Advertisement
“ನಿನಗೂ ಒಂದು ಸರ್ಕಾರಿ ನೌಕರಿ ಇದ್ದಿದ್ದರೆ ಇಷ್ಟೆಲ್ಲಾ ಪಜೀತಿ ಆಗುತ್ತಿತ್ತಾ?’ ನೆರೆಹೊರೆಯವರು “ಸರಿಯಾದ ಕೆಲಸವಿಲ್ಲ’ ಎನ್ನುತ್ತಾರೆ. ಸಂಬಂಧಿಕರು “ಏನು ಮಾಡಿಕೊಂಡಿದ್ದೀಯಾ?’ ಎಂದು ಪದೇ ಪದೇ ಪ್ರಶ್ನಿಸುತ್ತಾರೆ. “ನಿನಗೆ ಹೆಣ್ಣು ಕೇಳಲು ನಾನೇ ಹೆದರುವ ಸ್ಥಿತಿ ಬಂದಿದೆ. ಒಂದು ಸರ್ಕಾರಿ ಕೆಲಸ ಅಂತ ಆದ್ರೆ, ನೋಡು.. ನಿನ್ನ ಹಿಂದೆ ಎಷ್ಟು ಜನ ಬಂದು ನಿಲ್ಲುತ್ತಾರೆ ಅನ್ನೋದನ್ನು…’ ಎಂದು ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕ ನಿತ್ಯವೂ ಕಾಡುತ್ತಾ ಅಣ್ಣ ತಮ್ಮಂದಿರ ಮೇಲೆ ಒತ್ತಡ ಹೇರುವುದನ್ನು ನೋಡಿರುತ್ತೇವೆ. ಜೊತೆಗೆ ಸರ್ಕಾರಿ ನೌಕರಿಯನ್ನೇ ಮಾಡಬೇಕು ಎಂದು ಹಂಬಲಿಸುವವರನ್ನು, ಪರಿತಪಿಸುವವರನ್ನು ಕಂಡಿರುತ್ತೇವೆ.
ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಜಿಲ್ಲಾವಾರು, ವಿವಿಧ ಇಲಾಖಾ ಕಾರ್ಯಾಲಯದಲ್ಲಿ ಒಟ್ಟು 507 ಹುದ್ದೆಗಳಿವೆ.
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖಾ ಕಾರ್ಯಾಲಯದಲ್ಲಿ ಒಟ್ಟು 551 ಹುದ್ದೆಗಳಿವೆ. ಇವುಗಳನ್ನು ಹೈದರಾಬಾದ್ ಕರ್ನಾಟಕ ಮತ್ತು ಉಳಿಕೆ ಮೂಲವೃಂದ ಎಂದು ವಿಂಗಡಿಸಲಾಗಿದೆ.
Related Articles
ಪ್ರಥಮ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಯಾವುದೇ ವಿವಿಯಲ್ಲಿ ಪದವಿ, ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ದ್ವಿತೀಯ ದರ್ಜೆ ಹುದ್ದೆಗೆ ಪದವಿಪೂರ್ವ ತರಗತಿ, ತತ್ಸಮಾನ ವಿದ್ಯಾರ್ಹತೆ ಸಾಕು.
Advertisement
ಅರ್ಜಿ ಸ್ವೀಕೃತಿಗೆ ಕೊನೆ ದಿನಾಂಕದ ಹೊತ್ತಿಗೆ ಅಭ್ಯರ್ಥಿ ಕನಿಷ್ಠ 18 ವರ್ಷ ಗರಿಷ್ಠ 35ವರ್ಷ ವಯೋಮಿತಿಯನ್ನು ಹೊಂದಿರಬೇಕು. ಪರಿಶಿಷ್ಟರಿಗೆ 40 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಇನ್ನು ಸಿವಿಲ್ ಸೇವೆಯಡಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ 14,550 ರೂ. ರಿಂದ 26,700 ರೂ. ವೇತನ ನಿಗದಿ ಮಾಡಲಾಗಿದೆ. ಹಾಗೆಯೇ ದ್ವಿತೀಯ ದರ್ಜೆ ಸಹಾಯಕರಿಗೆ 11,600- 21,000 ವೇತನವನ್ನು ಸರ್ಕಾರ ನಿಗದಿಪಡಿಸಿದೆ. ಜೊತೆಗೆ ಭವಿಷ್ಯ ನಿಧಿ ಸೌಲಭ್ಯವೂ ಇದೆ.
