Advertisement

ಭಾರತದ ಆರ್ಥಿಕ ಬಲವರ್ಧನೆಗೆ ಅಸೂಯೆ ಬೇಡ : ಬೀಜಿಂಗ್‌ಗೆ ಚೀನೀ ಮಾಧ್ಯಮ

10:58 AM Jul 17, 2017 | Team Udayavani |

ಹೊಸದಿಲ್ಲಿ: ಈ ದಿನಗಳಲ್ಲಿ ಅತ್ಯದ್ಭುತ ಪ್ರಮಾಣದಲ್ಲಿ  ಭಾರತಕ್ಕೆ ವಿದೇಶೀ ಬಂಡವಾಳ ಹರಿದು ಬರುತ್ತಿರುವುದರಿಂದ ಅದು ಆರ್ಥಿಕವಾಗಿ ಬಲಿಷ್ಠ ವಾಗುತ್ತಿದೆ. ಅದಕ್ಕಾಗಿ ಚೀನ ಅಸೂಯೆ ಪಡದೇ ತಣ್ಣಗಿರಬೇಕು ಮತ್ತು ಹೊಸ ಶಕೆಯ ಆರ್ಥಿಕಾಭಿವೃದ್ದಿಗಾಗಿ ಚೀನ ವಿನೂತನ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳಬೇಕು ಎಂದು ಚೀನದ ಸರಕಾರಿ ಒಡೆತನದ ಸುದ್ದಿ ಪತ್ರಿಕೆ ಹೇಳಿದೆ. 

Advertisement

”ಭಾರತಕ್ಕೆ ಅಭೂತಪೂರ್ವ ಪ್ರಮಾಣದಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿರುವುದರಿಂದ ಅದಕ್ಕೆ ಸಹಜವಾಗಿಯೇ ತನ್ನ ಉತ್ಪಾದನಾ ರಂಗವನ್ನು ಅಭಿವೃದ್ದಿಪಡಿಸುವ ಸಾಮರ್ಥ್ಯ ದೊರಕಿದೆ. ವಿದೇಶೀ ಉತ್ಪಾದಕರು ಇಂದಿನ ದಿನಗಳಲ್ಲಿ ಭಾರತದಲ್ಲಿ ಅಪಾರ ಪ್ರಮಾಣದ ಬಂಡವಾಳ ಹೂಡುತ್ತಿರುವುದರಿಂದ ಭಾರತದ ಆರ್ಥಿಕತೆ, ಕೈಗಾರಿಕೆ ಮತ್ತು ಉದ್ಯೋಗಾಭಿವೃದ್ಧಿಗೆ ಇದು ಅತ್ಯಂತ ಮಹತ್ವದ್ದಾಗಿದೆ”

”ಆದರೆ ಚೀನ ಭಾರತದ ಈ ಅತ್ಯಪೂರ್ವ ಬೆಳವಣಿಗೆಯ ಬಗ್ಗೆ ಅಸೂಯೆ ಪಡಕೂಡದು. ಬದಲಾಗಿ ಅದು ಭಾರತದೊಂದಿಗಿನ ಆರ್ಥಿಕ ಸ್ಪರ್ಧೆಯನ್ನು ಎದುರಿಸಲು ಹೊಸ ಶಕೆಗಾಗಿ ಪರಿಣಾಮಕಾರಿ ಅಭಿವೃದ್ಧಿ ತಂತ್ರಗಾರಿಕೆಯನ್ನು ರೂಪಿಸಿಕೊಂಡು ಆ ದಿಶೆಯಲ್ಲಿ ಕ್ರಿಯಾಶೀಲವಾಗಬೇಕು” ಎಂದು ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ಅಗ್ರ ಲೇಖನದಲ್ಲಿ ಚೀನಕ್ಕೆ ಬುದ್ಧಿಮಾತು ಹೇಳಿದೆ.

ಭಾರತದಲ್ಲಿ ವಿದೇಶೀ ಉತ್ಪಾದಕರು ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದರಿಂದ ಈ ಕ್ಷೇತ್ರದಲ್ಲಿನ ಭಾರತದ ದೌರ್ಬಲ್ಯವು ನಿವಾರಣೆಗೊಳ್ಳುವುದು ಸಹಜವೇ ಆಗಿದೆ. ಭಾರತದಲ್ಲಿನ ಚೀನದ ಕಂಪೆನಿಗಳು ಕೂಡ ಈ ದಿಶೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದು ಲೇಖನವು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next