ವಿದ್ಯಾನಗರ: ಬೆದ್ರಂಪಳ್ಳ ಗಣೇಶ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ದೇವರ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ ಶಾಸ್ತ್ರೀಯ ಜಾನಪದ ನೃತ್ಯಗಳನ್ನೊಳಗೊಂಡ ವೈವಿಧ್ಯ ನೃತ್ಯ ಪ್ರದರ್ಶನವು ಜರಗಿತು.
ಗಣೇಶನ ಸ್ತುತಿಯೊಂದಿಗೆ ಆರಂಭವಾದ ನೃತ್ಯ ಪ್ರದರ್ಶನದಲ್ಲಿ ನೃತ್ಯದ ವಿಭಿನ್ನ ಸಾಧ್ಯತೆಗಳನ್ನು ಪ್ರದರ್ಶಿಸುವ ನೃತ್ಯದ ಹಾವಭಾವಗಳು ನರ್ತಕರ ಪ್ರಬುದ್ಧತೆಯನ್ನೂ ತೆರೆದಿಡುವಲ್ಲಿ ಯಶಸ್ವಿಯಾಯಿತು. ಸಂಚಾರಿ ತಂಡಗಳ ಆಕರ್ಷಕ ಪ್ರಸ್ತುತಿ ಜನಮನ ಗೆದ್ದರೆ ನಾಟ್ಯನಿಲಯಂನ ಸಾತ್ವಿಕಾಕೃಷ್ಣ ಅವರ ಕೂಚುಪುಡಿ ಮತ್ತು ಜಾನಪದ ನೃತ್ಯ ಮೈನವಿರೇಳುವಂತೆ ಮಾಡಿತು.
ನೃತ್ಯ ಕಾರ್ಯಕ್ರಮದಲ್ಲಿ ಸಂಚಲನ ಮೂಡಿಸಿ, ಕುತೂಹಲ ಕೆರಳಿಸಿ, ಮೈಮರೆತು ಪ್ರೇಕ್ಷಕರು ವೀಕ್ಷಿಸುವಂತೆ ಮಾಡಿದ ಬನ್ನಿ ಕಾಸರಗೋಡಿಗೆ ಎಂಬ ನೃತ್ಯದ ಮೊದಲ ಪ್ರದರ್ಶನಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ಸಂಧ್ಯಾಗೀತಾ ಬಾಯರು ರಚಿಸಿದ ಕಾಸರಗೋಡಿನ ಸಂಪೂರ್ಣ ಚಿತ್ರಣವನ್ನು ಒಳಗೊಂಡ ಕವನವನ್ನು ನೃತ್ಯ ಸಂಯೋಜನೆಯ ಮೂಲಕ ಜೀವಂತವಾಗಿಸುವ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.
ದೇವರ ನಾಡೆಂಬ ಹೆಗ್ಗಳಿಕೆಗೆ ಪಾತ್ರವಾದ ಕೇರಳದಲ್ಲಿ ಕಾಸರಗೋಡು ಅತ್ಯಂತ ಹೆಚ್ಚು ಜನಪ್ರಿಯ ಹಾಗೂ ಹಲವು ವೈಶಿಷ್ಟಗಳಿಂದ ಕೂಡಿದ್ದು ಹಲವು ಭಾಷೆಗಳ ಸಂಗಮ ಕ್ಷೇತ್ರ. ಇಲ್ಲಿ ಹಲವಾರು ಕಲಾಪ್ರಕಾರಗಳು,ಪುಣಕ್ಷೇತ್ರಗಳು, ನದಿಗಳು, ಪ್ರವಾಸಿತಾಣಗಳು ಮೊದಲಾದವು ಧಾರಾಳವಿದೆ. ಇವುಗಳನ್ನೆಲ್ಲಾ ಮನದಲ್ಲಿಟ್ಟು ನೃತ್ಯರೂಪಕದ ಮೂಲಕ ಪ್ರಸ್ತುತಪಡಿಸಿದ್ದು ವಿಶೇಷವೇ ಸರಿ. ಉಣ್ಣಿಕೃಷ್ಣನ್ ವೀಣಾಲಯಂ ಅವರ ರಾಗ ಸಂಯೋಜನೆ ಹಾಗೂ ಇಂಪಾದ ಹಾಡುಗಾರಿಕೆಯಲ್ಲಿ ಒಂದು ವಿನೂತನ ಪ್ರಯೋಗವಾಗಿ ಮೂಡುಬಂದಿದೆ.
ಭಾಗ್ಯಶ್ರೀ ಮುಳ್ಳೇರಿಯ ಹಾಗೂ ಕೃಷ್ಣ ಕೃಷ್ಣನ ಬಾಲಲೀಲೆಗಳನ್ನು ಸೊಗಸಾಗಿ ಬಿಂಬಿಸಿದರು. ಕಿರಣ್ ಕುಮಾರ್ ಶಿವತಾಂಡವವಾಡಿದರು. ಎಲ್ಲಾ ನೃತ್ಯಗಳೂ ಪುರಾಣ ಕಥೆಯಾಧರಿತವಾಗಿದ್ದರೆ ಜನಮನದಲ್ಲಿ ಶಾಶ್ವತವಾಗುಳಿಯುವ ವಿಶಿಷ್ಟ ನೃತ್ಯ ಪ್ರದರ್ಶನಕ್ಕೆ ಬೆದ್ರಂಪಳ್ಳ ವೇದಿಕೆಯಾಯಿತು. ಇದೇಸಃದರ್ಭಲ್ಲಿಂಧ್ಯಾಗೀತಾ ಬಾಯರು ಅವರನ್ನು ಸಮ್ಮಾನಿಸಲಾಯಿತು.
ಸೃಜನಶೀಲತೆ ಮೆಚ್ಚುವ,ತಹದ್ದು
ಸೃಜನಶೀಲತೆಯನ್ನು, ಸೂಕ್ಷ್ಮತೆಯನ್ನು. ವಿಶಾಲ ದೃಷ್ಟಿಕೋನ ಹಾಗೂ ಕವಿತೆಕಟ್ಟುವ ಕಲೆಯಲ್ಲಿ ಅಡಕವಾಗಿರುವ ಜಾಣತನವನ್ನು ಈ ಹಾಡು ಸ್ಪಷ್ಟಪಡಿಸುತ್ತದೆ. ಕೊಟ್ಟ ಕೆಲವೇ ಸೂಚನೆಗಳಿಗೆ ಸರಿಯಾದ ರೀತಿಯಲ್ಲಿ ವಿಸ್ತಾರವಾದ ಚೌಕಟ್ಟಿನೊಳಗೆ ಹಾಡನ್ನು ರಚಿಸಿದ ಸಂಧ್ಯಾ ಅವರ ಕ್ರಿಯಾಶೀಲತೆ ಮೆಚ್ಚತಕ್ಕದ್ದು
– ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ.