Advertisement

ಮೂರು ಕಡೆ ಶುಶ್ರೂಷಾ ಕೇಂದ್ರ ಆರಂಭ

09:19 PM Jan 18, 2022 | Team Udayavani |

ಹುಬ್ಬಳ್ಳಿ: ರೈಲ್ವೆ ಸಿಬ್ಬಂದಿ ಆರೋಗ್ಯ ರಕ್ಷಣೆ ಹಾಗೂ ಮೂರನೇ ಅಲೆ ಸವಾಲು ಎದುರಿಸಲು ನೈಋತ್ಯ ರೈಲ್ವೆ ವಲಯ ಸನ್ನದ್ಧವಾಗಿದ್ದು, ಮೂರು ವಿಭಾಗಗಳಲ್ಲಿ ಕೋವಿಡ್‌ ಶುಶ್ರೂಷಾ ಕೇಂದ್ರ ಆರಂಭಿಸಿದೆ. ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಕೋವಿಡ್‌ ಶುಶ್ರೂಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆ, ಬೆಂಗಳೂರು ಹಾಗೂ ಮೈಸೂರುಗಳ ವಿಭಾಗೀಯ ರೈಲ್ವೆ ಆಸ್ಪತ್ರೆಗಳಲ್ಲಿ ಕ್ರಮವಾಗಿ 100, 149 ಹಾಗೂ 74 ಹಾಸಿಗೆಗಳನ್ನು ಕೋವಿಡ್‌-19ರ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ.

Advertisement

ಈ ಮೂರೂ ಆಸ್ಪತ್ರೆಗಳಲ್ಲಿ “μàವರ್‌ ಕ್ಲಿನಿಕ್‌’ಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಶಂಕಿತ ಪ್ರಕರಣಗಳಲ್ಲಿ ಆರ್‌ಎಟಿ ಹಾಗೂ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆ ದಾಖಲಾತಿಯ ಅವಶ್ಯಕತೆಯಿಲ್ಲದ ರೋಗಿಗಳಿಗೆ μàವರ್‌ ಕ್ಲಿನಿಕ್‌ಗಳಲ್ಲಿ ಅಗತ್ಯವಾದ ಔಷಧ ವಿತರಿಸಲಾಗುತ್ತಿದೆ. ಎಲ್ಲಾ ತೀವ್ರ ಶುಶ್ರೂಷಣಾ ಘಟಕ(ಇಂಟೆನ್ಸಿವ್‌ ಕೇರ್‌ ಯೂನಿಟ್‌)ಗಳಿಗೆ ವೆಂಟಿಲೇಟರ್‌ ವ್ಯವಸ್ಥೆ ಒದಗಿಸಲಾಗಿದೆ. ಪ್ರಸ್ತುತ ನೈಋತ್ಯ ರೈಲ್ವೆಯಲ್ಲಿ 300 ಸಕ್ರಿಯ ಪ್ರಕರಣಗಳಿದ್ದು, ಇವುಗಳಲ್ಲಿ ರೈಲ್ವೆ ಸಿಬ್ಬಂದಿ, ಅವರ ಕುಟುಂಬದ ಅರ್ಹ ಸದಸ್ಯರು, ನಿವೃತ್ತ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಇದ್ದಾರೆ. ಮೂರೂ ಆಸ್ಪತ್ರೆಗಳಲ್ಲಿ ಔಷಧೀಯ ಆಮ್ಲಜನಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ.

ಇವುಗಳಲ್ಲಿ 500ಎಲ್‌ಪಿಎಂ ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕಗಳು ಲಭ್ಯವಿದ್ದು, ಹಾಸಿಗೆಗಳಿಗೆ ಕೊಳವೆಯ ಮೂಲಕ ಆಮ್ಲಜನಕ ಸರಬರಾಜಿನ ವ್ಯವಸ್ಥೆ ಏರ್ಪಡಿಸಲಾಗಿದೆ. ಜತೆಗೆ ಬೆಂಗಳೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ 1ಕಿ.ಲೀ. ಸಾಮರ್ಥಯದ 2 ಆಮ್ಲಜನಕದ ಟ್ಯಾಂಕ್‌ ಗಳನ್ನು ಸ್ಥಾಪಿಸಲಾಗಿದ್ದು, ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆಯಲ್ಲಿ ಜನವರಿ ಅಂತ್ಯದ ವೇಳೆಗೆ 5ಕಿ.ಲೀ. ಸಾಮರ್ಥಯದ ಒಂದು ಆಮ್ಲಜನಕದ ಟ್ಯಾಂಕ್‌ ಸ್ಥಾಪಿಸಲಾಗುವುದು.

