Advertisement
ವಿಳಾಸ ನೋಡಿಹಣಕಾಸು ವ್ಯವಹಾರ ನಡೆಸುವ ಸಂದರ್ಭ ಆನ್ ಲೈನ್ ತಾಣ ಅಥವಾ ಬ್ಯಾಂಕ್ ವೆಬ್‌ಸೈಟ್ ತೆರೆ ಯುವಾಗ ಅದರ ವಿಳಾಸವನ್ನು (ಯು.ಆರ್.ಎಲ್) ಪರೀಕ್ಷಿಸಿ. ಮೋಸಗಾರರು ಬ್ಯಾಂಕ್ ವೆಬ್‌ಸೈಟ್‌ನೆ°à ಹೋಲುವ ನಕಲಿ ತಾಣಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಅದರಲ್ಲಿ ವೈಯಕ್ತಿಕ ಮಾಹಿತಿ ನೀಡಿದರೆ ಅದನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ವಿಳಾಸ ನೋಡಿದರೆ ಅಸಲೀಯತ್ತು ಗೊತ್ತಾಗುತ್ತದೆ.
ವೈಯಕ್ತಿಕ ವ್ಯವಹಾರ ನಡೆಸಲು ಸುರಕ್ಷಿತ ಸ್ವಂತ ನೆಟ್‌ವರ್ಕ್ ಬರುವವರೆಗೆ ಕಾಯುವುದು ಉತ್ತಮ. ಸಾರ್ವಜನಿಕ ವೈಫೈಗಳಲ್ಲಿ ಹಣಕಾಸು ವ್ಯವಹಾರ ಗಳನ್ನು ಮಾಡದಿರುವುದು ಹೆಚ್ಚು ಸೂಕ್ತ. ನಿಬಂಧನೆಗಳನ್ನು ತಿಳಿದುಕೊಳ್ಳಿ
ಶಾಪಿಂಗ್ ಮಾಡುವಾಗ, ಗ್ರಾಹಕರು ಪಾಲಿಸಬೇಕಿರುವ ನಿಬಂಧನೆಗಳ ಪಟ್ಟಿಯನ್ನು ಸಾಮಾನ್ಯ ವಾಗಿ ಯಾರೂ ಓದುವುದಿಲ್ಲ. ಆದರೆ ಅದನ್ನು ಓದುವುದರಿಂದ ತಿಳಿವಳಿಕೆ ಮತ್ತು ಜಾಗೃತಿ ಹೆಚ್ಚುತ್ತದೆ. ಆಯಾ ಉತ್ಪನ್ನದ ಕುರಿತಂತೆ ಬಳಕೆ ದಾರರ ರಿವ್ಯೂಗಳನ್ನು ಓದಿ.
Related Articles
ವಿಶೇಷ ಡೀಲ್‌ಗಳು, ದರ ಕಡಿತ ಮಾರಾಟ ಅಥವಾ ಇನ್ನಾವುದೋ ಆಕರ್ಷಕ ಜಾಹೀರಾತಿಗೆ ಮರುಳಾಗಿ ಬ್ರೌಸರ್ ಬದಿಯಲ್ಲಿ ಕಾಣುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಅದರಿಂದ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಮಾಲ್ ವೇರ್‌ಗಳು, ವೈರಸ್‌ಗಳು ದಾಳಿ ನಡೆಸಬಹುದು. ಅವು ಸ್ಮಾರ್ಟ್ ಫೋನಿನಲ್ಲಿನ ಸೂಕ್ಷ¾ ಮಾಹಿತಿಯನ್ನು ಕದ್ದು ಮೂರನೆಯವರಿಗೆ ಕೊಡಬಹುದು. ಇದರಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ.
Advertisement
ಇ ಮೇಲ್ ಗಾಳನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ. ಬಹುಮಾನದ ಮೊತ್ತ ನಿಮಗೆ ತಲುಪಲು ನಿರ್ದಿಷ್ಟ ಮೊತ್ತ ವನ್ನು ಡೆಪಾಸಿಟ್ ಆಗಿ ಕೊಡಬೇಕು. ಅನಂತರ ಅದನ್ನು ಮರಳಿಸಲಾಗುವುದರಿಂದ ಈ ರೀತಿಯ ಇ-ಮೇಲ್ ಕಳಿಸಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಇಂಥ ಇಮೇಲ್‌ಗಳಿಗೆ ಪ್ರತಿಕ್ರಿಯಿಸಲು ಹೋಗಬಾರದು.