Advertisement

ಗ್ರೇಟ್‌ ಆಗುವ ಕಲೆ

07:30 AM Apr 03, 2018 | Team Udayavani |

ಅದೊಂದು ಕಾಲ ಇತ್ತು. ಅಪ್ಪ - ಅಮ್ಮ ಶ್ರೀಮಂತರಾಗಿದ್ರೆ, ಅಪ್ಪ- ಅಮ್ಮನ ಬಳಿ ದುಡ್ಡಿದ್ದರೆ, ನಿಮ್ಮತ್ರ ಇಷ್ಟು ಬಂಗಾರ ಇದ್ರೆ, ನಿಮ್ಮತ್ರ ಇಷ್ಟು ಆಸ್ತಿ ಇದ್ರೆ, ನಿಮ್ಮತ್ರ ಇಷ್ಟು ನೆಲ ಇದ್ರೆ, ನಿಮಗೆ ಲೈಫ‌ಲ್ಲಿ ಒಂದು ಚಾನ್ಸ್‌ ಇದೆ ಅಂತ. ಈಗ ದೇವರಾಣೆ ಹೇಳ್ತೀನ್ರೀ, ಅವೇನೂ ಬೇಕಾಗಿಲ್ಲ…

Advertisement

ಕನಸುಗಳು ಈಡೇರಬೇಕು ಅಂದ್ರೆ ಎರಡು ವಿಷಯ ಬಹಳ ಮುಖ್ಯ. ಅದರಲ್ಲಿ ಒಂದು, ನಿಮ್ಮ ದೇಹ. ನಿಮ್ಮ ಕನಸುಗಳೆಲ್ಲವೂ ಈಡೇರಿ, ನೀವು ಗುರಿ ತಲುಪಬೇಕಂದ್ರೆ, ನಿಮಗಿರುವಂಥ ಒಂದೇ ಒಂದು ವಾಹನ ನಿಮ್ಮ ದೇಹ. ನನ್ನ ಕನಸುಗಳನ್ನು ನೀವು ಈಡೇರಿಸುವುದಕ್ಕೆ ಆಗೋಲ್ಲ, ಅದನ್ನು ನಾನೇ ಮಾಡ್ಬೇಕು. ಅದಕ್ಕೆ ನಾನು ಫಿಟ್‌ ಆಗಿರಬೇಕು. “ವೀಕೆಂಡ್‌ ವಿತ್‌ ರಮೇಶ್‌’ನಲ್ಲಿ ದೇವೇಗೌಡರ ಕುರಿತ ಎಪಿಸೋಡ್‌ನ‌ಲ್ಲಿ ನಾನು 12 ಗಂಟೆ ನಿಂತ್ಕೊಬೇಕಾಯಿತು. ನಿಮ್ಮ ದೇಹ, ನಿಮಗೆ ದಕ್ಕಿರುವಂಥ ಅದ್ಭುತ ಉಡುಗೊರೆ. ಈ ವಯಸ್ಸಿನಲ್ಲಿ ನಿಮಗೆ ಅಂಟಿಕೊಳ್ಳುವಂಥ ವ್ಯಸನಗಳು, ಪ್ರೀತಿ- ಪ್ರೇಮದ ಆಕರ್ಷಣೆಗಳು, ಅವೆಲ್ಲವೂ ಸ್ವಾಭಾವಿಕ. ಆದರೆ, ಅವ್ಯಾವುದಕ್ಕೂ ನೀವು ಗುಲಾಮರಾಗದೇ, ನಿಮ್ಮ ದೇಹದ ಆರೋಗ್ಯದ ಕಡೆಗೆ ಗಮನ ಕೊಡುವುದು ಬಹಳ ಮುಖ್ಯ.

   ಎರಡನೆಯದಾಗಿ, ಅಷ್ಟೇ ಮುಖ್ಯವಾದುದು ನಿಮ್ಮ ಮೆದುಳು. ಅಂದರೆ, ನಿಮ್ಮ ಯೋಚನೆಗಳು. ನೀವು ಏನು ನೋಡ್ತಾ ಇದ್ದೀರೋ, ನೀವೇನು ಓದ್ತಾ ಇದ್ದೀರೋ, ಅದೇ ನೀವಾಗ್ತಿರಿ. ನೀವು ಮೊಬೈಲ್‌ನಲ್ಲಿ ಏನೇನೋ ನೋಡ್ತಾ ಇರ್ತೀರಲ್ಲ, ನಿಮಗೆ ಗೊತ್ತಿಲ್ಲದೇ ಅವೆಲ್ಲ ನಿಮ್ಮ ಮೆದುಳೆಂಬ ಕಂಪ್ಯೂಟರಿನಲ್ಲಿ ಫೀಡ್‌ ಆಗ್ತಿರುತ್ತೆ. ನಿಮ್ಮ ಕಂಪ್ಯೂಟರೊಳಗೆ ನೀವು ಏನಾಗ್ತಿದ್ದೀರ ನೋಡಿ… ಡಸ್ಟ್‌ಬಿನ್‌ ಥರ ಟ್ರಾಶ್‌ ಆಗ್ತಿದ್ರೆ, ನೀವು ಅದ್ಭುತವನ್ನು ಸಾಧಿಸೋಕೆ ಸಾಧ್ಯನೇ ಇಲ್ಲ. ಮನರಂಜನೆಗೋಸ್ಕರ ಸ್ವಲ್ಪ ಹೊತ್ತು ಅದೂ ಇದು ನೋಡೋದೆಲ್ಲ ಓಕೆ. ನೀವು ನೋಡುವಂಥ ವಿಷಯಗಳು, ನೀವು ಓದುವಂಥ ವಿಷಯಗಳೇ, ನಿಮ್ಮ ಜೀವನವನ್ನು ನಿರ್ಣಯಿಸುತ್ತವೆ.

