ಕುಂದಾಪುರ: ಪ್ರಾಣಿ ಪಕ್ಷಿ, ಮರಗಿಡಗಳಿಗೆ, ಹೆಜ್ಜೆ ಹೆಜ್ಜೆಗೂ ಕಾನೂನು ಇದೆ. ಗೋಹತ್ಯೆ ನಿಷೇಧ, ಭ್ರೂಣಲಿಂಗ ಪರೀಕ್ಷೆ ತಡೆ, ಹುಟ್ಟು ಸಾವು ಹೀಗೆ ಪ್ರಪಂಚದಲ್ಲೇ ಅತೀ ಹೆಚ್ಚು ಕಾನೂನು ಇಂಡಿಯಾದಲ್ಲದೆ-ನಿವೇಶನ ಕೊಡಿ ಎಂಬುದಕ್ಕೆ ಕಾನೂನು ಇಲ್ಲ ಆದ್ದರಿಂದ ಭೂಮಿ ಸದ್ಬಳಕೆಗೆ ಸಮಗ್ರ ವಸತಿ ನೀತಿಯೊಂದು ಅಗತ್ಯವಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಹೇಳಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಬೀಜಾಡಿ/ಗೋಪಾಡಿ ಗ್ರಾಮಗಳ ಪಂಚಾಯತ್ ವ್ಯಾಪ್ತಿಯೊಳಪಡುವ ಬಡ ಮನೆ ನಿವೇಶನ ರಹಿತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಫಲವತ್ತಾದ ಭೂಮಿ ಕಸಿದು ಕಾಪೋìರೇಟ್ ಕಂಪೆನಿಗೆ ಕೊಡುವ ಕಾಯಿದೆ ತಂದಾಗ ನಾವು ಹೋರಾಟ ಮಾಡಿ ಚಳವಳಿಯಿಂದಾಗಿ ವಾಪಾಸು ಪಡೆಯಲು ಸಾಧ್ಯವಾಯಿತು. ಕಾರ್ಪೊರೇಟ್ ಕಂಪೆನಿಗೆ ಉಚಿತ ಭೂಮಿ, ನೀರು, ವಿದ್ಯುತ್ ಹಾಗೂ ಕಾರ್ಮಿಕ ಕಾನೂನು ಲಗಾವಿಲ್ಲದಂತೆ ನಿಯಮ ರೂಪಿಸುವ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು.ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ, ಪ್ರಾಸ್ತಾವಿಕ ಭಾಷಣ ಮಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕರಿಯ ದೇವಾಡಿಗ, ಕೋಣಿ ಗಣಪತಿ ಶೇಟ್, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ಉಪಸ್ಥಿತರಿದ್ದರು.