Advertisement

ಸ್ವಯಂ ಉದ್ಯೋಗಿಗಳಾಗಿ: ಮಹಿಳೆಯರಿಗೆ ಪೇಜಾವರ ಶ್ರೀ ಸಲಹೆ

08:31 PM Jul 27, 2023 | Team Udayavani |

ಮೈಸೂರು: ಇಂದಿನ ದುಬಾರಿ ಜೀವನದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಿಂದ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆ ಕಷ್ಟ. ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಕೈಜೋಡಿಸಬೇಕು ಎಂದು ಉಡುಪಿಯ ಶ್ರೀ ಪೇಜಾವರ ಮಠದ  ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

Advertisement

ಇಲ್ಲಿನ  ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ಸಭಾಂಗಣದಲ್ಲಿ ಶ್ರೀ ದುರ್ಗಾ ಫೌಂಡೇಶನ್‌ ಹಾಗೂ ಶ್ರೀ ಸಂಜೀವಿನಿ ಫೌಂಡೇಶನ್‌ ಆಶ್ರಯದಲ್ಲಿ  ಗುರುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ  ಉಚಿತ ಕಂಪ್ಯೂಟರ್‌, ಟೈಲರಿಂಗ್‌, ಮೇಕಪ್‌,  ಹ್ಯಾಂಡ್‌ವರ್ಕ್‌ ತರಬೇತಿ ಹಾಗೂ ಮಹಿಳಾ ಅಸ್ಮಿತೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಹಿಳೆಯರಿಗೆ ಆಯೋಜಿಸುವ ವಿವಿಧ ತರಬೇತಿಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ  ಪ್ರಾಧ್ಯಾಪಕರಾದ ಡಾ| ಆರ್‌.ಎಚ್‌.ಪವಿತ್ರಾ  ಮಾತನಾಡಿ, ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಸರಸ್ವತಿಪುರಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಿ.ಎಂ. ರವೀಂದ್ರ, ಶ್ರೀ ದುರ್ಗಾ ಫೌಂಡೇಶನ್‌ ಅಧ್ಯಕ್ಷೆ  ರೇಖಾ ಶ್ರೀನಿವಾಸ್‌  ಮುಂತಾದವರು ಮಾತನಾಡಿದರು. ಪ್ರಮುಖರು ಉಪಸ್ಥಿತರಿದ್ದರು.

Advertisement

ಸಮಾಜ ಸೇವಕರಾದ ಕೆ.  ರಘುರಾಮ್‌ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ . ಟಿ. ಪ್ರಕಾಶ್‌, ಕಾರ್ಯಾಧ್ಯಕ್ಷ  ರವಿಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಎಂ. ತಂತ್ರಿ, ಶ್ರೀ ದುರ್ಗಾ ಫೌಂಡೇಶನ್‌ ಅಧ್ಯಕ್ಷರಾದ ರೇಖಾ ಶ್ರೀನಿವಾಸ್‌, ಶ್ರೀ ಸಂಜೀವಿನಿ ಫೌಂಡೇಶನ್‌ ಅಧ್ಯಕ್ಷ ಭರತ್‌ ಕುಮಾರ್‌, ಅಂಬಾ ಭವಾನಿ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಘಾಟೆ ಅವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next