Advertisement

ಪ್ರಕೃತಿ ಎದುರು ನಿನ್ನದೇನಿದೆ ಮನುಜ?

04:31 PM Apr 16, 2021 | Team Udayavani |

ಜಗತ್ತಿನ ಸಕಲ ಚರಾಚರ ಜೀವಿಯು ಬದುಕುತ್ತಿರುವುದು ಭೂತಾಯ ಮಡಿಲಲ್ಲೇ.

Advertisement

ಹಾಗೆ ನಾವೆಲ್ಲ ಪ್ರಕೃತಿಮಾತೆಯ ಮಕ್ಕಳಿದ್ದಂತೆ. ಇದರಂತೆ ನಮ್ಮ ಪ್ರತಿ ಉಸಿರಿಗೂ ಉಸಿರಾಗಿರುವ ಜೀವವಾಯು ವೃಕ್ಷಗಳಿದ್ದಲ್ಲೇ ನಾವು ಎಂಬುದನ್ನು ಮನಗಂಡರೂ ಮೂರ್ಖತನದಲ್ಲೇ ಬದುಕುತ್ತಿದ್ದೇವೆ.

ಪ್ರಕೃತಿ ಎಂಬುದು ಸ್ವತಂತ್ರವಾದ ಸೃಷ್ಟಿ, ನಾವು ಪ್ರಕೃತಿಯ ಜೀವಸಂಕುಲದೊಳು ಉಗಮವಾದ ಮನುಷ್ಯ ಜೀವಿ ಎಂಬ ಒಂದು ನೆಪ ಮಾತ್ರ. ಪ್ರಕೃತಿ ಎದುರು ನಮ್ಮ ಸ್ವಾರ್ಥದ ಹೋರಾಟವೆಲ್ಲ ಶೂನ್ಯ. ನಮ್ಮಿಂದಲೇ ಪ್ರಕೃತಿ ಎಂಬುದು ಸಲ್ಲ. ಭೂರಮೆಯು ಕಾಲಕಾಲಕ್ಕೆ ತನ್ನ ಸಮತೋಲನವನ್ನು ಕಾಪಾಡಿಕೊಂಡೇ ಬರುತ್ತಿದೆ.

ಇವುಗಳ ಮಧ್ಯೆ ಅತಿಯಾಗಿ ಆಗುವ ಪ್ರವಾಹ, ನೆರೆಹಾವಳಿ, ಅತಿವೃಷ್ಟಿ ಹೀಗೆ ಅನೇಕ ಭೀಕರ ಅಪಘಾತದ ಪ್ರಸಂಗಗಳು ನಡೆಯುವುದು ಯಾತಕ್ಕೆ? ಎಂದು ಪ್ರಶ್ನೆ ಎದುರಾದಾಗ ಅದಕ್ಕೆ ಮೂಲ ಕಾರಣ ಮನುಷ್ಯನೇ ಹೊರತು ಮತ್ತೂಂದಲ್ಲ. ಹಾಗೆ ಆಧುನಿಕತೆಯಲ್ಲಿ ಬದುಕುತ್ತಿರುವ ನಾವು ಹೊಸತನ್ನೇ ಅರಸುತ್ತಿರುತ್ತೇವೆ. ವಿಭಿನ್ನತೆಯ ಜೀವನ ಶೈಲಿಯನ್ನೇ ಬಯಸುತ್ತಿರುತ್ತೇವೆ. ಹಿಂಸೆ, ಸ್ವಾರ್ಥದಿಂದಾದರೂ ಬಯಸಿದ್ದನ್ನು ತಮ್ಮಿಷ್ಟದಂತೆ ಪಡೆದೇ ತೀರುತ್ತೇವೆ.

ತ್ರೇತಾಯುಗದ ರಾಮಾಯಣದಲ್ಲಿ ಧರ್ಮದ ವಿರುದ್ಧ ನಿಂತು ಸಮರಗೈದವರು ನೆಲಕಚ್ಚಿರುವುದು ಮತ್ತು ದ್ವಾಪರಯುಗದ ಮಹಾಭಾರತದಲ್ಲಿ ಹೆಣ್ಣಿಗಾಗಿ ದುಷ್ಟರಾಗಿ ಯುದ್ಧಕಿಳಿದವರೇ ನಾಶವಾದರು. ಇನ್ನು ಅಧರ್ಮ ಅಳಿದು ಧರ್ಮಕ್ಕೆ ಜಯವಾಗಬೇಕಾದರೆ ಅನ್ಯಾಯಗೈದವರೇ ಮಣ್ಣು ಪಾಲಾದರು.

