Advertisement

ಹಾಸಿಗೆ ಸಮಸ್ಯೆ, ಸ್ಮಶಾನದ ಕೊರತೆ

05:50 AM Jul 03, 2020 | Lakshmi GovindaRaj |

ಬೆಂಗಳೂರು: ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಗುರುವಾರ ದಾಖಲೆಯ 889 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಹಾಗೂ ಸ್ಮಶಾನದ ಕೊರತೆ ತಲೆದೋರಿದ್ದು, ಪಾಲಿಕೆ ನಿದ್ದೆಗೆಡಿಸಿದೆ. ನಗರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6,179ಕ್ಕೆ ಏರಿಕೆಯಾಗಿದೆ.

Advertisement

ಇದರಲ್ಲಿ ಆಸ್ಪತ್ರೆಗಳು, ಆರೈಕೆ ಕೇಂದ್ರಗಳು ಸೇರಿದಂತೆ ಹಲವು  ಕಡೆ 5505 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಮೇ ತಿಂಗಳಾಂತ್ಯಕ್ಕೆ ಕೇವಲ 12 ಸೋಂಕಿತರ ಸಾವಿನ ಪ್ರಮಾಣ ವರದಿಯಾಗಿತ್ತು. ಅದರೆ, ಜೂನ್‌ ನಂತರ ಸಾವಿನ ಪ್ರಮಾಣ ಹೆಚ್ಚಳವಾಗಿದ್ದು ಜೂನ್‌ ತಿಂಗಳಲ್ಲಿ 83 ಸೋಂಕಿತರು  ಸಾವಿಗೀಡಾಗಿದ್ದಾರೆ. ಈವರೆಗೆ 100 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 524 ಪುರುಷರು, 364 ಮಹಿಳೆಯರು ಹಾಗೂ ತೃತೀಯ ಲಿಂಗ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು,

ಬೆಂಗ ಳೂರು ದಕ್ಷಿಣ ವಲಯದಲ್ಲಿ  ಶೇ. 37, ಪೂರ್ವ ವಲಯದಲ್ಲಿ ಶೇ. 20, ಪಶ್ಚಿಮ ವಲಯದಲ್ಲಿ ಶೇ. 17 ರಷ್ಟು ಪಾಲಿದೆ. 495 ಕಂಟೈನ್ಮೆಂಟ್‌ ವಲಯ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ ಶಾಂತಲಾನಗರ 30, ಸಿಂಗಸಂದ್ರ 29, ಜಯನಗರ 22, ಧರ್ಮರಾಯಸ್ವಾಮಿ  ದೇವಸ್ಥಾನ 21, ವಿದ್ಯಾಪೀಠ 20, ಹೊಂಬೇಗೌಡ ನಗರ 18, ಸದ್ದುಗುಂಟೆ ಪಾಳ್ಯ 15, ರಾಜರಾಜೇಶ್ವರಿ ನಗರ 14, ಜಯನಗರ ಪೂರ್ವ 14, ಬಸವನ ಗುಡಿ 13, ಕತ್ರಿಗುಪ್ಪೆ 12, ಸುಧಾಮನಗರ 12, ಅರಿಕೆರೆ 12, ಮಡಿವಾಳ 10 ಸೋಂಕಿತರು  ದೃಢಪಟ್ಟಿದ್ದಾರೆ.

