Advertisement
ರಾ.ಹೆದ್ದಾರಿ ಸನಿಹ ಹಸಿಹುಲ್ಲುಸಾಮಾನ್ಯವಾಗಿ ಮಳೆಗಾಲದ ಮೊದಲು ರಾ.ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿರುವ ಹಸಿ ಹುಲ್ಲು ಸಹಿತ ಪೊದೆಗಳನ್ನು ಸ್ವತ್ಛಗೊಳಿಸುವ ಕ್ರಮವಿತ್ತು. ಆದರೆ ಈ ವರ್ಷ ಈ ಕಾರ್ಯ ನಡೆಸದೇ ಇರುವುದರಿಂದ ಗೋವುಗಳು ರಸ್ತೆಗೆ ಬಂದು ಮೇಯುತ್ತಿವೆ. ಜತೆಗೆ ಡಿವೈಡರ್‌ಗೂ ಲಗ್ಗೆ ಹಾಕಿ ಹುಲ್ಲು ತಿನ್ನುತ್ತಿವೆ.
ಕಾನೂನು ಪ್ರಕಾರ ಜಾನುವಾರುಗಳನ್ನು ಮೇವಿಗಾಗಿ ರಸ್ತೆಗೆ ಬಿಡುವಂತಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾ.ಪಂ. ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ ಅದಕ್ಕೆ ಪ್ರತಿಕ್ರಿಯಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ನೋಟಿಸ್ ನೀಡಲಾಗಿದೆ
ಜಾನುವಾರುಗಳು ರಾಷ್ಟ್ರೀಯ ಹೆದ್ದಾರಿ ಸಹಿತ ಮುಖ್ಯ ರಸ್ತೆಯಲ್ಲಿ ಹಿಂಡು ಹಿಂಡಾಗಿ ಸಾಗುತ್ತಿವೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.ಅಪಘಾತಗಳೂ ಸಂಭವಿಸಿ ಜಾನುವಾರು ಹಾಗೂ ಸಂಚಾರಿಗಳಿಗೂ ತೀವ್ರ ಪ್ರಮಾಣದಲ್ಲಿ ಗಾಯಗಳಾಗುತ್ತಿದೆ. ಈ ಬಗ್ಗೆ ಸಾಕುಪ್ರಾಣಿಗಳ ಮಾಲಕರಿಗೆ ನೋಟಿಸ್ ನೀಡಿ ಮುಖ್ಯ ರಸ್ತೆಗೆ ಜಾನುವಾರುಗಳನ್ನು ಬಿಡದಿರುವಂತೆ ಎಚ್ಚರಿಕೆ ನೀಡಲಾಗಿದೆ.
-ಗಣೇಶ,
ಪಿಡಿಒ, ಗೋಪಾಡಿ ಗ್ರಾ.ಪಂ.
Related Articles
ಗಂಡು ಕರುಗಳನ್ನು ಮೇವಿಗಾಗಿ ಬಿಡುವ ಪ್ರವೃತ್ತಿ ಕಂಡು ಬರುತ್ತಿದೆ. ಹಾಗಾಗಿ ವೇಗದಿಂದ ಸಾಗುತ್ತಿರುವ ವಾಹನಗಳ ಎದುರಿಗೆ ಅವುಗಳು ಬಂದು ಅಪಘಾತವಾಗುತ್ತಿದೆ. ರಸ್ತೆಗೆ ದನಗಳನ್ನು ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ. ಇಲಾಖೆಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.
-ವಾಸುದೇವ ಪ್ರಭು,
ಗ್ರಾಮಸ್ಥರು
Advertisement