Advertisement

ಇವೆಲ್ಲವೂ ನಮಗೆ ನಿದರ್ಶನವಾದರೂ ಕಲಿಯುಗದಲ್ಲೂ ಆ ದುಷ್ಟತನದ ಚಾಪು ಬೀಸದೆ ಇದ್ದಿಲ್ಲ. ಪ್ರಕೃತಿಯ ಮಡಿಲೊಳಗಿನ ಪ್ರತಿಯೊಂದು ವಸ್ತುವು ನಮ್ಮ ಒಳಿತೊಂದಿಗಿನ ಉಪಯೋಗಕ್ಕೆ ಹೊರತು ದುರುಪಯೋಗಕ್ಕಲ್ಲ. ಬುದ್ಧಿಜೀವಿಯಾದ ಮಾತ್ರಕ್ಕೆ ಎಲ್ಲ ಅಸ್ತ್ರಗಳು ನಮ್ಮಲ್ಲಿರುವವೆಂದು ಗರ್ವ ಪಡುವುದು ಸಲ್ಲ. ಕೊನೆಗೊಂದು ಮೋಕ್ಷದ ಅಸ್ತ್ರ ನಮ್ಮ ಕೈಲಿಲ್ಲವೆಂಬುದ ತಿಳಿದೊಡೆ ಮಾನವನ ಸತ್ವವಿದೆ ಎಂಬುದು ಸತ್ಯವಾಗುತ್ತದೆ.

ಫ್ಯಾಶನ್‌ ಪ್ರಪಂಚಕ್ಕೆ ಮೊರೆಹೋಗಿ ಮತ್ತೂಂದೆಡೆ ಅಭಿವೃದ್ಧಿಯೆಡೆ ಸಾಗುವ ನೆಪದಲ್ಲಿ ಸಮೃದ್ಧಿಯ ಮೇಲೆ ಹಿಡಿತ ಸಾಧಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?ಭಾರತದಲ್ಲಿ ಪರಿಸರ ವಿಶಾಲತೆ, ಸಮೃದ್ಧಿಯಿಂದ ಕೂಡಿದ್ದರೂ ಅರಣ್ಯಗಳು ತಮಗೆದುರಾದ ಶೋಚನೀಯ ಸ್ಥಿತಿಯ ಬಗ್ಗೆ ರೋಧಿಸುತ್ತಿದ್ದರೆ, ನಮ್ಮ ಅಳಿವಿನ ಸಮಯವೇ ಹತ್ತಿರದಲ್ಲಿದೆ ಎಂದು ಮನಕಲಕುತ್ತದೆ.

