Advertisement

Sullia ಬೀಡಿ ಬ್ರಾಂಚ್‌ನಲ್ಲಿ ಸಾವಿರಾರು ಮೌಲ್ಯದ ಬೀಡಿ ಕಳವು

06:07 PM Aug 25, 2023 | Team Udayavani |

ಸುಳ್ಯ: ಬೀಡಿ ಬ್ರಾಂಚ್‌ನಿಂದ ಸಾವಿರಾರು ಮೌಲ್ಯದ ಬೀಡಿ ಕಳವಾಗಿರುವ ಘಟನೆ ಜಾಲ್ಸೂರಿನಲ್ಲಿ ರಾತ್ರಿ ಆ.20ರ ರಾತ್ರಿ ಸಂಭವಿಸಿದೆ.

Advertisement

ಜಾಲ್ಸೂರಿನ ಗೋಳಿಕಟ್ಟೆ ಸಮೀಪವಿರುವ ಪ್ರಮೀತ್‌ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶೇಷಪ್ಪ ರೈ ದುಗಲಡ್ಕ ಅವರ ಬೀಡಿ ಬ್ರಾಂಚ್‌ನಿಂದ ರಾತ್ರಿ ಬೀಡಿ ಕಳವಾಗಿದ್ದು, ರಾತ್ರಿ ವೇಳೆ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯ ಶೆಟರ್‌ ಮುರಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು ಹದಿನೈದು ಸಾವಿರ ಮೌಲ್ಯದ ಮೂವತ್ತು ಸಾವಿರ ಬೀಡಿ ಕಳವುಗೈದಿರುವುದಾಗಿ ತಿಳಿದುಬಂದಿದೆ.

ಮರುದಿನ ಬೆಳಿಗ್ಗೆ ಶೇಷಪ್ಪ ರೈ ಅವರು ಅಂಗಡಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಾಲ್ಸೂರು ಪರಿಸರದಲ್ಲಿ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next