Advertisement

ಬೀರೇಶ್ವರ, ಚನ್ನಕೇಶ್ವರ ದೇಗುಲ ಮುಜರಾಯಿ ಇಲಾಖೆಗೆ ಸೇರಿಸಿ

03:55 PM Mar 13, 2020 | Suhan S |

ಮದ್ದೂರು: ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದ ಶ್ರೀ ಬೀರೇಶ್ವರ ಶ್ರೀ ಚನ್ನಕೇಶ್ವರ ದೇಗುಲವನ್ನು ಸರ್ಕಾರ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಳ್ಳುವಂತೆ ಮಾಜಿ ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

Advertisement

ಜಿಪಂ ಸದಸ್ಯ ಮರಿಹೆಗ್ಗಡೆ ಹಾಗೂ ಎಂ.ಇ.ಅಶೋಕ ಹಾಗೂ ಚನ್ನೇಗೌಡ ಇತರರು ಶ್ರೀಬೀರೇಶ್ವರ- ಚನ್ನಕೇಶ್ವರ ಸೇವಾ ಟ್ರಸ್ಟ್‌ನ್ನು ರಚಿಸಿದ್ದಾರೆ. ಟ್ರಸ್ಟ್‌ ರಚನೆ ನಂತರ ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮತ್ತು ಸರ್ಕಾರದಿಂದ ಕೋಟ್ಯಂತರ ರೂ. ಹಣ ಟ್ರಸ್ಟ್‌ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ದೇಗುಲ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಟ್ರಸ್ಟ್‌ ಖಾತೆಗೆ ಜಮಾ ಮಾಡದೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಕ್ತಾದಿಗಳು ನೀಡಿದ ಚಿನ್ನಾಭರಣ ಸಾರ್ವಜನಿಕರಿಗೆ ಲೆಕ್ಕ ನೀಡದೆ ವಂಚಿಸಿದ್ದಾರೆ. ಕಳೆದ 2016ರ ನವೆಂಬರ್‌ 8ರಂದು ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ಮರಿ ಹೆಗಡೆ ಬೀರೇಶ್ವರ, ಚನ್ನಕೇಶ್ವರ ದೇವಾಲಯದ ಧಾರ್ಮಿಕ ಪದ್ಧತಿ ಮತ್ತು ಸಂಪ್ರದಾಯ ನಡೆಸುವ ಹಕ್ಕು ಟ್ರಸ್ಟ್‌ಗೆ ಇಲ್ಲ. ಆದರೆ, ಅಧಿಕಾರ ಹೆಗಡೆ ಯಜಮಾನರಿಗೆ ಇರುತ್ತದೆ. ಇದರಲ್ಲಿ ಟ್ರಸ್ಟ್‌ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ತಹಶೀಲ್ದಾರ್‌ ಮುಂದೆ ಹೇಳಿಕೆ ನೀಡಿದ್ದರು. ಆನಂತರ ಧಾರ್ಮಿಕ ಪದ್ಧತಿ ಹಾಗೂ ಸಂಪ್ರದಾಯ ವಿರುದ್ಧವಾಗಿ ಭಕ್ತಾದಿಗಳಿಂದ ದೇಗುಲಕ್ಕೆ ಬಂದ ಹಣದ ಕುರಿತು ಸಾರ್ವಜನಿಕರಿಗೆ ವಿವರ ನೀಡದೆ ವಂಚಿಸಿದ್ದಾರೆ ಎಂದು ಪುಟ್ಟಸ್ವಾಮಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next