Advertisement
ಬೀಜಾಡಿ ಮತ್ತು ಗೋಪಾಡಿ ಒಂದೇ ಸೂರಿನಡಿ ಗ್ರಾ.ಪಂ.ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಬೀಜಾಡಿ ಆರೋಗ್ಯ ಕೇಂದ್ರದ ನಾಮ ಫಲಕದೂಡನೆ ಈ ಭಾಗದ ಜನರಿಗೆ ಉಪಯೋಗಕಾರಿಯಾಗಿತ್ತು. ತದನಂತರ ಬೀಜಾಡಿ ಹಾಗೂ ಗೋಪಾಡಿ ಗ್ರಾ.ಪಂ.ಗಳು ಸ್ವತಂತ್ರ ಗ್ರಾ.ಪಂ. ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ ಅನಂತರ ಆರೋಗ್ಯ ಉಪಕೇಂದ್ರವು ಸಹಾಯಕಿ ಯರ ಕೊರತೆಯಿಂದಾಗಿ ಮುಚ್ಚಿ ಕೊಂಡಿದ್ದು ಈವರೆಗೆ ಸೇವೆಗೆ ಅಲಭ್ಯವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದೆ.
ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 3500 ಜನರು ವಾಸವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಸರಕಾರದ ಆರೋಗ್ಯ ತಪಾಸಣಾ ಕೇಂದ್ರದ ಕೊರತೆಯಿಂದಾಗಿ ಕುಂಭಾಶಿ ಅಥವಾ ಕೋಟೇಶ್ವರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಗೋಪಾಡಿ ಪಂಚಾಯ್ತಿಯಷ್ಟೇ ಜನಸಂಖ್ಯೆ ಬೀಜಾಡಿ ಗ್ರಾ.ಪಂ.ನಲ್ಲೂ ಜನಸಂಖ್ಯೆ ಇದ್ದರೂ ಈ ವ್ಯಾಪ್ತಿಯ ನಿವಾಸಿಗಳು ದೂರದ ಕುಂಭಾಶಿ ಹಾಗೂ ಕೋಟೇಶ್ವರ ಆರೋಗ್ಯ ಕೇಂದ್ರ ಅವಲಂಬಿಸಬೇಕಾಗಿದೆ. ಈಡೇರದ ಬೇಡಿಕೆ
ಕಳೆದ 1 ವರುಷದಿಂದ ಆರೋಗ್ಯ ಉಪ ಕೇಂದ್ರದ ಬಗ್ಗೆ ಗ್ರಾ.ಪಂ.ವಿಶೇಷ ಸಭೆಯಲ್ಲಿ ನಿರ್ಣಯ ಮಾಡಿ ಇಲಾಖೆಗೆ ಮನವಿ ಮಾಡಲಾಗಿದೆ. ಅರೋಗ್ಯ ಇಲಾಖೆಯ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ಗೋಪಾಡಿಯಲ್ಲಿರುವ ಆರೋಗ್ಯ ಉಪಕೇಂದ್ರಕ್ಕೆ ದಾದಿಯರು ಹಾಗೂ ವೈದ್ಯರ ನೇಮಕಾತಿ ಬಗ್ಗೆ ಗಮನ ಸೆಳೆಯಲಾಗಿದ್ದರೂ ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ.
- ಸರಸ್ವತಿ ಜಿ. ಪುತ್ರನ್,ಅಧ್ಯಕ್ಷರು, ಗ್ರಾ.ಪಂ. ಗೋಪಾಡಿ
Related Articles
ಬೀಜಾಡಿ ಆರೋಗ್ಯ ಉಪಕೇಂದ್ರ ಮುಚ್ಚಿರುವ ಬಗ್ಗೆ ಗಮನಕ್ಕೆ ಬಂದಿದೆ ಅಲ್ಲಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಡಾ| ನಾಗಭೂಷಣ ಉಡುಪ, ಕುಂದಾಪುರ ತಾಲೂಕು ವೈದ್ಯಾಧಿಕಾರಿ
Advertisement