Advertisement

ಬೇಗೂರ ಕ್ರಾಸಲ್ಲಿ ವಾಮಾಚಾರ

11:17 AM May 20, 2019 | Team Udayavani |

ಕಲಘಟಗಿ: ಇಂದಿನ ವೈಜ್ಞಾನಿಕ ಯುಗದಲ್ಲಿಯೂ ವಾಮಾಚಾರದಂತಹ ಮೂಢನಂಬಿಕೆ ಚಟುವಟಿಕೆಗೆ ಪಟ್ಟಣದಿಂದ 3 ಕಿಮೀ ಅಂತರದಲ್ಲಿರುವ ತುಮ್ರಿಕೊಪ್ಪ ಗ್ರಾಮದ ಸನಿಹದ ಬೇಗೂರ ಕ್ರಾಸ್‌ ಸಾಕ್ಷಿಯಾಗಿದೆ.

Advertisement

ಮೂರು ಹಾದಿ ಕೂಡಿದ ರಸ್ತೆ ಮಧ್ಯದಲ್ಲಿಯೇ ಕೆಲ ದಿನಗಳಿಂದ ರಾತ್ರಿ ಸಮಯದಲ್ಲಿ ವಾಮಾಚಾರ ಮಾಡಿದ ಘಟನೆಗಳು ಕಂಡುಬರುತ್ತಿದ್ದು, ಜನತೆ ಭಯಭೀತರಾಗಿದ್ದಾರೆ.

ತಾಲೂಕು ಕೇಂದ್ರ ಸ್ಥಳದಿಂದ ತುಮರಿಕೊಪ್ಪ, ಬೇಗೂರು, ಬಿಸನಳ್ಳಿ ಮಾರ್ಗವಾಗಿ ಹಿರೇಹೊನ್ನೀಹಳ್ಳಿಯತ್ತ ಹೋಗುವ ರಸ್ತೆಯ ಮಧ್ಯವರ್ತಿ ಸ್ಥಳವೇ ಮೂರು ರಸ್ತೆ ಒಂದೇ ಕಡೆ ಕೂಡಿರುವ ಬೇಗೂರ ಕ್ರಾಸ್‌ ಆಗಿದೆ. ಹಲವು ದಿನಗಳಿಂದ ಚಿಕ್ಕ ಪುಟ್ಟ ವಾಮಾಚಾರಗಳು ಜರುಗುತ್ತಲಿದ್ದರೂ ಮೇ 18 ಹುಣ್ಣಿಮೆಯ ರಾತ್ರಿ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ರವಿವಾರ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವವರು ರಸ್ತೆ ಮಧ್ಯದಲ್ಲಿಯೇ ಹರಡಿರುವ ವಾಮಾಚಾರದ ಪರಿಕರಗಳನ್ನು ಕಂಡು ಭಯಗೊಂಡಿದ್ದಾರೆ.

ಕಲಘಟಗಿಯಿಂದ ಹುಲಗಿನಕಟ್ಟಿ ಮಾರ್ಗವಾಗಿ ತುಮರಿಕೊಪ್ಪ, ಮುತ್ತಗಿ, ಎಮ್ಮೆಟ್ಟಿ ಹಾಗೂ ಬೇಗೂರು ಬಿಸನಳ್ಳಿಯ ಮಾರ್ಗವಾಗಿ ಧಾರವಾಡದತ್ತ ಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ಸಂಚರಿಸುತ್ತಾರೆ. ಈ ಕ್ರಾಸ್‌ನಿಂದ ತುಮ್ರಿಕೊಪ್ಪ ಗ್ರಾಮದ ಸೆಂಟ್ ಝೇವಿಯರ್‌ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹಾಗೂ ಹುಲಗಿನಕಟ್ಟಿ ಸನಿಹದ ಗುಡ್‌ನ‌್ಯೂಸ್‌ ಸಂಸ್ಥೆಯ ಯು ಹಾಗೂ ಪದವಿ ಮಹಾವಿದ್ಯಾಲಯವಿದ್ದು ಸಾವಿರಾರು ವಿದ್ಯಾರ್ಥಿಗಳು ಹಾದು ಹೋಗುವುದಲ್ಲದೇ ಅನೇಕರು ನಡೆದುಕೊಂಡೇ ಹೋಗುತ್ತಾರೆ.

ಈ ಘಟನೆಯಿಂದ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಭಯ ಸೃಷ್ಟಿಯಾಗಿದೆ. ವಾಮಾಚಾರಕ್ಕೆ ಬಳಸಿರುವ ನಿಂಬೆಹಣ್ಣು, ಮಣ್ಣಿನ ಪಾತ್ರೆ, ಕುಂಕುಮದ ನೀರು ತುಂಬಿದ ಬಾಟಲ್ ಹಾಗೂ ಕುಂಕುಮ ಸವರಿದ ತೆಂಗಿನಕಾಯಿಯಂತಹ ಹಲವಾರು ವಸ್ತುಗಳು ಅಲ್ಲಲ್ಲಿ ಚೆಲ್ಲಾಡಿವೆ. ಯಾರು ಯಾವ ಕಾರಣದಿಂದ ಮಾಡಿರಬಹುದು ಎಂಬುದು ತಿಳಿದುಬಂದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next