Advertisement

ಕ.ಕ.ದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ರಾಂಪೂರೆ

06:17 PM Feb 10, 2020 | Naveen |

ಬೀದರ: ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರು ದಶಕಗ ಹಿಂದೆ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ್ದ ದಿ.ಮಹಾದೇವಪ್ಪ ರಾಂಪೂರೆ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಪದವಿ, ವೈದ್ಯಕೀಯ ಶಿಕ್ಷಣಕ್ಕೆ ಮಹತ್ವ ನೀಡಿ ಈ ಭಾಗದ ಜನರ ಜೀವನ ಶೈಲಿಯನ್ನೇ ಬದಲಿಸಿದ್ದಾರೆ ಎಂದು ಹೈ.ಕ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ| ಬಸವರಾಜ ಜಿ. ಪಾಟೀಲ ಸ್ಮರಿಸಿದರು.

Advertisement

ನಗರದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಮಾಜಿ ಸಂಸದ ದಿ. ಮಹಾದೇವಪ್ಪ ರಾಂಪುರೆ ಅವರ 47ನೇ ಪುಣ್ಯಸ್ಮರಣೆ ಹಾಗೂ ಸ್ವಯ ಪ್ರೇರಿತ ರಕ್ತದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿಯಲ್ಲಿ ಹಿರಿಯರನ್ನು ಗೌವರವಿಸುವುದರಲ್ಲಿ ವಿಫಲರಾಗುತ್ತಿದ್ದು, ಯುವಕರು ಅನ್ಯಮಾರ್ಗ ಹಿಡಿದು ಅವಮಾನಿಸುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಹಿರಿಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಮಹಿಳೆಯರು ಪುರುಷರಿಗೆ ಸಮನಾಗಿದ್ದಾರೆ. ಸರ್ಕಾರಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ದಾನದಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ಸದೃಢ ಮತ್ತು ಆರೋಗ್ಯವಂತ ಯುವಕ, ಯುತಿಯರು ರಕ್ತದಾನ ಮಾಡುವಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಸೂರ್ಯಕಾಂತ ಮಾಡನಾಡಿದರು. ಎನ್‌ಎಸ್‌ ಎಸ್‌ ಘಟಕದ ಪ್ರೊ| ಸಿದ್ರಾಮಪ್ಪಾ ಮಾಸಿಮಾಡೆ, ಡಾ| ದೀಪಾ ರಾಗ, ಎನ್‌ಸಿಸಿ ಮೇಜರ್‌ ಡಾ|ಪಿ. ವಿಠಲರೆಡ್ಡಿ, ಸ್ಕೌಟ್‌ ಮತ್ತು ಗೈಡ್ಸ್‌ನ ಪ್ರೊ|ಶ್ರೀಕಾಂತರಾವ್‌ ಬಿರಾದಾರ ಮತ್ತು ಯುವ ರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮಾಧಿಕಾರಿ ಡಾ| ಹಣಮಂತಪ್ಪಾ ಸೇಡಂಕರ ನೇತೃತ್ವದಲ್ಲಿ ಸುಮಾರು 70 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Advertisement

ಉಪ ಪ್ರಾಂಶುಪಾಲ ಡಾ| ಎಸ್‌.ಬಿ. ಗಾಮಾ, ವೈದ್ಯಾಧಿಕಾರಿ ಡಾ| ಪ್ರಿಯಾಂಕ ಸೇರಿದಂತೆ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರ್ಥಶಾಸ್ತ್ರ ವಿಭಾದ ಮುಖ್ಯಸ್ಥ ಪ್ರೊ| ವಾಮನರಾವ್‌ ಕುಲಕರ್ಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next