Advertisement

ಜಾನುವಾರ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

09:49 AM Oct 20, 2020 | sudhir |

ಬಂಕಾಪುರ: ಜಾನುವಾರ ಮೇಯಿಸಲು ಹೋದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಗೌಳೇರ ದಡ್ಡಿಯಲ್ಲಿ ರವಿವಾರ ನಡೆದಿದೆ. ರಮೇಶ ಎಡೀಗ (45) ಗಾಯಗೊಂಡ ರೈತ. ದನಗಳನ್ನು ಮೇಯಿಸಲು ಹೋದಾಗ ಕರಡಿ ದಿಢೀರ್‌ ದಾಳಿ ಮಾಡಿ ಕೈ, ಕಾಲು ಕಚ್ಚಿ ಗಂಭೀರ ಗಾಯಗೊಳಿಸಿದೆ. ಗಾಯಗೊಂಡ ರೈತನನ್ನು ಸಾರ್ವಜನಿಕರು ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ದುಂಡಶಿ ಅರಣ್ಯ ಇಲಾಖೆ ಆರ್‌ಎಫ್‌ಒ ರಮೇಶ ಸೇತಸನದಿಯವರಿಗೆ ದೂರು ನೀಡಲಾಗಿದೆ.

Advertisement

ತೇಗದ ಗಿಡ ತೆರವಿಗಾಗಿ ಜಗಳ; ಚಿಕ್ಕಪ್ಪನ ಕೊಲೆ
ಹಾನಗಲ್ಲ: ಮನೆ ಆವರಣದಲ್ಲಿದ್ದ ತೇಗದ ಗಿಡಗಳ ಸಲುವಾಗಿ ಎರಡು ಕುಟುಂಬಗಳ ನಡುವೆ ಆರಂಭಗೊಂಡ ಕಲಹ
ಚಿಕ್ಕಪ್ಪನ ಕೊಲೆಯಲ್ಲಿ ಅಂತ್ಯವಾದ ಘಟನೆ ಸೋಮವಾರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷಪ್ಪ
ರಾಮಾಪೂರ (56) ಕೊಲೆಯಾದ ವ್ಯಕ್ತಿ. ಅಣ್ಣ-ತಮ್ಮಂದಿರ ಮಧ್ಯೆ ಮನೆಯ ಆವರಣದಲ್ಲಿದ್ದ ಗಿಡಗಳನ್ನು ತೆರವುಗೊಳಿಸುವ ಸಲುವಾಗಿ ಜಗಳ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಸೋದರ ಬಸವರಾಜ ರಾಮಾಪೂರ ಹಾಗೂ ಆತನ ಮಕ್ಕಳು ಇದನ್ನೇ ನೆಪ ಮಾಡಿಕೊಂಡು ಚಿಕ್ಕಪ್ಪ ವಿರೂಪಾಕ್ಷಪ್ಪ ರಾಮಾಪುರ ಎಂಬುವರ ಮೇಲೆ ಹಲ್ಲೆ ಮಾಡಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್‌ಐ ಅಂಜನೇಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ;ಕಸ್ತೂರಿ ರಂಗನ್‌ ವರದಿ ಜಾರಿ ಅಸಾಧ್ಯ : ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಟಾರ್‌

ಕೋವಿಡ್‌; 117 ಜನ ಗುಣಮುಖ
ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 68 ಜನರಿಗೆ ಕೋವಿಡ್‌ -19 ಪಾಸಿಟಿವ್‌ ದೃಢಪಟ್ಟಿದ್ದು, 117 ಜನರು ಸೋಂಕಿನಿಂದ
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 10,106 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಇಂದಿನವರೆಗೆ 9384 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಸೋಮವಾರ ಒಬ್ಬರ ಮರಣ ಪ್ರಕರಣ ಸೇರಿದಂತೆ ಈವರೆಗೆ 184 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, 538 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ವಿವರ: ಬ್ಯಾಡಗಿ-1, ಹಾನಗಲ್ಲ-14, ಹಾವೇರಿ-24, ಹಿರೇಕೆರೂರು-14, ರಾಣಿಬೆನ್ನೂರು-6, ಸವಣೂರು-6, ಶಿಗ್ಗಾವಿ-3 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-3, ಹಾನಗಲ್ಲ-14, ಹಾವೇರಿ-46, ಹಿರೇಕೆರೂರು-6, ರಾಣಿಬೆನ್ನೂರು-36, ಸವಣೂರು-1, ಶಿಗ್ಗಾವಿ-11 ಜನರು ಬಿಡುಗಡೆ ಹೊಂದಿದ್ದಾರೆ.

Advertisement

ಓರ್ವ ವೃದ್ಧೆ ಸಾವು: ರಾಣಿಬೆನ್ನೂರು ತಾಲೂಕಿನ ಕೋಟಿಹಾಳ ಗ್ರಾಮದ ನಿವಾಸಿ 60 ವರ್ಷದ ವೃದ್ಧೆ ಸೋಂಕಿನಿಂದ
ಮೃತಪಟ್ಟಿದ್ದು, ಕೋವಿಡ್‌ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next