ಚಳ್ಳಕೆರೆ: ತಾಲೂಕಿನ ತಳಕು ಠಾಣಾ ವ್ಯಾಪ್ತಿಯ ಗುಡಿಹಳ್ಳಿ, ಮೈಲನಹಳ್ಳಿ ಮತ್ತು ಸಿರಿವಾಳ ಓಬಳಾಪುರ ಗ್ರಾಮಗಳ ಸುತ್ತಮುತ್ತ ಕರಡಿಗಳ ಓಡಾಟದ ಬಗ್ಗೆ ಪತ್ರಿಕೆ ಸಾರ್ವಜನಿಕರ ಗಮನ ಸೆಳೆದಿದ್ದು, ತಳಕು ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ
ನೀಡಿ ಮಾಹಿತಿ ಕಲೆ ಹಾಕಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕರಡಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾರ್ಯಚರಣೆ ಪ್ರಾರಂಭಿಸುವ ನಿಟ್ಟಿನಲ್ಲಿ ಗುಡಿಹಳ್ಳಿ, ಮೈಲನಹಳ್ಳಿಗೆ ತೆರಳಿ ಅಲ್ಲಿನ ಗ್ರಾಮಸ್ಥರದೊಂದಿಗೆ ಕರಡಿ ಓಡಾಟದ ಬಗ್ಗೆ ಮಾಹಿತಿ ಪಡೆದರು. ಗ್ರಾಮದ ತೋಟಗಳ
ಸಮೀಪದಲ್ಲಿ ಕರಡಿ ವಾಸವಿದ್ದು, ಸಂಜೆಯ ವೇಳೆ ನೀರು, ಆಹಾರ ಅರಸಿ ಗ್ರಾಮಗಳದತ್ತ ಕರಡಿಗಳು ಬರುವುದನ್ನು ಕಣ್ಣಾರೆ ಕಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಕಟ್ಟಲು ಯಾವೆಲ್ಲಾ ಆಪ್ಲಿಕೇಶನ್ ಗಳಿವೆ ? ಇಲ್ಲಿದೆ ಮಾಹಿತಿ
ಕರಡಿಗಳನ್ನು ಬೋನ್‌ನಲ್ಲಿ ಸೆರೆ ಹಿಡಿಯಲು ಉಪಅರಣ್ಯಾಧಿಕಾರಿ ವಸಂತ, ರಾಜೇಶ್ ಹಾಗೂ ಸಿಬ್ಬಂದಿ ಈಗಾಗಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಕರಡಿಗಳನ್ನು ಸೆರೆ ಹಿಡಿದು ಬೋನ್‌ಗೆ ತಳ್ಳುವ ಮೂಲಕ ಈ ಭಾಗದ ಜನರಿಗೆ ನೆಮ್ಮದಿಮೂಡಿಸಲು ಕಾರ್ಯತಂತ್ರ ಪ್ರಾರಂಭಿಸಿದ್ದಾರೆ.