Advertisement
ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಹಾಗೂ ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ನೆರವಿನೊಂದಿಗೆ ನಡೆಯುವ ರಾಮಕೃಷ್ಣ ಮಿಷನ್ ಸ್ವತ್ಛ ಸುರತ್ಕಲ್ ಅಭಿಯಾನದ 25ನೇ ವಾರದ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಗೋವಿಂದ ದಾಸ ಕಾಲೇಜು ಸುರತ್ಕಲ್, ಆಪತಾಂದವ ಸಮಾಜ ಸೇವಾ ಸಂಘ ಸುರತ್ಕಲ್ ಇದರ 120ಕ್ಕೂ ಮಿಕ್ಕಿ ಸ್ವಯಂ ಸೇವಕರು ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೇತ್ರಾವತಿ ವಲಯದ ಸಂಚಾಲಕ ಹರೀಶ್ ಕೋಟ್ಯಾನ್, ಉತ್ತರ ಉಪವಲಯ ಮಹಿಳಾ ಸಂಚಾಲಕರಾದ ಮಲ್ಲಿಕಾ, ಶಿಕ್ಷಣ ಪ್ರಮುಖರಾದ ಲೀಲಾವತಿ, ಮೋಹಿನಿ, ಅಂಬುಜಾಕ್ಷಿ, ವಿವಿಧ ಶಾಖೆಗಳ ಸಂಚಾಲಕರಾದ ತೇಜಾ³ಲ್, ವಿಜಯಶಂಕರ್, ರತ್ನಾಕರ್, ಕೇಸರಿ, ಶಶಿಕಲಾ, ಜಯರಾಮ, ದೇವದಾಸ್, ವಿನೋದ್ ಮೊದಲಾದವರ ನೇತೃತ್ವದಲ್ಲಿ ನಾಲ್ಕು ಗುಂಪುಗಳಾಗಿ, ವಿದ್ಯಾದಾಯಿನಿ ಶಾಲಾ ಮುಂಭಾಗದಿಂದ ಸುರತ್ಕಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡುವುದರೊಂದಿಗೆ ತ್ಯಾಜ್ಯದ ವಿಲೇವಾರಿ ಮಾಡಲಾಯಿತು. ಗೋವಿಂದದಾಸ ಕಾಲೇಜಿನ ಪ್ರೊ| ರಮೇಶ್ ಭಟ್, ಶಿಕ್ಷಕಿ ಸಾವಿತ್ರಿ ರಮೇಶ್ ಭಟ್ ರವರ ನೇತೃತ್ವದಲ್ಲಿ ಸುರತ್ಕಲ್ ಮೇಲ್ಸೇತುವೆಯ ತಳಭಾಗವನ್ನು ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿಯರು ಸ್ವತ್ಛಗೊಳಿಸಿದರು.
Related Articles
Advertisement
ಮಾರುಕಟ್ಟೆ ಪಕ್ಕದಲ್ಲಿದ್ದ ಕಸದ ರಾಶಿ ತೆರವು ಸುರತ್ಕಲ್ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯದ ಬದಿಯಲ್ಲಿ ಸ್ಥಳೀಯ ವ್ಯಾಪಾರಿಗಳು ಸಾರ್ವಜನಿಕರು ರಾಶಿಹಾಕಿದ್ದ ಹಳೆಯ ಸಾಮಾನುಗಳು, ಬಾಟಿÉಗಳು ಕಟ್ಟಡ ಕಾಮಗಾರಿಯ ಉಳಿಕೆ ವಸ್ತುಗಳನ್ನು ಸ್ವಯಂ ಸೇವಕರು ನಾಯಕರಾದ, ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್ ಶೆಟ್ಟಿ, ಸ್ಪಂದನ ಫ್ರೆಂಡ್ಸ್ ಸರ್ಕಲ್‌ನ ಸುನಿಲ್ ಕುಳಾಯಿ, ಆಪತಾºಂದವ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಉಮೇಶ್ ದೇವಾಡಿಗ, ವಿದ್ಯಾರ್ಥಿ ನಾಯಕರಾದ ಭೂಷಣ್, ವಿನೋದ್ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಎರಡು ವಾಹನಗಳನ್ನು ಬಳಸಿ ಸ್ವಚ್ಛಗೊಳಿಸಲಾಯಿತು. ಮುಂದಿನ ವಾರದಲ್ಲಿ ಈ ಭಾಗವನ್ನು ಸ್ವಚ್ಛಹೂತೋಟವನ್ನಾಗಿ ಮಾರ್ಪಡಿಸುವ ಕೆಲಸ ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನ ಹೊಂದಿದೆಯೆಂದು ನಾಗರಿಕ ಸಲಹಾ ಸಮಿತಿ ಸಂಚಾಲಕ ಡಾ| ಕೆ. ರಾಜ್ ಮೋಹನ್ ರಾವ್ ಹೇಳಿದರು. ಬಂಟರ ಸಂಘದ ನಿರ್ದೇಶಕ ಸದಾಶಿವ ಶೆಟ್ಟಿ, ಗಣೇಶ ಆಚಾರ್ ಸ್ವಯಂಸೇವಕರೊಂದಿಗೆ ಶ್ರಮದಾನದಲ್ಲಿ ಭಾಗವಹಿಸಿದರು. ಸ್ವಚ್ಛತೆಯ ಅರಿವು
ಸುರತ್ಕಲ್ ಪೇಟೆಯ ನಾಲ್ಕು ಪ್ರಮುಖ ಬಸ್ ನಿಲ್ದಾಣಗಳಲ್ಲಿ, ಯೋಗ ಬಂದುಗಳ ನೇತೃತ್ವದಲ್ಲಿ ಅಂಗಡಿ ಮಾಲಕರಿಗೆ, ಬಸ್ ನಿರ್ವಹಕರಿಗೆ, ಪ್ರಯಾಣಿಕರಿಗೆ ಸ್ವಚ್ಛತೆಯ ಮಾಹಿತಿಯನ್ನು ನೀಡಲಾಯಿತು. ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ನಿರ್ವಹಣೆ ಮಾಡಬೇಕಾದ ಅಗತ್ಯವನ್ನು ತಿಳಿ ಹೇಳಲಾಯಿತು.