Advertisement
ರೈತರು ಹೊಲ ಹಸನು ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ ಮೇ ತಿಂಗಳ ವಾಡಿಕೆ ಮಳೆ 135 ಮಿಮೀ ಇದ್ದು, ಜೂ.7ರವರೆಗೆ144 ಮಿಮೀ ಮಳೆಯಾಗಿದೆ. ಈ ಮಳೆ ಭೂಮಿ ಸಿದ್ಧಪಡಿಸಲು ಹಾಗೂ ಬಿತ್ತನೆಗೆ ಪೂರಕವಾಗಿದೆ. ತಾಲೂಕಿನಲ್ಲಿ 90,475 ಹೆಕ್ಟೇರ್ ಭೌಗೋಳಿಕ ಕ್ಷೇತ್ರಹೊಂದಿದ್ದು, ಇದರಲ್ಲಿ 68,900 ಹೆಕ್ಟೇರ್ ಸಾಗುವಳಿ ಕ್ಷೇತ್ರ ಇರುತ್ತದೆ. ತಾಲೂಕಿನಲ್ಲಿ 53,391 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಭತ್ತ 6,250 ಹೆಕ್ಟೇರ್, ಗೋವಿನಜೋಳ39,000 ಹೆಕ್ಟೇರ್, ಹತ್ತಿ 970 ಹೆಕ್ಟೇರ್, ಶೇಂಗಾ 900 ಹೆಕ್ಟೇರ್, ಹೆಸರು 200 ಹೆಕ್ಟೇರ್, ಸೂರ್ಯಕಾಂತಿ 115 ಹೆಕ್ಟೇರ್, ತೊಗರಿ 2,575 ಹೆಕ್ಟೇರ್, ಜೋಳ 400 ಹೆಕ್ಟೇರ್, ರಾಗಿ 50 ಹೆಕ್ಟೇರ್, ತೃಣಧಾನ್ಯ 100 ಹೆಕ್ಟೇರ್, ಇತರೆ ಬೆಳೆಗಳು 1181 ಹೆಕ್ಟೇರ್, ಕಬ್ಬುಹೊಸದು 200 ಹೆಕ್ಟೇರ್, ಕುಳೆ ಕಬ್ಬು 1450 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ.
Related Articles
Advertisement
ಹೆಚ್ಚಿನ ಮಳೆಗೆ ಈರುಳ್ಳಿ-ಬೆಳ್ಳುಳ್ಳಿ ಹೊಲದಲ್ಲಿಯೇ ಕೊಳೆತು ಹೋಯಿತು. ದರ ಕೂಡ ಸಿಗಲಿಲ್ಲ. ಲಾಕ್‌ಡೌನ್‌ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಯಿತು ಎನ್ನುತ್ತಾರೆ ತಾಲೂಕಿನ ಮಾಕನೂರು ಗ್ರಾಮದ ರೈತ ಈರಣ್ಣ ಹಲಗೇರಿ ತಿಳಿಸಿದರು.
ಹಾವೇರಿಯ ಫೆಡರೇಷನ್‌ನಲ್ಲಿ ಗೊಬ್ಬರ ಸಾಕಷ್ಟು ದಾಸ್ತಾನು ಇದೆ. ತಾಲೂಕಿಗೆ 18,900 ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇದೆ.ಕೃಷಿ ಪರಿಕರ ಮಾರಾಟಗಾರರು ಎಂಆರ್‌ಪಿ ದರದಲ್ಲಿ ಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.-ಎಚ್.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ
-ಮಂಜುನಾಥ .ಎಚ್.ಕುಂಬಳೂರ