Advertisement

ದ್ವೀಪದಲ್ಲಿ ಚೀನಾ ಬಾಂಬರ್‌!

06:00 AM May 20, 2018 | |

ಬೀಜಿಂಗ್‌: ದಕ್ಷಿಣ ಚೀನಾ ಸಮುದ್ರದ ವಿವಾದಿತ ದ್ವೀಪದಲ್ಲಿ ಚೀನಾ ತನ್ನ ಬಾಂಬರ್‌ಗಳನ್ನು ನಿಯೋಜಿಸಿದೆ. ಇದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಗಲಿದೆ.

Advertisement

ಎಚ್‌-6ಕೆ ಬಾಂಬರ್‌ ಸೇರಿದಂತೆ ಯುದ್ಧ ವಿಮಾನಗಳು ಈ ದ್ವೀಪದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್‌ ತರಬೇತು ಮುಗಿಸಿವೆ ಎಂದು ಚೀನಾ ವಾಯುಪಡೆ ಹೇಳಿಕೊಂಡಿದೆ. ಈ ತರಬೇತಿಯಿಂದಾಗಿ ಚೀನಾ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ದಿನಪತ್ರಿಕೆ ವರದಿ ಮಾಡಿದೆ. ಅಲ್ಲದೆ ಇನ್ನೊಂದು ದಿನಪತ್ರಿಕೆಯ ಟ್ವಿಟರ್‌ ಖಾತೆಯಲ್ಲೂ ಈ ಸಂಬಂಧ ವಿಡಿಯೋ ಒಂದನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಟೇಕ್‌ ಆಫ್, ಲ್ಯಾಂಡಿಂಗ್‌ ಮತ್ತು ವಿಮಾನ ಹಾರಾಟದ ದೃಶ್ಯಗಳಿದ್ದವು.

ಇದು ಸಹಜವಾಗಿಯೇ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆಯು ಈ ಪ್ರದೇಶ ಉದ್ವಿಗ್ನಗೊಳ್ಳಲು ಕಾರಣ ವಾಗುತ್ತದೆ. ಅಷ್ಟೇ ಅಲ್ಲ, ಈ ಪ್ರದೇಶ ಅಸ್ಥಿರಗೊಳ್ಳುತ್ತದೆ ಎಂದಿದೆ. ಈ ಹಿಂದೆ ವಿವಾದಿತ ಪ್ರದೇಶಗಳಲ್ಲಿ ಸೇನೆ ನಿಯೋಜನೆ ಮಾಡುವುದರ ವಿರುದ್ಧ ಅಮೆರಿಕ ಚೀನಾಕ್ಕೆ ಎಚ್ಚರಿಕೆ ನೀಡಿತ್ತು. ನಾನಾ ದ್ವೀಪದಲ್ಲಿ ಚೀನಾ ಕ್ಷಿಪಣಿ ಗಳನ್ನು ನಿಯೋಜಿಸಿದಾಗಲೂ ಇದೇ ರೀತಿ ಪರಿಸ್ಥಿತಿ ಉಂಟಾಗಿತ್ತು. ಮೂಲಗಳ ಪ್ರಕಾರ ಈ ಬಾರಿ ಚೀನಾದ ಸಾನ್ಶಾ ನಗರದ ಆಡಳಿತಕ್ಕೆ ಒಳಪಟ್ಟಿರುವ ವೂಡಿ ದ್ವೀಪದಲ್ಲಿ ಈ ವಿಮಾನಗಳನ್ನು ಲ್ಯಾಂಡ್‌ ಮಾಡಲಾಗಿದೆ. ಈ ಭಾಗವನ್ನು ಚೀನಾ ತನ್ನದು ಎಂದು ಹೇಳಿ ಕೊಳ್ಳುತ್ತಿದ್ದರೆ, ವಿಯೆಟ್ನಾಮ್‌, ಫಿಲಿಪ್ಪೀನ್ಸ್‌, ಮಲೇಷ್ಯಾ, ಬ್ರುನೈ ಮತ್ತು ತೈವಾನ್‌ ಕೂಡ ತನ್ನದು ಎಂದು ಹೇಳಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next