ಹುದ್ದೆಗಳ ಆಯ್ಕೆ ಹೇಗೆ?ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಕಡ್ಡಾಯ ಕನ್ನಡ, ಸಾಮಾನ್ಯ ಕನ್ನಡ/ಇಂಗ್ಲಿಷ್, ಸಾಮಾನ್ಯಜ್ಞಾನ ಒಟ್ಟು ಮೂರು ಪತ್ರಿಕೆಗಳ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೂಲಕ ಜೇಷ್ಠತೆ ಆಧರಿಸಿ, ಮೀಸಲಾತಿ, ವರ್ಗೀಕರಣ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಂತರ ಕೌನ್ಸೆಲಿಂಗ್ ಮೂಲಕ ಇಲಾಖಾ ಹಂಚಿಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಕೆ
ಪ್ರಥಮ ದರ್ಜೆ ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲು ಜಾಲತಾಣ goo.gl/KTpmwwಗೆ ಲಾಗಿನ್ ಆಗಿ, ಬಳಿಕ ಪರದೆಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳಿ. ನ್ಯೂ ರಿಜಿಸ್ಟ್ರೇಷನ್ ಆಯ್ಕೆಗುಂಡಿ ಒತ್ತಿ. ಬಳಿಕ ಪೂರ್ಣ ಹೆಸರು, ತಂದೆ, ತಾಯಿ ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ… ವಿಳಾಸ ಇತ್ಯಾದಿ ಮಾಹಿತಿ ತುಂಬಿ ಮುಂದುವರಿಯಿರಿ. ನಿಮ್ಮ ಮಾಹಿತಿಯ ಆಧಾರದ ಮೇಲೆ ರಿಜಿಸ್ಟ್ರೇಷನ್ ಐಡಿ ಮತ್ತು ಪಾಸ್‌ವರ್ಡ್ ಕ್ರಿಯೇಟ… ಆಗುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಮತ್ತೂಮ್ಮೆ ಲಾಗ್ ಆನ್ ಆಗಿ. ಇಲ್ಲಿ ಮೊದಲೇ ಸೃಜಿಸಿರುವ ಮಾಹಿತಿ ಇರುತ್ತದೆ. ಜೊತೆಗೆ ನಿಮ್ಮ ವಿಳಾಸ, ಹೊಂದಲಿರುವ ಹು¨ªೆಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಅಗತ್ಯ ದಾಖಲೆ, ಭಾವಚಿತ್ರ, ಸಹಿಪ್ರತಿ ಇತರ ದಾಖಲೆಯನ್ನು ಅಪ್‌ಲೋಡ್ ಮಾಡಿ, ಅದನ್ನು ಮತ್ತೂಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ, ಫೈನಲ… ಬಟನ್ ಒತ್ತಿ ಪರೀûಾ ಶುಲ್ಕದ ಪ್ರತಿ ಗೋಚರಿಸುತ್ತದೆ ಅದನ್ನು ಪ್ರಿಂಟ್ ತೆಗೆದುಕೊಳ್ಳಿ. ಸಮೀಪದ ಇ- ಪೇಮೆಂಟ್ ಸೌಲಭ್ಯವಿರುವ ಪೋÓr… ಆಫೀಸಿನಲ್ಲಿ ಶುಲ್ಕ ಪಾವತಿಸಿ. ಅಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಯಾಗುವುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 7 ಕೊನೆದಿನವಾಗಿದೆ. ಶುಲ್ಕ ಪಾವತಿಗೆ ಅಕ್ಟೋಬರ್ 9 ಕಡೆ ದಿನವಾಗಿದೆ. ಇನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಇತರ ವಿದ್ಯಾರ್ಥಿಗಳಿಗೆ 150 ರೂ. ಪರಿಶಿಷ್ಟರಿಗೆ ಶುಲ್ಕದಲ್ಲಿ ವಿನಾಯ್ತಿಯಿದೆ. ಹೆಚ್ಚಿನ ಮಾಹಿತಿಗಾಗಿ: goo.gl/3kyLVM ಸಂಪರ್ಕಿಸಿ. -ಎನ್. ಅನಂತನಾಗ್