Advertisement

ಬೀಫ್ ಕರ್ನಾಟಕದಿಂದ ತರಿಸೋಣ

03:50 AM Jul 19, 2017 | Team Udayavani |

ಪಣಜಿ: ಗೋಹತ್ಯೆ, ಗೋಮಾಂಸ, ಗೋರಕ್ಷಣೆ ಕುರಿತು ದೇಶಾದ್ಯಂತ ಚರ್ಚೆಯ ಬಿಸಿ ಏರಿರುವ ಸಂದರ್ಭದಲ್ಲೇ ಗೋವಾ ಮುಖ್ಯಮಂತ್ರಿ ಮನೋಹರ್‌ ಪಾರೀಕರ್‌ ಅವರು ವಿಧಾನಸಭೆಯಲ್ಲೇ, ಕರ್ನಾಟಕ ದಿಂದ ಗೋಮಾಂಸವನ್ನು ಆಮದು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.

Advertisement

ಮಂಗಳವಾರ ಗೋವಾ ವಿಧಾನಸಭೆಯಲ್ಲಿ ಮಾತನಾಡಿದ ಅವರು, “ಬೀಫ್ ಕೊರತೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರತೆಯಾದರೆ ಕರ್ನಾಟಕದ ಬೆಳಗಾವಿ ಅಥವಾ ಇತರ ಪ್ರದೇಶಗಳಿಂದ ಗೋಮಾಂಸ ವನ್ನು ಆಮದು ಮಾಡಿಕೊಳ್ಳುವುದಕ್ಕೆ ಸಿದ್ಧರಿದ್ದೇವೆ. ನೆರೆರಾಜ್ಯಗಳಿಂದ ತರಿಸಲಾಗುವ ಬೀಫ್ ಅನ್ನು ಸೂಕ್ತ ವೈದ್ಯರು ಅಥವಾ ಸಂಬಂಧಪಟ್ಟವರೇ ತಪಾಸಣೆ ನಡೆಸುವಂತೆ ನೋಡಿಕೊಳ್ಳಲಾಗುತ್ತದೆ. ಈ ಬಗ್ಗೆ ನಾನೇ ಭರವಸೆ ನೀಡುತ್ತೇನೆ’ ಎಂದಿದ್ದಾರೆ.

ಇಷ್ಟಕ್ಕೇ ನಿಲ್ಲಿಸದ ಸಿಎಂ ಪಾರೀಕರ್‌, “ಗೋವಾದಲ್ಲಿ ಪ್ರತಿ ದಿನ ಕಾನೂನುಬದ್ಧವಾದ ಕಸಾಯಿಖಾನೆಗಳಲ್ಲಿ ಗೋವುಗಳನ್ನು ವಧಿಸಿ, ಸುಮಾರು 2 ಸಾವಿರ ಕೆಜಿಯಷ್ಟು ಬೀಫ್ ತಯಾರಿಸಲಾಗುತ್ತದೆ. ಉಳಿದದ್ದನ್ನು ಕರ್ನಾ ಟಕ ದಿಂದ ತರಿಸಿಕೊಳ್ಳಲಾಗುತ್ತದೆ. ನೆರೆರಾಜ್ಯ ಗಳಿಂದ ವಧೆಗಾಗಿ ಜಾನುವಾರುಗಳನ್ನು ಇಲ್ಲಿಗೆ ತರಲು ನಮ್ಮ ಸರಕಾರ ಯಾವುದೇ ನಿರ್ಬಂಧ ವಿಧಿಸುವ ಉದ್ದೇಶ ಹೊಂದಿಲ್ಲ,’ ಎಂದೂ ಹೇಳಿದ್ದಾರೆ.

ಕಾಂಗ್ರೆಸ್‌ ಲೇವಡಿ: ಸಿಎಂ ಪರ್ರಿಕರ್‌ ಹೇಳಿಕೆ ಬಗ್ಗೆ ಲೇವಡಿ ಮಾಡಿರುವ ಕಾಂಗ್ರೆಸ್‌ ಸಂಸದ ರಾಜೀವ್‌ ಶುಕ್ಲಾ, “ರಾಜ್ಯದಲ್ಲಿ ಬೀಫ್ಗೆ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಸಿಎಂ ಹೇಳಿಕೆ ನೋಡಿದರೆ ನಗು ಬರುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next