Advertisement

ಬೀಜಿಂಗ್‌ ಒಲಿಂಪಿಕ್ಸ್‌ : ಟಿಕೆಟ್‌ ಮಾರಾಟ ನಿಷೇಧ

11:02 PM Jan 18, 2022 | Team Udayavani |

ಬೀಜಿಂಗ್‌: ಮುಂದಿನ ತಿಂಗಳು ಚೀನದ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಸಾರ್ವಜನಿಕವಾಗಿ ಟಿಕೆಟ್‌ ಮಾರಾಟ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

Advertisement

ಬೀಜಿಂಗ್‌ನಲ್ಲಿ ಆಯೋಜಿಸಲಾಗಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಕೇವಲ 3 ವಾರಗಳಿರುವಂತೆಯೇ ಚೀನದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದ್ದು, 2020ರ ಮಾರ್ಚ್‌ ಅನಂತರ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಸೋಂಕು ಪ್ರಕರಣವನ್ನು ಶೂನ್ಯಮಟ್ಟಕ್ಕೆ ಇಳಿಸಲು ಕಟ್ಟುನಿಟ್ಟಿನ ಕ್ರಮ ಜಾರಿ ಗೊಳಿಸಿದ್ದರೂ ಬೀಜಿಂಗ್‌ನಲ್ಲಿ ಒಮಿಕ್ರಾನ್‌ ಸೋಂಕು ಪ್ರಕರಣ ಪತ್ತೆ ಯಾಗಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಿಬಂದಿಗೆ ಮತ್ತು ಆಟಗಾರರ ಸುರಕ್ಷತೆ ದೃಷ್ಟಿಯಿಂದಾಗಿ ಟಿಕೆಟ್‌ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next