ಉಳ್ಳಾಲ: ನಮ್ಮ ದೇಶೀಯ ಕ್ರೀಡೆಯಾಗಿರುವ ಕುಸ್ತಿ ಪಂದ್ಯಾಟಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಬೇಕಾಗಿದ್ದು, ತುಳುನಾಡಿನ ಯುವಜನರು ಈ ಕಲೆಯನ್ನು ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಉಳ್ಳಾಲ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಕರ ಕಿಣಿ ಅಭಿಪ್ರಾಯಪಟ್ಟರು.
ಅವರು ಶ್ರೀವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ.ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ ನ್ಪೋರ್ಟ್ಸ್ ಕ್ಲಬ್ ಮೊಗವೀರಪಟ್ಣ, ಉಳ್ಳಾಲ, ಇದರ 70ನೇ ಉಳ್ಳಾಲ ದಸರಾ ಪ್ರಯುಕ್ತ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥವಾಗಿ ಉಳ್ಳಾಲ ಶ್ರೀ ಶಾರದಾನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ 17 ನೇ ವರ್ಷದ ಕುಸ್ತಿ ಪಂದ್ಯಾಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ಅಮೀನ್ ಉದ್ಘಾಟಿಸಿದರು.ಕುಸ್ತಿ ಪಂದ್ಯಾಟದ ಅಖಾಡ ಉದ್ಘಾಟನೆಯನ್ನು ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಕಾಶಿನಾಥ್ ಪುತ್ರನ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಾಧವ ಉಳ್ಳಾಲ, ಉಳ್ಳಾಲ ಶ್ರೀರಾಮ ಭಜನಾ ಮಂದಿರದ ಪ್ರಧಾನ ಅರ್ಚಕ ರಾಘವ ಪುತ್ರನ್, ಉಳ್ಳಾಲ ಮೊಗವೀರ ಸಂಘದ ಶಾಲಾ ಸಂಚಾಲಕ ಸತೀಶ್ ಪುತ್ರನ್, ಉಳ್ಳಾಲ ನಗರ ಸಭೆ ಸದಸ್ಯೆ ಮೀನಾಕ್ಷಿ ದಾಮೋದರ್, ಉಳ್ಳಾಲ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ಕಿಶೋರ್ ಕಾಂಚನ್, ವಿಶ್ವನಾಥ್ ಬಂಗೇರ, ಅರುಣ್ ಪುತ್ರನ್, ಅಶ್ವಥ್ ಪುತ್ರನ್, ರಾಜೇಶ್ ಬಂಗೇರ, ತಿಲಕ್ ಬಂಗೇರ, ಮಧುರಾಜ್ ಅಮಿನ್, ಭಾನುಪ್ರಕಾಶ್, ಶರತ್ ಬಂಗೇರ ಉಪಸ್ಥಿತರಿದ್ದರು.
ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಯಶವಂತ ಪಿ. ಅಮೀನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೋಹಿದಾಸ್ ಬಂಗೇರ ವಂದಿಸಿದರು. ಮೊಗವೀರ ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಜೇಶ್ ಪುತ್ರನ್ ನಿರೂಪಿಸಿದರು.