Advertisement
ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ 2020ರ ವೇಳೆ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಂಡಿದೆಯೇ, ಹೆಸರು ವಿಳಾಸ ಮತ್ತು ಇತರೆ ಮಾಹಿತಿ ಸರಿ ಇದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ. ತಪ್ಪಾಗಿದ್ದರೆ ತಿದ್ದುಪಡಿಗೆ ಸೂಕ್ತ ಅರ್ಜಿ ಕೊಟ್ಟು ಬದಲಾಯಿಸಬಹುದಾಗಿದೆ. ಮತದಾರರ ಪಟ್ಟಿ ಪರಿಶೀಲಿಸಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ, ನಾಡ ಕಚೇರಿ, ಕಾಮನ್ ಸರ್ವಿಸ್ ಸೆಂಟರ್‌ಗಳು, ಗ್ರಾಮ ಪಂಚಾಯ್ತಿ ಕಚೇರಿ ಅಥವಾ ಮತಗಟ್ಟೆ ಅಧಿಕಾರಿ (ಬಿಎಲ್ಒ)ಗಳ ಬಳಿ ಪರಿಶೀಲಿಸಬಹುದು ಎಂದು ಹೇಳಿದರು.
Related Articles
Advertisement
ಮತದಾರರು ಧೃತಿಗೆಡಬೇಕಾಗಿಲ್ಲ: ಸೆಪ್ಟೆಂಬರ್ 30ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆಮನೆ ಭೇಟಿ ಕೊಡುವ ವೇಳೆ ಪರಿಶೀಲನೆಗೆ ಸಾಧ್ಯವಾಗದ ಮತದಾರರು ಧೃತಿಗೆಡಬೇಕಾಗಿಲ್ಲ. ತಿದ್ದುಪಡಿ, ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ 2020ರ ಜನವರಿ 15ರವರೆಗೆ ಸಾಗುತ್ತಿರುತ್ತದೆ ಎಂದರು.
ಜಿಲ್ಲಾ ಐಕಾನ್ ಆಗಿ ಪ್ರಕಾಶ್ ಜಯರಾಮಯ್ಯ: ಭಾರತೀಯ ಅಂಧರ ಕ್ರಿಕೆಟ್ ತಂಡದಲ್ಲಿ ಬಿ-3 ವರ್ಗದ ಕ್ರಿಕೆಟ್ಟಿಗ, ಓಪನಿಂಗ್ ಬ್ಯಾಟ್ಸ್‌ಮನ್, ಕೀಪರ್ ಆಗಿರುವ ಪ್ರಕಾಶ್ ಜಯರಾಮಯ್ಯ ಅವರು ಜಿಲ್ಲಾ ಐಕಾನ್ ಆಗಿ ಗುರುತಿಸಲಾಗಿದೆ. ಸೆ.30ರವೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ, ಮನೆಗೆ ಭೇಟಿ ಕೊಡುವ ವೇಳೆ ನಾಗರಿಕರ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಉಮೇಶ್, ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯ ಹಾಗೂ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಸೋಮಲಿಂಗಯ್ಯ, ಜಿಲ್ಲಾ ಐಕಾನ್ ಪ್ರಕಾಶ್ ಜಯರಾಮಯ್ಯ, ಜಿಲ್ಲಾ ವಾರ್ತಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.