ಯಜಮಾನನಲ್ಲ
ಪರಿಸರ ಹಾನಿಗೆ ಕಾರಣವಾದವರಿಗೆ ಸರಕಾರ ವೇ ಬಿಗುವಾದ ಕ್ರಮ ಕೈಗೊಳ್ಳಬೇಕು ಎನ್ನುವುದು ಪರಿಸರ ಪ್ರೇಮಿ ಮತ್ತು ಪರಿಸರ ವಾದಿಗಳ ಅಪೇಕ್ಷೆ. ಪ್ರಕೃತಿಯೊಂದಿಗಿನ ಚೆಲ್ಲಾಟ, ತಿರಸ್ಕಾರದ ಬುದ್ಧಿ ಯಾವ ಕಾಲಕ್ಕೂ ಒಳಿತಲ್ಲ ಎಂಬುದನ್ನು ಮನುಜ ತಿಳಿಯಲೇ ಬೇಕಾಗಿದೆ. ಇಂದು ಆಗುತ್ತಿರುವ ಪ್ರಕೃತಿಯ ಅಸಮತೋಲನದ ಬಗ್ಗೆ ಕಿಂಚಿತ್ತಾದರೂ ಅವಲೋಕಿಸಬೇಕು. ಪ್ರಕೃತಿ ಇದ್ದರಷ್ಟೇ ನಾವು. ನಮ್ಮ ಆಸಕ್ತಿ, ಅತಿಯಾದ ಆಶಾಮನೋಭಾವನೆಯಿಂದ ಆಗುವ ದುರಂತಗಳ ಬಗ್ಗೆ ತಿಳಿದು ಮುನ್ನುಗ್ಗಿದರೆ ಜೀವಹಾನಿಯನ್ನು ತಪ್ಪಿಸಬಹುದು. ರಾಷ್ಟ್ರಕ್ಕೆ ಏನನ್ನು ಕೊಡದಿದ್ದರೂ ಒಳ್ಳೆಯ ನಾಗರಿಕನಾಗಿ ಯಾವುದನ್ನು ಹಾನಿಗೊಳಪಡಿಸುವುದಿಲ್ಲ ಎಂದು ಪ್ರತಿಜ್ಞೆಗೈದರೆ ಬಹು ಉತ್ತಮ. ಪ್ರಕೃತಿಯ ಕೂಸು ಮಾನವ, ಹೊರತು ಯಜಮಾನನಲ್ಲ ಎಂಬುದನ್ನು ಮನಸ್ಸಿನಾಳದಿಂದ ಅರಿಯಲೇಬೇಕು.

18ನೇ ಶತಮಾನದಲ್ಲಿ ಅನನ್ಯ ಜೀವಸಂಕುಲಗಳಿಂದ ಸಮೃದ್ಧವಾಗಿದ್ದ ಪಶ್ಚಿಮಘಟ್ಟ ಶ್ರೇಣಿಯ ನಡುವೆ ಒಂದು ದಟ್ಟ ಅರಣ್ಯ ಪ್ರದೇಶ ಇತ್ತೆಂದು ತಿಳಿದುಬರುತ್ತದೆ. ಗಗನಚುಂಬಿ ಮರಗಳ ಮೇಲ್ಛಾವಣಿಯನ್ನು ಭೆೇದಿಸಿ, ಭೂಸ್ಪರ್ಶ ಮಾಡಲು ಸೂರ್ಯನ ಕಿರಣಗಳು ಸೆಣೆಸುತ್ತಿದ್ದ ವಿಶಾಲವಾದ ಕಾಡಾಗಿತ್ತದು. ನಡುನಡುವೆ ರೋಚಕತೆಯಿಂದ ಕೂಡಿದ ಪ್ರರ್ವತ ಶ್ರೇಣಿಗಳು, ಹರಿವ ಹಳ್ಳ-ಕೊಳ್ಳಗಳು… ಕಗ್ಗತ್ತಲ ಖಂಡ ಎಂದು ಹೆಸರಾಗಿದ್ದ ಆಫ್ರಿಕಾದಂತೆ ಇತ್ತದು. ಆದರೆ ಈ ದಟ್ಟವಾದ ಅರಣ್ಯದ ಸೌಂದರ್ಯವನ್ನು ಸಹಿಸದ ಪರದೇಶಿ ಪಾಪಿಗಳು ನಮ್ಮನ್ನಷ್ಟೆ ಆಳಲಿಲ್ಲ.

