Advertisement

ಪ್ರಕೃತಿ ಅರಳುವ ಬೆರಗು

03:58 PM Jun 05, 2021 | Team Udayavani |

ನಿತ್ಯ ಉದಯಿಸಿ ಮುