Advertisement
ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ತೊಗರಿಯನ್ನು ಹೆಚ್ಚಾಗಿ ಒಣ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಕೆಲ ರೈತರು ನೀರಿನ ಲಭ್ಯತೆ ಇದ್ದಲ್ಲಿ ನೀರಾವರಿ ತೊಗರಿ ಹಾಗೂ ಕೆಲವು ಪ್ರಗತಿಪರ ರೈತರು ನಾಟಿ ತೊಗರಿ ಕೂಡ ಬೆಳೆಯುವುದುಂಟು. ಒಣ ಪ್ರದೇಶದಲ್ಲಿ ಬೆಳೆದ ತೊಗರಿ ಹೆಚ್ಚಾಗಿ ಕಡ್ಡಿಯಿಂದ ಕೂಡಿರುತ್ತದೆ. ನೀರಾವರಿ ತೊಗರಿ ಹೆಚ್ಚಾಗಿ ಕೆಳಭಾಗದಿಂದ ದಪ್ಪವಾಗಿರುವುದರಿಂದ ಇಂತಹ ತೊಗರಿ ಕಟ್ಟಿಗೆಯನ್ನು ಹೆಚ್ಚಾಗಿ ಉರುವಲಿಗೆ ಉಪಯೋಗಿಸುತ್ತಾರೆ.
Related Articles
10 ಅಡಿ ಉದ್ದ, 6 ಅಡಿ ಅಗಲ, 4 ಅಡಿ ಅಳತೆಯ ಆಳದ ಕಾಂಪೋಸ್ಟ್ ಗುಂಡಿ ತಯಾರಿಸಬೇಕು. ಗುಂಡಿಯಲ್ಲಿ ಮೊದಲ 1 ಅಡಿ ಎತ್ತರದವರೆಗೆ ತೊಗರಿ ಕಟ್ಟಿಗೆ ಹಾಕಬೇಕು. ಸಗಣಿ ರಾಡಿ ತಯಾರಿಸಿ ಕಾಂಪೋಸ್ಟ್ ಕಲ್ಚರನ್ನು (1 ಟನ್ ತೊಗರಿ ಕಟ್ಟಿಗೆಗೆ 1 ಕಿ.ಗ್ರಾಂ. ಕಾಂಪೋಸ್ಟ್ ಕಲ್ಚರ್ ಬೇಕಾಗುತ್ತದೆ) ಬೆರೆಸಿ ಕಟ್ಟಿಗೆ ಮೇಲೆ ಸಿಂಪರಣೆ ಮಾಡಬೇಕು. ಹೀಗೆ 2-3 ಸ್ಥಿರದಲ್ಲಿ ಲೇಯರ್ ತುಂಬಿರಿ. ಗುಂಡಿ ತುಂಬಿದ ನಂತರ ಕಟ್ಟಿಗೆಯು 1 ಅಡಿ ಮೇಲೆ ಬರುವವರೆಗೂ ತುಂಬಿಸಬೇಕು.
Advertisement
ನಂತರ 4-5 ಕೊಡ ನೀರು ಸುರಿಯಬೇಕು. ತೊಗರಿ ಕಟ್ಟಿಗೆ ಮೇಲೆ 2-3 ಇಂಚು ಮಣ್ಣನ್ನು ಕಟ್ಟಿಗೆ ಮುಚ್ಚುವಂತೆ ಮಾಡಿ ಅಥವಾ ಕೆಸರಿನಿಂದ ಸವರಬೇಕು. (ಅವಶ್ಯವೆನಿಸಿದಲ್ಲಿ 15 ದಿನಕ್ಕೆ ನೀರಿನಿಂದ ಸಿಂಪಡಿಸುವುದು) 4 ತಿಂಗಳಲ್ಲಿ ಸಂಪದ್ಭರಿತ ಕಾಂಪೋಸ್ಟ್ ಗೊಬ್ಬರ ತಯಾರಾಗಿರುತ್ತದೆ.