Advertisement

ಹೊಸ ಜನಾಂಗಕ್ಕೆ ಕೃಷಿ ಸಂಸ್ಕೃತಿಯ ಪರಿಚಯವಾಗಲಿ

09:03 PM Jul 07, 2019 | Sriram |

ಉಡುಪಿ: ಈಗಿನ ಹೊಸ ತಲೆಮಾರಿನವರಿಗೆ ನಮ್ಮ ಕೃಷಿ ಸಂಸ್ಕೃತಿ, ಪರಂಪರೆಯ ಪರಿಚಯವಾಗಬೇಕು. ಅದು ಅವರ ಅನುಭವಕ್ಕೂ ಬರಬೇಕು ಎಂದು ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಭಿಪ್ರಾಯಪಟ್ಟರು.ಜು.7ರಂದು ಅಲೆವೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಲೆವೂರಿನ ವಿ4 ಗ್ರೀನ್ಸ್‌ ಗದ್ದೆ ಯಲ್ಲಿ ನಡೆದ 15ನೇ ವರ್ಷದ “ಕೆಸರ್‌ಡೊಂಜಿ ದಿನ’ ಗ್ರಾಮೀಣ ಕ್ರೀಡಾಕೂಟ -2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

“ಕೆಸರ್‌ಡೊಂಜಿ ದಿನ ಕಾರ್ಯಕ್ರಮವನ್ನು ಅವಿಭಜಿತ ದ.ಕ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಆಯೋಜಿಸಿದ ಹೆಗ್ಗಳಿಕೆ ಅಲೆವೂರು ಗಣೇಶೋತ್ಸವ ಸಮಿತಿಯದ್ದು. ಇದು ಕೇವಲ ಒಂದು ದಿನದ ಮೋಜಿಗೆ ಸೀಮಿತವಾಗದೆ ಯುವಕರಲ್ಲಿ ಕೃಷಿ ಚಟುವಟಿಕೆ ಕುರಿತು ಆಸಕ್ತಿ ಮೂಡಿಸುವಂತಾಗಬೇಕು ಎಂದು ದಿನಕರ ಬಾಬು ಹೇಳಿದರು.

ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ನಾಯಕ್‌, ಉಪಾಧ್ಯಕ್ಷೆ ಜಯಲಕ್ಷ್ಮೀ ಹಂಸರಾಜ್‌, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶೇಖರ್‌ ಕಲ್ಮಾಡಿ, ಅಧ್ಯಕ್ಷ ರೂಪೇಶ್‌ ಆಚಾರ್ಯ, ಪ್ರಗತಿಪರ ಕೃಷಿಕ ಶ್ರೀಧರ್‌ ಶೆಟ್ಟಿ, ಉದ್ಯಮಿ ಹರೀಶ್‌ ಶೆಟ್ಟಿ ತೆಂಕುಮನೆ, ಚಿತ್ರ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಉಪಸ್ಥಿತರಿದ್ದರು. ಮಂಜೇಶ್‌ ಕುಮಾರ್‌ ಸ್ವಾಗತಿಸಿದರು. ಸುಖೇಶ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ಕೆಸರು ತುಂಬಿದ ಗದ್ದೆ ಆಟೋಟ ಮೈದಾನ

ಕೆಸರು ತುಂಬಿದ ಗದ್ದೆಯೇ ವಿವಿಧ ರೀತಿಯ ಆಟೋಟಗಳಿಗೆ
ಮೈದಾನವಾಯಿತು.

Advertisement

ಮಕ್ಕಳು, ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾತ್ಕಾಲಿಕವಾಗಿ ರಚಿಸಲಾಗಿದ್ದ ಏತದಿಂದ ಗದ್ದೆಗೆ ನೀರು ಹಾಯಿಸುವ ಮೂಲಕ ಕ್ರೀಡಾಕೂಟಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.

ಓಟ, ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಪಿರಮಿಡ್‌ನ‌ಲ್ಲಿ ಮೊಸರು ಕುಡಿಕೆ,ವಾಲಿಬಾಲ್‌, ತ್ರೋಬಾಲ್‌, ಹಿಮ್ಮುಖ ಓಟ, ನಿಧಿ ಶೋಧ, ಮ್ಯೂಸಿಕಲ್‌ ಚೇರ್‌ ಹೀಗೆ ವಿವಿಧ ರೀತಿಯ ಆಟೋಟಗಳನ್ನು ಆಯೋಜಿಸಲಾಗಿತ್ತು.

ಕೆಸರಿನಲ್ಲಿ ಓಡುವುದು, ಆಡುವುದು ಮಾತ್ರವಲ್ಲದೆ ಕೆಸರಿನಲ್ಲಿ ಬೀಳುವುದಕ್ಕೆ ಎಂದೇ ಒಂದಷ್ಟು ಮಂದಿ ಗದ್ದೆಗಿಳಿದರು. ಇನ್ನು ಕೆಲವು ಮಂದಿ ಗದ್ದೆ

ಬದುವಿನಲ್ಲಿ ನಿಂತು ಮೈ ಮೇಲೆ ಕೆಸರು ಚಿಮ್ಮಿಸಿಕೊಂಡು ಸಂಭ್ರಮಿಸಿದರು !.

ಮಧ್ಯಾಹ್ನ ಗಂಜಿ ಸಹಿತವಾಗಿ ತುಳುನಾಡಿನ ಆಟಿಯ ಪದಾರ್ಥಗಳನ್ನು ಒಳಗೊಂಡ ಊಟೋಪಚಾರವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next