Advertisement

ಕುಲಕಸುಬು ಆಧಾರಿತ ಸಮಾಜದವರು ಸಂಘಟಿತರಾಗಬೇಕು

01:01 PM May 15, 2017 | Team Udayavani |

ದಾವಣಗೆರೆ: ಜಾಗತೀಕರಣದ ಪ್ರಭಾವದಲ್ಲಿ ಶಿವಸಿಂಪಿ ಸಮಾಜ ಒಳಗೊಂಡಂತೆ ಕುಲಕಸುಬು ಆಧಾರಿತ ಸಮಾಜಗಳು ಧೂಳಿಪಟವಾಗುವ ಹಿನ್ನೆಲೆಯಲ್ಲಿ ಎಲ್ಲಾ ಸಮಾಜದವರು ಸಂಘಟಿತರಾಗಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ್‌ ಬೇವಿನಕಟ್ಟಿ ತಿಳಿಸಿದ್ದಾರೆ.

Advertisement

ಭಾನುವಾರ ಶಿವಯೋಗಿ ಮಂದಿದರಲ್ಲಿ ನಡೆದ ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಜಿಲ್ಲಾ ಶಿವಸಿಂಪಿ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ ಮಹೋತ್ಸವ, ವೀರಶೈವ ತರುಣ ಸಂಘ ಶತಮಾನೋತ್ಸವ, ಶರಣ ಹಡೇìಕರ್‌ ಮಂಜಪ್ಪ ಸ್ಮರಣೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಜಾಗತೀಕರಣ ಎಂಬುದು ಕುಲಕಸಬುಗಳನ್ನೇ ನಾಶ ಮಾಡುತ್ತಿದೆ.

ಇದೇ ಸ್ಥಿತಿ ಮುಂದುವರೆದಲ್ಲಿ ಕುಲಕಸುಬು ಆಧಾರಿತ ಸಮಾಜದವರು ಕೆಲಸದಿಂದಲೇ ದೂರ ಉಳಿಯಬೇಕಾಗುತ್ತದೆ.  ಹಾಗಾಗಿ ತಮ್ಮ ಹಾಗೂ ಸಮಾಜದ ಉಳಿವಿಗಾಗಿ ಪ್ರತಿಯೊಬ್ಬರು ಸಂಘಟಿತರಾಗಲೇಬೇಕು ಎಂದು ಎಚ್ಚರಿಸಿದರು. ಕುಲಕಸುಬು ಆಧಾರಿತ ಕುಶಲಕರ್ಮಿ ಸಮಾಜದವರಿಗೆ ಸಾಮಾಜಿಕ ಮಾನ್ಯತೆ, ಸ್ಥಾನಮಾನ ತಂದುಕೊಟ್ಟವರು ವಿಶ್ವಗುರು ಬಸವಣ್ಣನವರು.

ಇಡೀ ಮಾನವ ಸಂಕುಲವೇ ಒಂದು ಎಂಬ ಉದಾತ್ತ ಚಿಂತನೆ ಯೊಂದಿಗೆ ಬಸವಣ್ಣನವರು ಅವಜ್ಞೆಗೆ ಒಳಗಾಗಿದ್ದ ಕುಲಕಸುಬು ಆಧಾರಿತ ಸಮಾಜದವರಿಗೆ ಆದ್ಯತೆ, ಸಾಮಾಜಿಕ ಗೌರವ ನೀಡಿದರು ಎಂದು ಸ್ಮರಿಸಿದರು. ಯಾವುದೇ ಸಮಾಜ, ಸಮುದಾಯಕ್ಕೆ ಆಗಲಿ ಸಂಘಟನೆ ಮಾನ್ಯತೆಯನ್ನು ತಂದುಕೊಡುತ್ತದೆ.

ಸಂಘಟನೆ ಎಂಬುದು ಇಲ್ಲದೇ ಹೋದಲ್ಲಿ ಸರ್ಕಾರ ಇರಲಿ ಸಮಾಜದಲ್ಲಿಯೂ ಮಾನ್ಯತೆ, ಗುರುತು ಎಂಬುದೇ ಇರುವುದಿಲ್ಲ. ಒಡೆದು ಆಳುವ ಕಾಲಘಟ್ಟದಲ್ಲಿ ಶಿವಸಿಂಪಿ ಸಮಾಜದದವರು ಸಂಘಟಿತರಾಗಬೇಕು. ಸಣ್ಣ ಪ್ರಮಾಣದಲ್ಲೇ ಆಗಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಬೇಕು.

Advertisement

ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಮಕ್ಕಳ ಹಾಗೂ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ. ಕೊಟ್ರೇಶ್‌ ಮಾತನಾಡಿ, ಶಿವಸಿಂಪಿನ ಸಮಾಜಕ್ಕೆ ಸಾಮಾಜಿಕ ಮಾನ್ಯತೆ ತಂದುಕೊಟ್ಟವರು ಕುಲಗುರು ಶಿವದಾಸಿಯಮಯ್ಯ.

ಆದರೂ, ಈಗಲೂ ಶಂಕರ ದಾಸಿಮಯ್ಯ, ಶಿವದಾಸಿಮಯ್ಯ ಎಂಬ ಪ್ರಭೇಧ ಭೇದಗಳ ನಡುವೆಯೇ ಒದ್ದಾಡುತ್ತಿದ್ದೇವೆ. ದಾಸಿಮಯ್ಯ ಪ್ರಭೇಧ ಅನೇಕ ಇರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಬದಿಗಿರಿಸಿ, ಸಮಾಜದ ಕುಲಗುರು ಶಿವದಾಸಿಮಯ್ಯನವರೇ ಎಂದು ಸಂಘಟಿತರಾಗಬೇಕು. ಇಲ್ಲದೇ ಹೋದಲ್ಲಿ ಸಮಾಜಕ್ಕೆ ಉಳಿಗಾಲವೇ ಇಲ್ಲ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next