Advertisement
ಗಮ್ಯ ಸ್ಥಳದ ಮಾಹಿತಿ ಇರಲಿನೀವು ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಯೋಜನೆ ಇದ್ದರೆ ವಾಸ ಸ್ಥಾನದ ಬಗ್ಗೆ ಮಾಹಿತಿ ಕಲೆ ಹಾಕಿ. ಅಲ್ಲಿನ ಸಾರಿಗೆ ವ್ಯವಸ್ಥೆ, ಶಿಕ್ಷಣ ಸಂಸ್ಥೆಯಿಂದ ವಾಸ ಸ್ಥಾನಕ್ಕಿರುವ ದೂರ ಮುಂತಾದ ಸಂಗತಿಗಳನ್ನು ಮೊದಲೇ ತಿಳಿದುಕೊಳ್ಳಿ. ಯು.ಎಸ್. ಸ್ಟೇಟ್ ಡಿಪಾರ್ಟ್‌ಮೆಂಟ್ ನಿಯಮಿತವಾಗಿ ಆಯಾ ದೇಶಗಳಿಗೆ ಪ್ರಯಾಣದ ಮಾಹಿತಿಯನ್ನು ನೀಡುತ್ತಿರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.
ಪ್ರತಿ ದೇಶ ಅದರದ್ದೇ ಆದ ಕಾನೂನು ಹೊಂದಿರುತ್ತದೆ ಮತ್ತು ಸ್ಥಳೀಯವಾಗಿ ಅದರದ್ದೇ ಆದ ರೀತಿ ರಿವಾಜುಗಳಿರುತ್ತವೆ. ಆವು ನಮ್ಮಲ್ಲಿರುವುದಕ್ಕಿಂತ ವಿಭಿನ್ನವಾಗಿರಬಹುದು. ಆದ್ದರಿಂದ ಅವುಗಳನ್ನು ಅರಿತಿರುವುದು ಅನಿವಾರ್ಯ. ಹೀಗಾಗಿ ಈ ಬಗ್ಗೆ ಮೊದಲೇ ಮಾಹಿತಿ ಕಲೆ ಹಾಕಿ. ಇನ್ನು ಕೆಲವು ದೇಶಗಳಲ್ಲಿ ಸೂಕ್ಷ್ಮ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಶಿಕ್ಷಾರ್ಹವಾಗಿರುತ್ತದೆ. ಉದಾಹರಣೆಗೆ ಅಮೇರಿಕದಲ್ಲಿ ಚೀನಾದ ಟಿಬೆಟಿಯನ್ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಬಂಧಿಸಲಾಗುತ್ತದೆ. ಇಂತಹ ವಿಚಾರ ಗಮನದಲ್ಲಿರಲಿ. ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಿ
ವಿದೇಶಕ್ಕೆ ತೆರಳುವ ಮುನ್ನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ರೋಗ ನಿರೋಧಕ ಔಷಧಗಳನ್ನು ತೆಗೆದುಕೊಳ್ಳಿ. ಸಾಧಾರಣ ಆರೋಗ್ಯ ವಿಮೆ ವಿದೇಶಗಳಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಟ್ರಿಪ್ ಇನ್ಸುರೆನ್ಸ್ ಬಗ್ಗೆ ತಿಳಿದುಕೊಳ್ಳಿ. www.insuremytrip.comನಂತಹ ವೆಬ್‌ಸೈಟ್‌ಗಳಿಂದ ವಿಮೆಗಳ ಮಾಹಿತಿ ಪಡೆಯಬಹುದು.
Related Articles
ಪ್ರಧಾನ ದಾಖಲೆಗಳಾದ ಪಾಸ್‌ಪೋರ್ಟ್, ವೀಸಾ ಮುಂತಾದವುಗಳ ಜೆರಾಕ್ಸ್ ಮಾಡಿ ಪ್ರತ್ಯೇಕ ತೆಗೆದಿಡಿ. ಜತೆಗೆ ಇವುಗಳ ಡಿಜಿಟಲ್ ಕಾಪಿ ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರಲಿ. ದಾಖಲೆಗಳು ಕಳೆದು ಹೋದರೆ, ಕಳವಾದರೆ ಇವು ಸಹಾಯಕವಾಗುತ್ತವೆ. ರಾಯಭಾರಿ ಕಚೇರಿಗಳಿಗೆ ನಿಮ್ಮ ಫೋನ್ ನಂಬರ್, ಅಡ್ರೆಸ್ ನೀಡಿ. ಸ್ಥಳೀಯ ಭಾಷೆಗಳ ಅರಿವಿರಲಿ. ಕನಿಷ್ಠ ಪಕ್ಷ ಸಹಾಯ ಕೇಳಿವಷ್ಟಾದರೂ ಭಾಷೆ ಬರುವಂತಿರಲಿ.
Advertisement
ಸುರಕ್ಷತೆಗೆ ಆದ್ಯತೆ ನೀಡಿಎಲ್ಲೇ ಹೋದರೂ ಪಿಕ್ ಪಾಕೆಟ್, ದರೋಡೆ ಎನ್ನುವುದು ಸಾಮಾನ್ಯವಾಗಿರುತ್ತದೆ. ಆದ್ದರಿಂದ ಸಂಚರಿಸುವಾಗ ಎಚ್ಚರಿಕೆ ವಹಿಸಿ. ಅದರಲ್ಲೂ ರಾತ್ರಿ ಒಬ್ಬಂಟಿಯಾಗಿ ಪ್ರಯಾಣಿಸದಿರಿ. ನಿರ್ಲಕ್ಷ್ಯದಿಂದ ಓಡಾಡಬೇಡಿ. ವಾಸ ಸ್ಥಾನದಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿಡಿ. ರಾಜಕೀಯ, ನಾಗರಿಕ ಕಲಹಗಳಿಂದ ದೂರವಿರಿ
ಸಾವಿರಾರು ಜನ ಸೇರುವ ಪ್ರತಿಭಟನೆ, ಸರಕಾರದ ವಿರುದ್ಧದ ಹೋರಾಟದಿಂದ ದೂರವಿರಿ. ಕೆಲವೊಮ್ಮೆ ಪ್ರತಿಭಟನೆ ಹಿಂಸೆಗೆ ತಿರುಗಬಹುದು ಅಥವಾ ಇಲ್ಲಿ ಪಿಕ್‌ಪಾಕೆಟ್ ನಡೆಯಬಹುದು. ಆದ್ದರಿಂದ ಇದರ ತಂಟೆಗೆ ಹೋಗಬೇಡಿ. ಹೀಗೆ ಎಚ್ಚರಿಕೆಯಿಂದ ಇದ್ದರೆ ವಿದೇಶದಲ್ಲಿ ಉತ್ತಮ ಅನುಭವ ನಿಮ್ಮದಾಗುತ್ತದೆ. - ರಮೇಶ್ ಬಳ್ಳಮೂಲೆ