪಾಲಿಸದಿದ್ದರೆ ಅರ್ಥ ಇರುವುದಿಲ್ಲ. ಪ್ರತಿದಿನ 13 ಕಿ.ಮೀ.ನಷ್ಟು ರಸ್ತೆಗಳು ಅಭಿವೃದ್ಧಿಯಾಗುತ್ತ‌ಲೇ ಇರುವುದು. ಈಗ ಬರುವ ಇನೋವಾ, ಫಾರ್ಚುನರ್‌ ಇತರೆ ವಾಹನಗಳು 140 ಕಿ.ಮೀ. ವೇಗವಿರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಿ ಮೋಟಾರ್‌ ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸಿ ಸಂಭವನೀಯ ರಸ್ತೆ ಅವಘಡಗಳನ್ನು ತಡೆಯುವಲ್ಲಿ ಹಾಗೂ ರಸ್ತೆಯಲ್ಲಿನ ಸಾವು, ನೋವುಗಳನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ರಸ್ತೆ ಸುರಕ್ಷತೆಗಾಗಿ ಶ್ರಮಿಸ ಬೇಕೆಂದು ಕೋರಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್‌.ಮಂಜು ನಾಥ್‌, ತಾವು ಬಳಸುವ ವಾಹನಗಳನ್ನು ಸುಸ್ಥಿತಿ ಯಲ್ಲಿಟ್ಟುಕೊಂಡು ಅವುಗಳಿಂದ ಹೊರ ಸೂಸುವ ಹಾನಿಕರ ವಿಷಾನಿಲಗಳನ್ನು ನಿಯಂತ್ರಿ ಸಬೇಕು. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮ ಭಾರತ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ನಮ್ಮನ್ನು ಆತಂಕಕ್ಕೀಡು ಮಾಡಿದೆ. ಪ್ರತಿ ವರ್ಷ ಅಂದಾಜು 1.5 ಜನರು ರಸ್ತೆ ಅಪಘಾತಕ್ಕೆಗೊಳಗಾಗಿ ಮರಣಹೊಂದಿರುತ್ತಿರು ವುದು ಗಂಭೀರ ವಿಷಯವಾಗಿದೆ ಎಂದು ತಿಳಿಸಿದರು.

ಚಾಲಕರ ತಪ್ಪಿನಿಂದಲೇ ಅಪಘಾತ: ಇತ್ತೀಚಿನ ದಿನಗಳಲ್ಲಿ ಸಂಭವಿಸುವ ಹೆಚ್ಚಿನ ರಸ್ತೆ ಅಪ ಘಾತಗಳಲ್ಲಿ ಯುವಕರು ಬಲಿಯಾಗುತ್ತಿದ್ದಾರೆ. ಶೇ.90ರಷ್ಟು ಅಪಘಾತಗಳು ಚಾಲಕರ ತಪ್ಪಿ ನಿಂದಲೇ ನಡೆಯುತ್ತಿವೆ. ಅಜಾಗರೂಕತೆ ಚಾಲನೆ, ಅತಿಯಾದ ವೇಗದ ಚಾಲನೆ, ಚಾಲನೆ ಯಲ್ಲಿ ಫೋನ್‌ ಬಳಸುವುದರಿಂದ ಮತ್ತು ಮದ‌್ಯ ಪಾನ ಮಾಡಿ ಚಾಲನೆ ಮಾಡುವುದರಿಂದ, ಅವಸ ರದ ಚಾಲನೆಯಿಂದ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತದೆ. ತಾಳ್ಮೆಯಿಂದ ಹಾಗೂ ಏಕಾ ಗ್ರತೆಯಿಂದ ಚಾಲನೆ ಮಾಡಬೇಕೆಂದರು.

Advertisement

ಈ ವೇಳೆ ಸಾರ್ವಜನಿಕ ಆಸ್ಪತ್ರೆ ವೈದ‌್ಯ ಡಾ.ಶ್ರೀನಿ ವಾಸ್‌, ಪುರಸಭಾ ಉಪಾಧ್ಯಕ್ಷೆ ಆಶಾರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ ಗೋಪಾಲಕೃಷ್ಣ, ಸದಸ್ಯ ಕುಮಾರ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದ ಸಂಚಾರ ಪೊಲೀಸ್‌ ಠಾಣೆ ವೃತ್ತ ನಿರೀಕ್ಷಕ ನಾಗರಾಜ್‌, ಮಹಿಳಾ ಗ್ರಾಮೀಣಾ ಭಿವೃದ್ಧಿ ಸಂಸ್ಥೆ ಮುಖ್ಯಸ್ಥೆ ಸೂರ್ಯಕಲಾ ಮೂರ್ತಿ, ಪಿಎಸ್‌ಐ ರಾಮ ಮೂರ್ತಿ, ನಿವೃತ್ತ ಶಿಕ್ಷಕ ಮಹಾಲಿಂಗಯ್ಯ, ಮೋಟಾರು ಹಿರಿಯ ನಿರೀಕ್ಷಕರಾದ ನರಸಿಂಹ ಮೂರ್ತಿ, ಮೋಹನ್‌ ಗಾವಕರ್‌, ಲಕ್ಷ್ಮೀ, ಮುಖಂಡ ಮುನಿಕೃಷ್ಣಪ್ಪ ಮತ್ತಿತರರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next