   360 ಡಿಗ್ರಿಯಲ್ಲಿ ನಿಮ್ಮ ಬದುಕನ್ನು ರೂಪಿಸಿ. ಬರೀ ಓದು, ಬರೀ ನ್ಪೋಟ್ಸುì ಅಥವಾ ಬರೀ ಫ್ಯಾಶನ್ನು ಅಥವಾ ಬರೀ ಅಂಕಲ್ಲು, ಆಂಟಿ, ಫ‌ಂಕ್ಷನ್ನು ಅಂತ ಒಂದಕ್ಕೆ ಸೀಮಿತವಾಗಬೇಡಿ. ಲೈಫ್ ಈಸ್‌ ಬ್ಯೂಟಿಫ‌ುಲ್‌. 360 ಡಿಗ್ರಿಯಲ್ಲಿ ನೀವು ಲೈಫ‌ನ್ನು ಎಂಜಾಯ್‌ ಮಾಡ್ಬೇಕು. ಜೀವನದ ಎಲ್ಲ ಅದ್ಭುತಗಳು ನಿಮಗೆ ಸಿಗಬೇಕು, ಅದು ಸಿಗುತ್ತೆ. ನಂಬಿ, ನಿಮ್ಮಿಂದ ಆಗುತ್ತೆ.

ನಾನು “ವೀಕೆಂಡ್‌ ವಿತ್‌ ರಮೇಶ್‌’ ಶೋನಲ್ಲಿ ಸಾಧಕರನ್ನು ಗಮನಿಸುತ್ತಾ ಇದ್ದೆ. ಅಲ್ಲೇ ಗೊತ್ತಾಯಿತು, ಎಲ್ಲ ಶಕ್ತಿನೂ ನಿಮ್ಮ ತಲೆಯಲ್ಲೇ ಇದೆ. ಈ ಎರಡು ಕಿವಿ ಮಧ್ಯೆ ಇದೆ ಅಂತ. ನೋಡಿ ಸರ್‌, ಈ 5 ಕೈಬೆರಳು, ಈ 5 ಕೈಬೆರಳು… ಈ 10 ಜನ ಬೆಸ್ಟ್‌ ಫ್ರೆಂಡ್ಸ್‌. ಬೇರಾರೂ ಬೇಕಾಗಿಲ್ಲ. ಈ ಐದು ಸೇರಿದರೆ, ಮುಷ್ಟಿ ಆಗುತ್ತೆ. ನಿಮ್ಮ ಬೆವರನ್ನು ನಂಬಿ, ನಿಮ್ಮ ತಲೆಯನ್ನು ನಂಬಿ. ಅಷ್ಟು ಸಾಕು.

Advertisement

   “ಕುಂಗ್‌ ಫ‌ು ಪಾಂಡಾ’ ಅಂತ ಒಂದು ಫಿಲ್ಮ್ ಇದೆ. ಕಾಟೂìನ್‌ ಫಿಲ್ಮು. ಕುಂಗ್‌ ಫ‌ು, ದೊಡ್ಡ ಕರಡಿ ಥರ ಇರುತ್ತೆ. ಆ ಕರಡಿಗೆ ಕುಂಗ್‌ ಫ‌ು ಕಲೀಬೇಕು ಅಂತ ಫೈಟ್‌ ಮೇಷ್ಟ್ರ ಹತ್ತಿರ ಹೋಗುತ್ತೆ. “ನಾ ಗ್ರೇಟ್‌ ಆಗ್ಬೇಕ್‌ ಸರ್‌ ಲೈಫ್ನಲ್ಲಿ. ಹೇಗಾದ್ರೂ ಆಗ್ಬೇಕು… ಹೇಗೆ ಹೇಗೆ ಹೇಗೆ?’ ಅಂತ ಪೀಡಿಸುತ್ತಲೇ ಇರುತ್ತೆ ಗುರೂವನ್ನು. ಗುರು ಹೇಳುತ್ತೆ, “ನೋಡು, ಅಲ್ಲಿ ದೊಡ್ಡ ಲೈಟ್‌ ಇದೆಯಲ್ವೇನೋ, ಆ ಲೈಟ್‌ ಮೇಲೆ ಹತ್ತು, ಅಲ್ಲೊಂದು ಚೀಟಿ ಇದೆ. ಹೇಗೆ ಗ್ರೇಟ್‌ ಆಗೋದು ಅಂತ ಆ ಚೀಟಿಯಲ್ಲಿ ಬರೆದಿಟ್ಟಿದ್ದೀನಿ. ತಗೋ ಅದು’.

