Advertisement
ತೈಲಯುಕ್ತ ಚರ್ಮದವರಿಗೆ ಸೌತೆಯ ಫೇಸ್‌ಪ್ಯಾಕ್1/2 ಕಪ್‌ನಷ್ಟು ಸೌತೆಕಾಯಿಯನ್ನು ಅರೆದು ಪೇಸ್ಟ್ ತಯಾರಿಸಬೇಕು. ಅದಕ್ಕೆ 1 ಚಮಚ ನಿಂಬೆರಸ ಹಾಗೂ 1 ಚಮಚ ಅರಸಿನ ಹುಡಿ ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ತೊಳೆದರೆ ಮುಖದ ಜಿಡ್ಡು ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ. ಅಧಿಕ ತೈಲಾಂಶವುಳ್ಳವರು ಈ ಮಿಶ್ರಣಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಲೇಪಿಸಿದರೆ ಅಧಿಕ ಪರಿಣಾಮಕಾರಿ.
5 ಚಮಚ ಸೌತೆಕಾಯಿ ತಿರುಳಿನ ಪೇಸ್ಟ್, 1 ಚಮಚ ಮುಲ್ತಾನಿ ಮಿಟ್ಟಿ , 2 ಚಮಚ ತುಳಸೀರಸ, 2 ಚಮಚ ಜೇನುತುಪ್ಪ ಇವೆಲ್ಲವನ್ನು ಬೆರೆಸಿ ಮೊಡವೆ ಇರುವ ಭಾಗದಲ್ಲಿ ನಿತ್ಯವೂ ಲೇಪಿಸಿ ಫೇಸ್‌ಮಾಸ್ಕ್ ಹಾಕಬೇಕು. 20 ನಿಮಿಷಗಳ ಬಳಿಕ ತೊಳೆದರೆ ಮೊಡವೆ ಹಾಗೂ ಕಲೆ ನಿವಾರಣೆಯಾಗಿ ಮುಖ ಹೊಳೆಯುತ್ತದೆ. ಒಣ ಚರ್ಮದವರಿಗೆ ಸೂಕ್ತವಾದ ಸೌತೆಕಾಯಿಯ ಫೇಸ್‌ಮಾಸ್ಕ್
5 ಚಮಚ ಸೌತೆಕಾಯಿಯ ತಿರುಳನ್ನು ಚೆನ್ನಾಗಿ ಅರೆಯಬೇಕು. ಅದಕ್ಕೆ ನಂತರ 2 ಚಮಚ ಹಾಲಿನ ಕೆನೆ ಹಾಗೂ 1 ಚಮಚ ಜೇನು ಬೆರೆಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖ ಮೃದುವಾಗಿ ಹೊಳೆಯುತ್ತದೆ.
Related Articles
ಸೌತೆಕಾಯಿಯನ್ನು ತೆಳ್ಳಗೆ ತುರಿಯಬೇಕು. ಇದನ್ನು 10 ಚಮಚ ತೆಗೆದುಕೊಂಡು, ಇದರೊಂದಿಗೆ ಓಟ್‌ಮೀಲ್‌ನ್ನು (3 ಚಮಚ) ಬೆರೆಸಬೇಕು. ಇದಕ್ಕೆ 2 ಚಮಚ ಮಜ್ಜಿಗೆ ಬೆರೆಸಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಮಾಡಿ, ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
Advertisement
ಇದು ತುಂಬಾ ತಂಪು ತಂಪು ಬೇಸಿಗೆಯಲ್ಲಿ ಎಲ್ಲಾ ಬಗೆಯ ತ್ವಚೆಯವರಿಗೂ ಫೇಸ್‌ಪ್ಯಾಕ್ ಮಾಡಲು ಹಿತಕರ.
ಮುಖದ ಕಾಂತಿಗೆ ಸೌತೆ ಹಾಗೂ ಮೊಸರಿನ ಮುಖಲೇಪ ಎಳೆ ಸೌತೆಯನ್ನು ಸಣ್ಣಗೆ ಹೆಚ್ಚಿ ಬ್ಲೆಂಡರ್‌ನಲ್ಲಿ ದಪ್ಪ ಮೊಸರಿನೊಂದಿಗೆ ಅರೆಯಬೇಕು. ಈ ಪೇಸ್ಟ್‌ನ್ನು ಮುಖಕ್ಕೆ ದಪ್ಪಗೆ ಪದರದಂತೆ ಲೇಪಿಸಿ 1/2 ಗಂಟೆ ಬಿಡಬೇಕು. ತದನಂತರ ತಣ್ಣೀರಿನಲ್ಲಿ ತೊಳೆದರೆ ಮುಖದ ಕಾಂತಿ ವರ್ಧಿಸುತ್ತದೆ.
ಬಂಗು, ಕಲೆ, ಬಿಸಿಲುಗಂದು ನಿವಾರಕ ಸೌತೆ ಹಾಗೂ ಅಕ್ಕಿಹಿಟ್ಟಿನ ಲೇಪಎಳೆ ತಾಜಾ ಸೌತೆಕಾಯಿಯನ್ನು ದುಂಡಗೆ ಕತ್ತರಿಸಿ (ಸಿಪ್ಪೆ ಸಹಿತ), ಅದರ ಮೇಲೆ ಅಕ್ಕಿಹಿಟ್ಟು ಉದುರಿಸಿ ತದನಂತರ ನಿಂಬೆರಸ ಹಾಕಬೇಕು. ಈ ಬಿಲ್ಲೆಗಳನ್ನು ದುಂಡಗೆ ಬÂಂಗು, ಕಲೆ ಹಾಗೂ ಬಿಸಿಲುಗಂದು ಇರುವ ಭಾಗಗಳಲ್ಲಿ ಇರಿಸಿ ಮಾಲೀಶು ಮಾಡಿದರೆ ಪರಿಣಾಮಕಾರಿ.
ಚರ್ಮದ ಕಾಂತಿಗೆ, ಕಲೆನಿವಾರಿಸಲು, ಮೊಡವೆ ನಿವಾರಿಸಲು ಈ ಎಲ್ಲಾ ಫೇಸ್‌ಪ್ಯಾಕ್, ಫೇಸ್‌ಮಾಸ್ಕ್ ಲೇಪ ಇತ್ಯಾದಿಗಳನ್ನು ಬಳಸುವಾಗ ಅವುಗಳೊಂದಿಗೆ ನಿತ್ಯ 1 ಕಪ್ ತಾಜಾ ಸೌತೆಕಾಯಿಯ ಜ್ಯೂಸ್ ಸೇವಿಸಿದರೆ ಚರ್ಮಕ್ಕೆ ಹಿತಕರ ಆಗಿರುವ “ಈ’ ವಿಟಮಿನ್ ಅಧಿಕವಾಗಿ ದೊರೆತು, ಅದರೊಂದಿಗೆ ತೇವಾಂಶ, ಪೊಟ್ಯಾಶಿಯಂ, ಲ್ಯುಟಿನ್, ವಿಟಮಿನ್ “ಎ’, ಝೀ ಕ್ಸಾéನ್‌ಥಿನ್ ಅಂಶ ದೊರೆತು, ಇದೇ ಉತ್ತಮ ಸ್ಕಿನ್‌ಟಾನಿಕ್‌ನಂತೆೆ ಕಾರ್ಯವೆಸಗುತ್ತದೆ.
– ಡಾ| ಅನುರಾಧಾ ಕಾಮತ್