ಗ್ರಾಮಾಂತರ ಡಿಸಿಗೂ ಸೋಂಕು: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಅವರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಇರುವ ದೊಡ್ಡಬಳ್ಳಾಪುರದ ಕಚೇರಿ ಹಾಗೂ  ಬೆಂಗಳೂರಿನ ಕಂದಾಯ ಭವನದಲ್ಲಿರುವ ತಹಶೀಲ್ದಾರ್‌ ಕಚೇರಿಯನ್ನು ಸೀಲ್‌ಡೌನ್‌ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಹಶೀಲ್ದಾರ್‌ ಗೆ ತಗುಲಿರುವುದು ದೃಢಪಟ್ಟಿದ್ದು, ಅವರು  ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಮನೆ ಬಸವೇಶ್ವರ ನಗರ ದಲ್ಲಿದ್ದು, ಕುಟುಂಬಸ್ಥರನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ, ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ಅವರ ಕಾರು ಚಾಲಕನಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆಯುಕ್ತರು ಸ್ವಯಂ ಕ್ವಾರಂಟೈನ್‌ ಆಗಿದ್ದಾರೆ. ಎಲೆಕ್ಟ್ರಾನಿಕ್‌ ಸಿಟಿ ಆರ್‌ಟಿಒ ಕಚೇರಿಯಲ್ಲಿ ಡಿಎಲ್‌ ಕೇಸ್‌ ವಕರ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ಸಿಟಿಯಲ್ಲಿ “ಮರಳಿಗೂಡಿಗೆ …’ ಜಪ: ನಗರದಲ್ಲಿ ಕೋವಿಡ್‌ 19 ತಾರಕಕ್ಕೇರುತ್ತಿದ್ದು, ನಗರಕ್ಕೆ ಮರಳಿದ್ದ ವಲಸಿಗರು ಮತ್ತೆ ತವರಿನತ್ತ ಮುಖ ಮಾಡುತ್ತಿದ್ದು, ಲಾಕ್‌ ತೆರವಿನ ಬಳಿಕ ಕೆಲಸಕ್ಕೆ ಕರೆಸಿಕೊಂಡಿದ್ದ ಐಟಿ ಕಂಪನಿಗಳು ಮತ್ತೆ ವರ್ಕ್‌ಫ್ರಂ ಹೋಂ ಗೆ ಚಿಂತನೆ ನಡೆಸಿವೆ. ಕೆಲ ಕಂಪನಿಗಳಲ್ಲಿ ಸಿಬ್ಬಂದಿಗೆ, ಅವರ ಸಂಬಂಧಿಗಳಿಗಳಿ ಸೋಂಕು ದೃಢಪಡುತ್ತಿದೆ. ಅಲ್ಲದೆ ಸಿಬ್ಬಂದಿಗಳಿರುವ ಪ್ರದೇಶಗಳು ಸೀಲ್‌ಡೌನ್‌ ಆಗುತ್ತಿವೆ. ಇದರಿಂದ ಕಾರ್ಯಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಹೀಗಾಗಿ, ವರ್ಕ್‌ ಫ್ರಂ ಹೋಂಗೆ ಕಂಪನಿಗಳು ನಿರ್ಧರಿಸಿವೆ.

ಇನ್ನು ಕೆಲ ಕಂಪನಿಗಳು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆ ಲಾಕ್‌ಡೌನ್‌ ಸಂದರ್ಭದಲ್ಲಿ ಊರಿಗೆ ತೆರಳುವಾಗ ಉಂಟಾದ ಗೊಂದಲ  ಮತ್ತೆಯಾಗದಿರಲಿ ಎಂದು ಎಚ್ಚೆತ್ತ ಹಲವರು ಶುಕ್ರವಾರ ರಾತ್ರಿಯೇ ಊರು ಬಿಡಲು ಸಿದ್ಧಗೊಂಡಿದ್ದಾರೆ. ಪರಿಣಾಮ ಶನಿವಾರ ಹಾಗೂ ಭಾನುವಾರ ಬೆಂಗಳೂರಿನಿಂದ ದೂರದ ಜಿಲ್ಲೆಗಳಿಗೆ ತೆರಳುವ ಬಸ್‌ಗಳ ಸೀಟ್‌ ಗಳು ಈಗಾಗಲೇ  ಭರ್ತಿಯಾಗಿವೆ. ಅಲ್ಲದೆ ಖಾಸಗಿ ಕಾರುಗಳನ್ನು ಅನೇಕರು ಬುಕಿಂಗ್‌ ಮಾಡಿ ಕಾಯ್ದಿರಿಸಿದ್ದಾರೆ.

ಅಂತ್ಯಸಂಸ್ಕಾರ ಕಾಣದ ಶವಗಳು: ಕೋವಿಡ್‌ 19 ಸೋಂಕಿನಿಂದ ಮೃತಪಟ್ಟು ಎರಡು ದಿನವಾದರೂ, ನಾಲ್ವರಿಗೆ ಪಾಲಿಕೆ ಅಧಿಕಾರಿಗಳು ಅಂತ್ಯಸಂಸ್ಕಾರ ನಡೆಸಿಲ್ಲ. ರಾಜೀವ್‌ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿಯೇ ಸೋಂಕಿತರ  ಶವಗಳನ್ನು ಇಡಲಾಗಿದೆ. ಶವಗಳನ್ನು ಪಾಲಿಕೆ ಸಿಬ್ಬಂದಿಗೆ ಹಸ್ತಾಂತರಿಸಲು ಅಗತ್ಯ ಪ್ರಕ್ರಿಯೆ ಮುಕ್ತಾಯವಾಗಿವೆ. ಮೂರು ಶವ ಆಸ್ಪತ್ರೆಯಲ್ಲಿವೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next