Advertisement

ಪಶು ಮೇಳ ಯಶಸ್ವಿಗೊಳಿಸಿ

11:54 AM Feb 06, 2020 | Naveen |

ಬೀದರ: ಬೀದರನಲ್ಲಿ ಫೆ. 7ರಿಂದ ನಡೆಯಲಿರುವ ರಾಜ್ಯಮಟ್ಟದ ಪಶು ಮೇಳ ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಪಶು ಸಂಗೋಪನೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೂಚಿಸಿದರು.

Advertisement

ನಗರದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಬುಧವಾರ ರಾಜ್ಯ ಮಟ್ಟದ ಪಶುಮೇಳ ಕುರಿತು ನಡೆದ ಅ ಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೀದರನಲ್ಲಿ ರಾಜ್ಯಮಟ್ಟದ ಪಶುಮೇಳ ನಡೆಯುತ್ತಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದ್ದು, ಈ ಕಾರ್ಯಕ್ರಮ ಸ್ಮರಣೀಯವಾಗಿ ಉಳಿಯು ವಂತಾಗಬೇಕು. ಮೇಳದಲ್ಲಿ ಯಾವುದೇ ರೀತಿಯ ತೊಡಕುಗಳು ಬಾರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಎಲ್ಲ ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಜಾಥಾ ನಡೆಸಿ, ಪಶುಮೇಳ ಕುರಿತಂತೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಅ ಧಿಕಾರಿಗಳು ಮಾತನಾಡಿ, ಮುಖ್ಯ ಕಾರ್ಯಕ್ರಮದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಳಕ್ಕೆ ಬರುವ ಜಾನುವಾರುಗಳಿಗೆ ಒಣ ಮೇವು, ಹಸಿ ಮೇವಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Advertisement

ಊಟೋಪಚಾರದ ತಯಾರಿಗಳು ಪೂರ್ಣಗೊಂಡಿವೆ ಎಂದು ವಿವರಣೆ ನೀಡಿದರು. ವಾಸ್ತವ್ಯ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಪೂರೈಕೆ, ಊಟೋಪಚಾರ, ಪ್ರದರ್ಶನ ಮಳಿಗೆಗಳ ನಿರ್ವಹಣೆ, ಜಾನುವಾರು ಪ್ರದರ್ಶನ, ಬಹುಮಾನ ವಿತರಣೆ, ಹಾಲು ಕರೆಯುವ ಸ್ಪರ್ಧೆ, ನೀರು ಮತ್ತು ವಿದ್ಯುತ್ಛಕ್ತಿ ಸೌಕರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆ ಸೇರಿದಂತೆ ವಿವಿಧ ತಯಾರಿಗಳ ಬಗ್ಗೆ ಸಂಬಂಧಿ ಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸಭೆಯಲ್ಲಿ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತ ಎಸ್‌.ಆರ್‌. ನಟೇಶ್‌, ನಿರ್ದೇಶಕ ಡಾ| ಎಂ.ಟಿ. ಮಂಜುನಾಥ, ಜಿಲ್ಲಾಧಿ ಕಾರಿ ಡಾ| ಎಚ್‌.ಆರ್‌. ಮಹಾದೇವ, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ನಾಗೇಶ ಡಿ.ಎಲ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿದ್ಯಾನಂದ.ಸಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಗೋವಿಂದ.ಬಿ.ಎಚ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಹಾಗೂ ಪಶು ಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next