Advertisement

ಕೈವಲ್ಯ ಶ್ರೀಗಳ ರಜತ ಚಾತುರ್ಮಾಸ್ಯ ಆರಂಭ

01:26 AM Jul 18, 2019 | Sriram |

ಕಾಪು: ಸಮಸ್ತ ಸಾರಸ್ವತ ಮಠ ಪರಂಪರೆಯ ಆದ್ಯ ಗುರು ಪೀಠ ಶ್ರೀ ಸಂಸ್ಥಾನ ಗೌಡಾಪಾದಾಚಾರ್ಯ ಮಠದ 77ನೇ ಯತಿ ಶ್ರೀ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅವರ ರಜತ ಮಹೋತ್ಸವದ ಚಾತುರ್ಮಾಸ್ಯ ವ್ರತಾಚರಣೆಯು ಮಂಗಳವಾರ ಗೋವಾ ರಾಜ್ಯದ ಪೋಂಡಾ ಕವಳೆ ಮಠದ ಕೇಂದ್ರೀಯ ಶಾಖಾ ಮಠದಲ್ಲಿ ಪ್ರಾರಂಭಗೊಂಡಿತು.

Advertisement

ಶ್ರೀಗಳು ಈ ಸಂದರ್ಭ ಆಶೀರ್ವಚನ ನೀಡಿ, ರಜತ ವರ್ಷದ ಚಾತುರ್ಮಾಸ್ಯ ವ್ರತದ ಯಶಸ್ಸಿಗೆ ಮಠದ ಭಕ್ತರ ಸಂಪೂರ್ಣ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.

ಬೆಳ್ಳಿಹಬ್ಬದ ಸವಿನೆನಪಿಗಾಗಿ ಶ್ರೀ ಮಠದ ಕುಳಾವಿಗಳಾದ ಭಾಸ್ಕರ ಕಾಮತ್‌ ಶಿವಮೊಗ್ಗ ಅವರು ಶ್ರೀಗಳಿಗೆ ರಜತ ಕಿರೀಟ, ಮುಂಬಯಿ ಮುಳುಂಡ್‌ನ‌ ಅನಂತ ಪೈ ಸ್ವರ್ಣ ಪಾದುಕೆ ಮತ್ತು ಚಿನ್ನದ ಬ್ರಾಸ್‌ಲೆಟ್ ಸಮರ್ಪಣೆ ಮಾಡಿದರು. ಶ್ರೀ ಮಠದ ಮಹಾದ್ವಾರದ ಉದ್ಘಾಟನೆಗೊಂಡಿತು.

ಶ್ರೀ ಮಠದ ಶಿಷ್ಯ ವರ್ಗದವರು ಪಾಲ್ಗೊಂಡಿದ್ದರು.ಚಾತುರ್ಮಾಸ್ಯ ಸಮಿತಿಯ ಪ್ರ.ಕಾರ್ಯದರ್ಶಿ ನರೇಶ್‌ ಆರ್‌. ಕಿಣಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next