ಭೋಪಾಲ್: ಪತ್ನಿ ಬೆನ್ನು ನೋವಿನಿಂದ ಒದ್ದಾಡುತ್ತಿದ್ದಾಳೆ ಎನ್ನುವ ಕಾರಣಕ್ಕೆ ಭಿಕ್ಷುಕನೊಬ್ಬ 90 ಸಾವಿರ ರೂ. ಬೆಲೆಯ ದಿವ್ಯಾಂಗರ ಬೈಕ್ ಖರೀದಿಸಿದ್ದಾನೆ.
ಮಧ್ಯಪ್ರದೇಶದ ಚಿಂದ್ವಾರಾದ ನಿವಾಸಿಯಾಗಿರುವ ಸಂತೋಷ್ ಕುಮಾರ್ ಸಾಹು ದಿವ್ಯಾಂಗನಾಗಿದ್ದು, ಆತನ ಪತ್ನಿ ಮುನ್ನಿ ಆತನನ್ನು ಕೈಗಾಡಿಯಲ್ಲಿ ಕೂರಿಸಿಕೊಂಡು ನಗರದಲ್ಲಿ ಭಿಕ್ಷೆ ಬೇಡಿಕೊಂಡಿದ್ದರು. ಆದರೆ ಇತ್ತೀಚೆಗೆ ಮುನ್ನಿಗೆ ಬೆನ್ನು ನೋವು ಹೆಚ್ಚಾದ್ದರಿಂದಾಗಿ ಗಾಡಿ ತಳ್ಳಲು ಆಗುತ್ತಿರಲಿಲ್ಲವಂತೆ.
ಹಾಗಾಗಿ ಸಂತೋಷ್ 90,000 ರೂ. ಕೊಟ್ಟು ಬೈಕ್ ಖರೀದಿಸಿದ್ದಾನೆ. ಅದಕ್ಕೆಂದೇ ಕಳೆದ ನಾಲ್ಕು ವರ್ಷಗಳಿಂದ ಹಣ ಸಂಗ್ರಹಿಸಿಟ್ಟಿದ್ದಾಗಿ ಹೇಳಿಕೊಂಡಿದ್ದಾನೆ. ದಂಪತಿಯು ಪೂಜೆ ಮಾಡಿರುವ ಬೈಕ್ ಏರಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೈಕ್ ಖರೀದಿಸಿದ್ದರಿಂದಾಗಿ ಇದೀಗ ಬೇರೆ ನಗರಗಳಿಗೂ ಹೋಗಿ ಭಿಕ್ಷೆ ಬೇಡಲು ಅನುಕೂಲವಾಗಿದೆ ಎನ್ನುತ್ತಾರೆ ಸಂತೋಷ್ ದಂಪತಿ.