Advertisement
ಬೀರೂರಿನಲ್ಲಿ ಸಾಮಾನ್ಯವಾಗಿ ಮಳೆಯಾಧಾರಿತ ಕೃಷಿಯೇ ಪ್ರಧಾನವಾಗಿದೆ. ವಾರದ ಮೊದಲು ಬಂದ ಮಳೆಗೆ ರೈತರು ಹೊಲಗಳ ಉಳುಮೆ ಮಾಡಿ ನೆಲವನ್ನು ಹರಗಿಸಿಕೊಂಡು ಬಿತ್ತನೆಗೆಂದು ಅಣಿ ಮಾಡಿಕೊಂಡಿದ್ದರು. ಎರಡು- ಮೂರು ದಿನಗಳಿಂದ ಸಾಧಾರಣ ತುಂತುರು ಮಳೆಯಾಗುತ್ತಿದ್ದು ಪಟ್ಟಣದ ರೈತರು ಸಿದ್ಧಪಡಿಸಿದ್ದ ಹೊಲಗಳಲ್ಲಿ ಕಾಯಕ ಆರಂಭಿಸಿದ್ದಾರೆ. ಬೀರೂರು ಹೋಬಳಿಯಲ್ಲಿ 338 ಹೆಕ್ಟೇರ್ ಈರುಳ್ಳಿ ಬೆಳೆಯುವ ಪ್ರದೇಶವಿದ್ದು, ಸುತ್ತಮುತ್ತಲ ಗ್ರಾಮಗಳಾದ ಜೋಡಿತಿಮ್ಮಾಪುರ, ಯರೇಹಳ್ಳಿ, ದೊಡ್ಡಘಟ್ಟ, ದೋಗಿಹಳ್ಳಿ ಇಂಗ್ಲಾರ್ನಹಳ್ಳಿ ಇನ್ನಿತರ ಗ್ರಾಮಗಳಲ್ಲಿ ಈರುಳ್ಳಿ ಭಿತ್ತನೆ ಆರಂಬಸಿದ್ದಾರೆ. ಅದಲ್ಲದೆ ಇತರೆ ದ್ವಿದಳ ಧಾನ್ಯಗಳಾದ ಉದ್ದು, ಹುರುಳಿ, ಶೇಂಗಾ ಬಿತ್ತುವ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಉಳ್ಳಾ ಗಡ್ಡಿ ಬಿತ್ತನೆಗೆ ಸಿದ್ಧರಾದ ರೈತರು
05:26 PM Jun 05, 2020 | Naveen |
Advertisement
Udayavani is now on Telegram. Click here to join our channel and stay updated with the latest news.