ಆಮ್ಲಜನಕದ ಸಿಲಿಂಡರ್‌ಗಳ ಮರು ಭರ್ತಿ ಮಾಡುವಿಕೆ, ಪೂರೈಕೆಯ ಒಪ್ಪಂದವು ಜಾರಿಯಲ್ಲಿದೆ. ಇದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಆಮ್ಲಜನಕ ಸಾಂದ್ರಕಗಳು ಈ ಆಸ್ಪತ್ರೆಗಳಲ್ಲಿ ಸಿದ್ಧವಿವೆ. ಇವುಗಳ ಜತೆಗೆ ಹೆಚ್ಚುವರಿ ಅವಶ್ಯಕತೆಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ರೇಡಿಯೋಗ್ರಾಫರ್‌ ಗಳು, ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ(ಲ್ಯಾಬ್‌ ಟೆಕ್ನಿಷಿಯನ್ಸ್‌) ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ವೆಂಟಿಲೇಟರ್‌ಗಳ ಕಾರ್ಯ ವಿಧಾನ, ಪಿಎಸ್‌ಎ ಆಮ್ಲಜನಕ ಘಟಕಗಳು ಹಾಗೂ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ (ಎಲ್‌ಎಂಒ) ಕಾರ್ಯವಿಧಾನಗಳನ್ನು ಕುರಿತು ಸಿಬ್ಬಂದಿಗೆ ಸಮರ್ಪಕ ತರಬೇತಿ ನೀಡಲಾಗಿದೆ. ನೈಋತ್ಯ ರೈಲ್ವೆಯ ಶೇ.99.59 ಸಿಬ್ಬಂದಿಗೆ ಲಸಿಕೆಯ ಮೊದಲನೆಯ ಡೋಸ್‌ ಹಾಗೂ ಶೇ.97.04 ಸಿಬ್ಬಂದಿಗೆ ಎರಡನೆಯ ಡೋಸ್‌ ನೀಡಲಾಗಿದೆ.

ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮುನ್ನೆಚ್ಚರಿಕೆಯ ಡೋಸ್‌ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಚಾಲನಾ ಸಿಬ್ಬಂದಿ, ಗಾರ್ಡ್‌ಗಳು ಹಾಗೂ ನಿರ್ವಹಣಾ ಸಿಬ್ಬಂದಿಗೆ ಲಸಿಕೆ ನೀಡಿ ಅವರ ಆರೋಗ್ಯ ಕುರಿತಾಗಿ ಆಡಳಿತ ವರ್ಗವು ವಿಶೇಷ ಕಾಳಜಿ ವಹಿಸುತ್ತಿದೆ. ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು, ಡಾ| ವಿಲಾಸ ಗುಂಡ ನೇತೃತ್ವದಲ್ಲಿ ವಲಯದ ವೈದ್ಯಕೀಯ ವಿಭಾಗವು ಪ್ರಸ್ತುತ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಸಿದ್ಧವಾಗಿದೆ. ಕೋವಿಡ್‌-19ರ ಹಿಂದಿನ ಅಲೆಗಳಂತೆಯೇ ಈ ಬಾರಿಯೂ ಜನಸಾಮಾನ್ಯರ ಅನುಕೂಲತೆಗಾಗಿ ರಾಷ್ಟ್ರದ ಸಂಚಾಲನಾ ವ್ಯವಸ್ಥೆ ಅಡೆತಡೆ ಇಲ್ಲದೆ ಸಾಗಿಸುವ ತನ್ನ ಗುರಿಗೆ ನೈಋತ್ಯ ರೈಲ್ವೆ ಬದ್ಧವಾಗಿದೆ. ಪ್ರಯಾಣಿಕರು ರೈಲು ಪ್ರಯಾಣದಲ್ಲಿ ಕೋವಿಡ್‌ನ‌ ಸೂಕ್ತ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸಿ ರೈಲ್ವೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next