   ಆ ಕರಡಿ ಕಷ್ಟಪಟ್ಟು ಮೇಲೆ ಹತ್ತಿ, ಅಲ್ಲಿಟ್ಟಿದ ಚೀಟಿ ತಗೊಳ್ಳುತ್ತೆ. ಏನ್‌ ರಹಸ್ಯ ಅಂತ ತೆಗೆದು ನೋಡಿದ್ರೆ, ಒಳಗೆ ಏನೂ ಇರೋದಿಲ್ಲ! ಪಾಂಡಾಗೆ ಕೋಪ, “ರೀ ಏನ್ರೀ ರೀ…’ ಅಂತ ದಬಾಯಿಸುತ್ತೆ. ಮೇಸ್ಟ್ರೆ, “ಯೋ, ಸರಿಯಾಗಿ ನೋಡಯ್ಯ’ ಅಂತಾನೆ. ನೋಡಿದ್ರೆ, ಅದು ಬರೀ ಚೀಟಿ ಅಲ್ಲ. ಅದು ಕನ್ನಡಿ ಥರ ಪ್ರತಿಬಿಂಬಿಸುವ ಚೀಟಿ. ಆ ಚೀಟಿಯಲ್ಲಿ ಪಾಂಡಾದ ಮುಖ ಕಾಣಿ¤ರುತ್ತೆ. ಆಗ ಗುರು ಹೇಳ್ತಾನೆ, “ಗ್ರೇಟ್‌ನೆಸ್‌ ಸೀಕ್ರೆಟ್‌ ಈಸ್‌ ಯೂ’! ನೀನು ಸೀಕ್ರೆಟ್‌ ಅಷ್ಟೇ, ಗ್ರೇಟ್‌ನೆಸ್‌ಗೆ ಬೇರೇನೂ ಸೀಕ್ರೆಟ್‌ ಇಲ್ಲ!

   ಅದೊಂದು ಕಾಲ ಇತ್ತು. ಅಪ್ಪ - ಅಮ್ಮ ಶ್ರೀಮಂತರಾಗಿದ್ರೆ, ಅಪ್ಪ- ಅಮ್ಮನ ಬಳಿ ದುಡ್ಡಿದ್ದರೆ, ನಿಮ್ಮತ್ರ ಇಷ್ಟು ಬಂಗಾರ ಇದ್ರೆ, ನಿಮ್ಮತ್ರ ಇಷ್ಟು ಆಸ್ತಿ ಇದ್ರೆ, ನಿಮ್ಮತ್ರ ಇಷ್ಟು ನೆಲ ಇದ್ರೆ, ನಿಮಗೆ ಲೈಫ‌ಲ್ಲಿ ಒಂದು ಚಾನ್ಸ್‌ ಇದೆ ಅಂತ. ಈಗ ದೇವರಾಣೆ ಹೇಳ್ತೀನ್ರೀ, ಅವೇನೂ ಬೇಕಾಗಿಲ್ಲ. ನಿಮ್ಮ ಹಿನ್ನೆಲೆ ಏನು ಬೇಕಾದ್ರೂ ಇರಲಿ. ನಿಮಗೆ ಬೇಕಿರೋದು ಒಂದು ಐಡಿಯಾ ಅಷ್ಟೇ. ಒಂದೇ ಒಂದು ಐಡಿಯಾ. ಅದೊಂದು ಸಾಕು.

  “ಫಾರ್ಚೂನ್‌ 500′ ಅಂತ ಒಂದು ಮ್ಯಾಗಜಿನ್‌ ಇದೆ. ಅದರಲ್ಲಿ ಈ ವರ್ಷದ ಕೋಟ್ಯಾಧಿಪತಿಗಳು ಯಾರು ಅಂತ ಲಿಸ್ಟ್‌ ಹಾಕ್ತಾರೆ. ಅದರಲ್ಲಿ ನೋಡಿದ್ರೆ, ಶೇ.90 ಮಂದಿ ಹೊಸಬರು. ಎಲ್ಲರೂ ಹೊಸಬರು. ಅವರ್ಯಾರಿಗೂ ದೊಡ್ಡ ಬ್ಯಾಕ್‌ರೌಂಡ್‌ ಇಲ್ಲ. ಎಲ್ಲರೂ ಆರ್ಡಿನರಿ, ಲೋವರ್‌ ಮಿಡ್ಲ್ಕ್ಲಾಸ್‌, ಅದಕ್ಕಿಂತ ಲೋವರ್‌ ಮಿಡ್ಲ್ಕ್ಲಾಸ್‌ ಫ್ಯಾಮಿಲಿಯಿಂದ ಬಂದ ಹುಡುಗರು. ಆದರೆ, ನಂಬಿದ್ರು! ಅವರನ್ನು ಅವರು ನಂಬಿದ್ರು!

ರಮೇಶ್‌ ಅರವಿಂದ್‌

Advertisement

Udayavani is now on Telegram. Click here to join our channel and stay updated with the latest news.

Next