ನ್ಯೂಸ್ ರೂಂನಲ್ಲಿ ಕೆಲಸ ಮಾಡಲು ಅಸಕ್ತಿಯಿರುವವರಿಗೆ ಮಾರ್ಗದರ್ಶನ ನೀಡುವ ಉದ್ದೇಶವಿರುವ ಪತ್ರಿಕೋದ್ಯಮ ಕಾಲೇಜೊಂದು ಶುರುವಾಗಿದೆ. “ಅಲ್ಮಾ ಸೂಪರ್ ಮೀಡಿಯಾ ಸ್ಕೂಲ್’ ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳವರಿಗಾಗಿ ಒಂದು ವರ್ಷದ ಪಿ.ಜಿ ಡಿಪ್ಲೋಮಾ ಕೋರ್ಸನ್ನು ಸಿದ್ಧಪಡಿಸಿದೆ. “ಮಾಧ್ಯಮ ಅನೇಕ’ ಸಂಸ್ಥೆಯ ಸಹಯೋಗದಲ್ಲಿ ಕೋರ್ಸಿನ ಪಠ್ಯ ರೂಪಿತವಾಗಿದೆ. ಆಧುನಿಕ ಜಗತ್ತಿನ ಸುದ್ದಿಮನೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಾರೆ. ಯಾವುದೇ ಪದವಿ ಹೊಂದಿದವರು ಮತ್ತು ಆಂಗ್ಲ ಭಾಷಾಜ್ಞಾನ ಇರುವವರು ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಹರು.
“ಅಲ್ಮಾ ಸೂಪರ್ ಮೀಡಿಯಾ ಸ್ಕೂಲ್’ ಕಾಲೇಜಿನ ಸ್ಥಾಪಕರು ಪತ್ರಕರ್ತರಾದ ಗೌರೀಶ್ ಅಕ್ಕಿ. ಎಲ್ಲಾ ಖ್ಯಾತ ಕನ್ನಡ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿರುವವರು ಗೌರೀಶ್. ಸುದ್ದಿಮನೆಯ ಒಳಗು ಹೊರಗನ್ನು ಪ್ರತ್ಯಕ್ಷವಾಗಿ ನೋಡಿರುವ ಅವರು ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಪತ್ರಿಕೋದ್ಯಮದ ಖ್ಯಾತನಾಮರ ಮಾರ್ಗದರ್ಶನವೂ ವಿದ್ಯಾರ್ಥಿಗಳಿಗೆ ಸಿಗಲಿದೆ.
ಹೆಚ್ಚಿನ ಮಾಹಿತಿಗೆ: contact@almasupermedia.com
ಸಂಪರ್ಕ ಸಂಖ್ಯೆ: +91 7618746667