Advertisement

ಬೇಡರ ವೇಷ ಸಮಿತಿ ಪ್ರತಿಭಟನೆ

03:39 PM Mar 24, 2021 | Team Udayavani |

ಶಿರಸಿ: ಬುಧವಾರ ರಾತ್ರಿಯಿಂದ ಆರಂಭವಾಗಲಿರುವ ಶಿರಸಿಯ ವಿಶೇಷಬೇಡರ ವೇಷವನ್ನು ಕೊರೊನಾ ಸೋಂಕುಹೆಚ್ಚಳದ ಆತಂಕದ ಹಿನ್ನೆಲೆಯಲ್ಲಿ ಎರಡುದಿನಕ್ಕೆ ಇಳಿಸಬೇಕು ಎಂದು ಕರೆಯಲಾಗಿದ್ದಸಾರ್ವಜನಿಕರ ಹಾಗೂ ಬೇಡರ ವೇಷಉತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿಶಿರಸಿ ಸಹಾಯಕ ಆಯುಕ್ತರು ಅನುಚಿತವಾಗಿ ವರ್ತಿಸಿ, ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ನಗರದ ಮಿನಿ ವಿಧಾನ ಸೌಧದಲ್ಲಿ ಎಸಿ ಆಕೃತಿ ಬನ್ಸಾಲ್‌ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಬೇಡರ  ವೇಷವನ್ನು ನಾಲ್ಕು ದಿನಗಳ ಬದಲಿಗೆ ಎರಡು ದಿನಕ್ಕೆ ಇಳಿಸುವಂತೆ ಸೂಚನೆ ನೀಡಿದರು.ಉಳಿದ ಹಬ್ಬ ಹರಿದಿನಗಳಿಗೆ ಅವಕಾಶ ಇದೆ, ಇದಕ್ಕೂ ಕೊಡಿ ಎಂದು ಪ್ರಮುಖರುಮನವಿ ಮಾಡಿಕೊಳ್ಳುತ್ತಿದ್ದಾಗ ಆಯುಕ್ತರು ಮೈಕ್‌ ತಿರುಗಿಸಿ, ಪೇಪರ್‌ ಎಸೆದುಸಭೆಯಿಂದ ಹೊರಗೆ ಹೋದ ಬಗ್ಗೆ ಆಕ್ಷೇಪಅಸಮಾಧಾನಗಳು ಭುಗಿಲೆದ್ದವು. ಇದೊಂದು ಜಾನಪದ ಆಚರಣೆ. ಸಮಾಲೋಚಿಸಿ ತೀರ್ಮಾನಿಸಲು ಸಾಧ್ಯತೆ ಇತ್ತಾದರೂ ದರ್ಪದಿಂದ, ನಗರದ ಪ್ರಥಮ ಪ್ರಜೆ ಇದ್ದಾಗಲೂ ವಂದನೆ ಕೂಡ ಹೇಳದೆ ಹೋದದ್ದು ಶಿರಸಿಗರಿಗೆ ಅವಮರ್ಯಾದೆ ಆಗಿದೆ ಎಂದು ನಾಗರಿಕರು ಆರೋಪಿಸಿದರು.

ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ನಾಲ್ಕು ದಿನಗಳ ಬದಿಗೆ ಮೂರೋ, ಎರಡಅಥವಾ ಅಷ್ಟೂ ದಿನವೋ ಎಂಬುದು ಕೊನೆಗೆ.ಆದರೆ, ಅವರು ನಡೆದುಕೊಂಡ ರೀತಿಗೆಅಧಿಕಾರಿಗಳು ಸಸ್ಪೆಂಡ್‌ ಆಗಬೇಕು ಎಂದು ಪಟ್ಟು ಹಿಡಿದರು. ಪೊಲೀಸ್‌ ಉಪಾಧೀಕ್ಷಕರವಿ ನಾಯ್ಕ ಸಂಧಾನ ಮಾಡುವ ಪ್ರಯತ್ನ ಕೂಡ ನಡೆಯಿತು.

ಸಭಾಂಗಣದ ಹೊರ ಭಾಗದಲ್ಲೇ ಕುಳಿತು  ಜನರು ಪ್ರತಿಭಟನೆ ಕೂಡ ಮಾಡಿದರು.ತಹಶೀಲ್ದಾರ್‌ ಚೇಂಬರನಲ್ಲೂ ತಾಸಿಗೂ ಮೀರಿದ ಸಂಧಾನ ಕೂಡ ವಿಫಲ ಆಯಿತು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಟಾರ್‌ ಅವರೇ ಇವರ ವರ್ತನೆಗೆತಕ್ಕ ಬೆಲೆ ತೆರಿಸಬೇಕು. ಶಿರಸಿಗರಿಗೆ ಅಪಮಾನ ಆಗಿದೆ ಎಂದು ಪಟ್ಟು ಹಿಡಿದರು.

ಸಮಿತಿ ಪ್ರಮುಖರಾದ ಮಂಜುನಾಥ ಭಟ್ಟ, ಶ್ರೀಧರ ಮೊಗೇರ, ಪ್ರದೀಪ ಎಲ್ಲನಕರ್‌,ಪರಮಾನಂದ ಹೆಗಡೆ, ನಗರಸಭೆ ಅಧ್ಯಕ್ಷಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾಶೆಟ್ಟಿ, ರಾಜೇಶ ಶೆಟ್ಟಿ, ಸಿಪಿಐ ಪ್ರದೀಪ, ಉಪತಹಸೀಲ್ದಾರ ರಮೇಶ ಹೆಗಡೆ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next