Advertisement

ಮನಕ್ಕೆ ಮುದ ನೀಡುವಂತಿರಲಿ ಬೆಡ್‌ರೂಮ್‌

02:22 PM Aug 04, 2018 | |

ಬೆಡ್‌ರೂಮ್‌ ಮನಸ್ಸು ಮತ್ತು ದೇಹದ ದಣಿವಾರಿಸಿಕೊಳ್ಳುವ ಸ್ಥಳ. ಆದ್ದರಿಂದ ಅದು ಪ್ರತಿ ದಿನದ ಜಂಜಾಟದ ಬದುಕಿನಿಂದ ಸುಸ್ತಾದಾಗ ವಿಶ್ರಾಂತಿ ಪಡೆದು, ಮರು ದಿನದ ಕೆಲಸಕಾರ್ಯಗಳಿಗೆ ನವ ಚೈತನ್ಯದೊಂದಿಗೆ ಸಿದ್ಧಗೊಳ್ಳಲು ಪ್ರೇರಣೆ ನೀಡುವಂತಿರಬೇಕು.

Advertisement

ಬೆಡ್‌ ರೂಮ್‌ ಸ್ವಚ್ಛ, ಪ್ರಶಾಂತ, ಆಕರ್ಷಕವಾಗಿ ಮನಕ್ಕೆ ಮುದ ನೀಡುವ ಜತೆಗೆ ಚೆನ್ನಾಗಿ ಗಾಳಿ, ಬೆಳಕು ಇದ್ದು ನೆಮ್ಮದಿಯಿಂದ ನಿದ್ರಿಸಲು ಅನುಕೂಲಕರವಾಗಿದ್ದರೆ ಉತ್ತಮ. ಇದರ ವಿನ್ಯಾಸ, ಅಲಂಕಾರ ಮನೆ ಮಂದಿಯ ಅಭಿರುಚಿಯ ದ್ಯೋತಕದಂತಿರಬೇಕು. ಆಗ ಮಾತ್ರ ಬೆಡ್‌ ರೂಮ್‌ ಕಂಫ‌ರ್ಟ್‌ ಆಗಿರುತ್ತದೆ.

ಅಹ್ಲಾದಕರವಾಗಿರಲಿ
ಬೆಡ್‌ ರೂಮ್‌ ವಿನ್ಯಾಸ ಸಾಫ್ಟ್  ಆಗಿ ಮನಸ್ಸಿಗೆ ಅಹಲ್ಲಾದಕರವಾಗುವಂತಿದ್ದರೆ ನಮ್ಮ ಮೂಡ್‌ ಚೆನ್ನಾಗಿರುತ್ತದೆ. ಇದಕ್ಕಾಗಿ ಮೆತ್ತ ನೆಯವೆಲ್ವೆಟ್‌ ಬಟ್ಟೆಯಿಂದ ತಯಾರಿಸಿದ ಬೆಡ್‌ ಕವರ್‌, ಪಿಲ್ಲೋ  ಕವರ್‌ ಗಳು ಬಳಸುವುದು ಸಹಕಾರಿ. ಹಾಗೆ ಕುಶನ್‌, ವಿಂಡೋ ಕರ್ಟನ್‌ ಕೂಡ ಅವರ ಅಭಿರುಚಿಗೆ ತಕ್ಕಂತ ಡಿಸೈನ್‌ ಮತ್ತು ಚಿತ್ರಗಳಿಂದ ಕೂಡಿದ್ದು, ರೂಮ್‌ ಗೋಡೆಯ ಬಣ್ಣಕ್ಕೆ ಮ್ಯಾಚ್‌ ಆಗುವಂತಿದ್ದರೆ ಕೋಣೆಯ ಸೌಂದರ್ಯ ಇಮ್ಮಡಿಯಾಗುತ್ತದೆ.

ಮಂಚಕ್ಕೆ ವಿಲಾಸಿ ಲುಕ್‌
ಮಂಚ ಕೇವಲ ಮಲಗಲು ಆರಾಮದಾಯಕವಾಗಿದ್ದರೆ ಸಾಲದು. ಅದು ಬೆಡ್‌ ರೂಮ್‌ನ ಅಲಂಕಾರದಲ್ಲಿ ಪ್ರಮುಖವಾಗಿರುವುದರಿಂದ ಆಕರ್ಷಕ ವಿನ್ಯಾಸ ಹೊಂದಿರಬೇಕು. ಮಂಚದ ಹೆಡ್‌ ಬೋರ್ಡ್‌ನಲ್ಲಿ ಆಕರ್ಷಕ ಪ್ರಕೃತಿ ಚಿತ್ರ, ಕುಟುಂಬದ ಚಿತ್ರ ಅಥವಾ ವಿವಿಧ ಕಲಾಕೃತಿಗಳನ್ನು ಬಳಸುವುದರಿಂದ ಅದು ರೂಮ್‌ಗೆ ವಿಲಾಸಿ ಲುಕ್‌ ನೀಡುವುದು. ಮಂಚದ ಎರಡೂ ಪಕ್ಕದಿಂದ ಮಲಗಿದವರು ಇಳಿಯಲು ಸ್ಥಳಾವಕಾಶ ಬಿಟ್ಟು ರೂಮ್‌ನ ಮಧ್ಯ ಭಾಗದಲ್ಲಿ ಮಂಚ ಅಳವಡಿಸುವುದು ಉತ್ತಮ.

ವಾಲ್‌ ಪೇಪರ್‌  ಟ್ರೆಂಡ್‌
ಗೋಡೆಗಳಿಗೆ ಅಳವಡಿಸುವ ಆಧುನಿಕ ರೀತಿಯ ವಿವಿಧ ಆಲಂಕಾರಿಕ ವಸ್ತುಗಳು ಬೆಡ್‌ ರೂಮ್‌ಗೆ ಹೊಸ ರೂಪ ನೀಡುತ್ತವೆ. ಈಗಂತೂ ವೈವಿಧ್ಯಮಯ 3ಡಿ ಇಫೆಕ್ಟ್‌ನ ವಾಲ್‌ ಪೇಪರ್‌ ಗಳನ್ನು ಬಳಸುವುದು ಟ್ರೆಂಡ್‌ ಆಗಿದೆ. ಬೆಡ್‌ರೂಮ್‌ಗೆ ಅಟ್ಯಾಚ್ಡ್  ಬಾತ್‌ ರೂಮ್‌ ಅತೀ ಅಗತ್ಯ. ಆ ಬಾತ್‌ ರೂಮ್‌ನಲ್ಲಿ ಗಾಳಿ ಸುಳಿದಾಡಲು ಪುಟ್ಟ ಕಿಟಕಿ ಅಥವಾ ವೆಂಟಿಲೇಟರ್‌ ಮುಖ್ಯ ವಾಗಿಬೇಕು. ಜತೆಗೆ ಎಕ್ಸಾಸ್ಟ್  ಫ್ಯಾನ್‌ ಇರಲೇಬೇಕು. ಕಿಟಕಿ ಇದ್ದರೂ ಬಾತ್‌ ರೂಮ್‌ ನಲ್ಲಿ ಹೆಚ್ಚಾಗಿ ತೇವಾಂಶ ಇರುವುದರಿಂದ, ಅಲ್ಲದೇ ಅಲ್ಲಿನ ವಾಸನೆ ಹೊರಗೆ ಹೋಗಲು ಇದು ಸಹಾಯಕಾರಿಯಾಗುತ್ತದೆ. ಬೆಡ್‌ರೂಮ್‌ನ ಕಿಟಕಿ ಮೂಲಕ ಪ್ರಕೃತಿಯ ಹಸುರು ವಾತಾವರಣ ಕಾಣುವ ಹಾಗಿದ್ದರೆ ಮನಸ್ಸಿಗೆ ಬೇಸರವಾದಾಗ ಅದನ್ನು ನೋಡುತ್ತಾ ನೋವು ಮರೆಯಬಹುದು.

Advertisement

ನಿರ್ವಹಣೆ ಮುಖ್ಯ
ಬೆಚ್ಚನೆಯ ಭಾವ ಮೂಡಿಸುವುದರ ಜತೆಗೆ ಕೋಣೆಗೆ ಬಂದೊಡನೆಯೇ ಸಂತಸ ತರುವ, ತೃಪ್ತಿ ನೀಡುವ ತಾಣವಾಗಿರಲಿ ಬೆಡ್‌ರೂಮ್‌ ಎಂದು ಆಶಿಸುವವರೆ ಹೆಚ್ಚು. ಇದಕ್ಕೆ ಬೆಡ್‌ರೂಮ್‌ನ ನಿರ್ವಹಣೆ ಬಹುಮುಖ್ಯವಾಗಿದೆ. ಪ್ರತಿ ದಿನ ಸಾಧ್ಯವಾಗದಿದ್ದರೂ ಎರಡು ದಿನಗಳಿಗೊಮ್ಮೆ ಬೆಡ್‌ ರೂಮ್‌, ಬಾತ್‌ ರೂಮ್‌ ಸ್ವಚ್ಛಗೊಳಿಸಬೇಕು. ಬಟ್ಟೆಬರೆಗಳನ್ನು ನೀಟಾಗಿ ಮಡಚಿ ಇಡಬೇಕು. ಬಟ್ಟೆಗಳನ್ನು ಬೆಡ್‌ ರೂಮ್‌ ನಲ್ಲಿ ನೇತಾಡಿಸುವುದರಿಂದ ಸೊಳ್ಳೆ , ಜಿರಳೆಗಳು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವುಗಳನ್ನು ಕಪಾಟಿನಲ್ಲಿ ಅಥವಾ ಹೊರಗಡೆ ವರ್ಕ್‌ ಏರಿಯಾದಲ್ಲಿ ಹಾಕುವುದು ಸೂಕ್ತ. ಕಿಟಿಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ರೂಮ್‌ ಫ್ರೆಶ್‌ನರ್‌ ಬಳಸುವುದು. ಹೊರಗಡೆಯಿಂದ ಸ್ವಚ್ಛ ಗಾಳಿ, ಬೆಳಕು ಒಳಬರಲು ಕಿಟಿಕಿ, ಕರ್ಟ್‌ ನ್‌ ಗಳನ್ನು ತೆರೆದಿಡುವುದು ಒಳ್ಳೆಯದು. ಬಾತ್‌ ರೂಮ್‌, ಬಾಗಿಲು ಪಕ್ಕ ಮ್ಯಾಟ್‌ ಗಳನ್ನು ಹಾಕು ವುದು ಸ್ವಚ್ಛತೆ ದೃಷ್ಟಿಯಿಂದ ಉತ್ತಮ.

 ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next