Advertisement

ನೀವೂ ಭೂ ಒಡೆಯ ಆಗಿ…ಇಲ್ಲಿದೆ ಮಾಹಿತಿ!

09:19 AM Dec 27, 2022 | Team Udayavani |

ಡಾ| ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯು ಪರಿಶಿಷ್ಟ ಜಾತಿ- ಪಂಗಡ ನಿಗಮದ ಪ್ರತಿಷ್ಠಿತ ಯೋಜನೆಯಾಗಿದೆ. ಈ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಭೂಮಿಯನ್ನು ಖರೀದಿಸಿ ಶೇ.50 ಸಹಾಯಧನದೊಂದಿಗೆ ನೀಡಲಾಗುವುದು. ಆದಿಕರ್ನಾಟಕ, ಆದಿ ದ್ರಾವಿಡ ಸಹಿತ ಇತರ ಉಪಜಾತಿಗೆ ಸೇರಿರುವ ಅರ್ಹರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Advertisement

ಅರ್ಜಿ ಸಲ್ಲಿಕೆ ಹೇಗೆ?
ಪ್ರತೀ ವರ್ಷ ಎಪ್ರಿಲ್‌ ಬಳಿಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಆನ್‌ಲೈನ್‌ ಸುವಿಧ ವೆಬ್‌ಸೈಟ್‌ ಅಥವಾ ಆ್ಯಪ್‌ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿಗೆ ಬೇಕಾಗುವ ದಾಖಲೆ ಏನು?
1. ಅರ್ಜಿದಾರರ ಭಾವಚಿತ್ರ
2. ಜಾತಿ- ಆದಾಯ ಪ್ರಮಾಣ ಪತ್ರ
3. ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ/ ಆಧಾರ್‌ ಕಾರ್ಡ್‌ ಪ್ರತಿ
4. ಯೋಜನಾ ವರದಿ/ ದರ ಪಟ್ಟಿ

ಯಾವ್ಯಾವ ಜಿಲ್ಲೆ
ಅವರು ಅರ್ಹರು?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ. ಇತರ ಎಲ್ಲ ಜಿಲ್ಲೆಗಳು.

ಯೋಜನೆ ಜಾರಿಗೊಳಿಸಿರುವ ನಿಗಮಗಳು ಯಾವುವು?
1. ಅಂಬೇಡ್ಕರ್‌ ಅಭಿವೃದ್ಧಿ ನಿಗಮ
2. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ

Advertisement

ಯಾರ್ಯಾರು ಅರ್ಹರು?
ಪರಿಶಿಷ್ಟ ಜಾತಿ-ಪಂಗಡ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ಆಗಿರಬೇಕು(ಕಳೆದ 15 ವರ್ಷದಿಂದ ರಾಜ್ಯದ ನಿವಾಸಿ ಆಗಿರಬೇಕು).
ಈ ಯೋಜನೆಗೆ ಜಮೀನು ಮಾರಾಟ ಮಾಡುವ ಭೂ ಮಾಲಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
8 ವರ್ಷದಿಂದ 50 ವರ್ಷ ವಯೋಮಿತಿ ಹೊಂದಿರಬೇಕು.
ಕುಟುಂಬದ ಯಾವುದೇ ಸದಸ್ಯರು ಸರಕಾರಿ/ ಅರೆ ಸರಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿ ಇರಬಾರದು.
ಈ ಹಿಂದೆ ಕುಟುಂಬದವರು ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮೀಣ ಭಾಗಕ್ಕೆ 1.5 ಲಕ್ಷ ರೂ. ಹಾಗೂ ನಗರ ನಿವಾಸಿಗಳಿಗೆ 2 ಲಕ್ಷ ರೂ. ಮಿತಿಯಲ್ಲಿರಬೇಕು.

ಸಿಗುವ ಸೌಲಭ್ಯ
ಈ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಘಟಕ ವೆಚ್ಚ 15 ಲಕ್ಷ ರೂ.ಗಳಲ್ಲಿ ಲಭ್ಯವಾಗುವಷ್ಟು ಖುಷ್ಕಿ ಅಥವಾ ತರಿ/ ಭಾಗಾಯ್ತು ಜಮೀನನ್ನು ಖರೀದಿಸಿ ನೀಡಲಾಗುತ್ತದೆ. (ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಘಟಕದ ವೆಚ್ಚ 20 ಲಕ್ಷ ರೂ. ಆಗಿದೆ.) ಇದರಲ್ಲಿ ಶೇ.50ರಷ್ಟು ಸಹಾಯಧನ ಸಿಗುತ್ತದೆ. ಉಳಿದ ಶೇ.50 ಸಾಲವಾಗಿರುತ್ತದೆ. ಈ ಸಾಲವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ಶೇ.6ರ ಬಡ್ಡಿದರದಲ್ಲಿ ಮರು ಪಾವತಿ ಮಾಡಬೇಕಿದೆ. ಫ‌ಲಾನುಭವಿಯು ವಾಸಿಸುವ ಸ್ಥಳದಿಂದ ಗರಿಷ್ಠ 10 ಕಿ.ಮೀ.ವ್ಯಾಪ್ತಿಯೊಳಗೆ ಜಮೀನನ್ನು ಖರೀದಿಸಿ ನೀಡಲಾಗುತ್ತದೆ.

-ಹರೀಶ್‌, ಹಾಡೋನಹಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next