ಪ್ರಕೃತಿಯನ್ನೂ ಬಿಡದ ಕ್ರೂರಿಗಳಾದ ಬ್ರಿಟಿಷರ ಓರ್ವಅಧಿಕಾರಿ ಕಾರ್ವೆಲ್‌ ಮಾರ್ಷ ಅರಣ್ಯದೊಳಗೆ ಹೊಕ್ಕು ಹೊಸತನ್ನು ಅನ್ವೇಷಿಸುವ ನೆಪದಲ್ಲಿ ಇಡೀ ವನವನ್ನೆ ನಾಶಪಡಿಸಿದ. ನೂರಾರು ವರ್ಷಗಳಿಂದ ಹುಲುಸಾಗಿ ಬೆಳೆದಿದ್ದ ದಟ್ಟವಾದ ವೃಕ್ಷ ಸಂಪತ್ತು ನೆಲಸಮವಾಗಿ, ಚಹಾಗಿಡಗಳನ್ನು ಬೆಳೆಸಲಾರಂಭಿಸಿ ಕೈಗಾರಿಕೋದ್ಯಮ ಚಾಲನೆಗೆ ತಂದು ವಾಲ್‌ ಪರೈನ ಹಿಂದಿನ ಸೊಬಗು ಮತ್ತು ವೈಭವದ ಸಣ್ಣ ಕುರುಹು ಉಳಿಯದಂತೆ ತಮ್ಮದೇ ಛಾಚಾಪನ್ನು ಮೂಡಿಸಲು ಹೋದ. ಇದರಿಂದಾದ ಬಹುದೊಡ್ಡ ಪರಿಣಾಮ ಎಂದರೆ ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿದ್ದ ಜೀವಸಂಕುಲಗಳು ಅಳಿದವು; ಹಂತ-ಹಂತವಾಗಿ ಅವನತಿ ಹೊಂದುತ್ತಾ ಬಂದವು. ಶ್ರಮಿಕ ವರ್ಗದ ಜನರ ಜೀವನೋಪಾಯಕ್ಕೆ ಪೆಟ್ಟು ಬಿದ್ದಂತಾಯ್ತು.

ಅದಕ್ಕಾಗಿಯೇ ಕಾಡಿನ ರಕ್ಷಣೆಗಾಗಿ ಚಿಪ್ಕೊ ಚಳವಳಿ ರೂಪುಗೊಂಡಿತು. ಇದರ ಪ್ರಮುಖ ನಾಯಕರು ಸುಂದರ್‌ ಲಾಲ್‌ ಬಹುಗುಣ ಹಾಗೆ ಉತ್ತರ ಕನ್ನಡದಲ್ಲಿ ನಡೆದ ಅಪ್ಪಿಕೊ ಚಳವಳಿಯ ಸಂದರ್ಭದಲ್ಲಿ ಮರಗಳನ್ನು ಕಡಿಯಲು ಯತ್ನಿಸಿದಾಗ ಮರಗಳನ್ನು ಅಪ್ಪಿಕೊಳ್ಳುವುದರ ಮೂಲಕ ಅರಣ್ಯದ ಉಳಿವಿಗಾಗಿ ಹೋರಾಟದತ್ತ ಹೆಜ್ಜೆ ಹಾಕಿ ಜೀವನವನ್ನೇ ಪರಿಸರದ ಸಂರಕ್ಷಣೆಯತ್ತ ಸಮರ್ಪಿಸಿದಂತಹ ಮಹನೀಯರ ಸಮರ್ಪನೀಯ ಮಹತ್ಕಾರ್ಯವನ್ನು ಸ್ಮರಿಸುತ್ತ ಮಂಕು ಬಡಿದ ನಮ್ಮ ಬುದ್ಧಿಗೆ ಅರಿವಾಗಬೇಕು.

ಸಂಪನ್ಮೂಲಗಳ ಕಳ್ಳಸಾಗಾಣಿಕೆ, ಮೂಕ ಜೀವಿಯ ಮೇಲೆ ಎಸಗುವ ಪ್ರಹಾರ ಕೊನೆಗೆ ನಮಗೇ ಮುಳುವಾಗುತ್ತದೆ. ಹಾಗೆ ದುರುಳ ಬುದ್ಧಿ, ಸ್ವಾರ್ಥದಿಂದ ತಾತ್ಕಾಲಿಕದ ನಮ್ಮ ಜೀವನದ ಸುಖ ಭೋಗಗಳಿಗೆ, ನಮ್ಮ ಜೀವಂತಿಕೆಗೆ ಕಾರಣವಾದ ಜೀವ ಸಂಪತ್ತನ್ನು ನಾಶ ಮಾಡುವುದೆಂದರೆ ಒಂದು ಜೀವಿಯ ಮೇಲೆ ಪಾಪದ ಕೃತ್ಯ ಎಸಗಿದಂತೆ.


ಮೇಘನಾ ಕರಿಸೋಮನಗೌಡ್ರ

ವಿದ್ಯಾ ಭಾರತಿ ಕಾಲೇಜು, ಸವಣೂರ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next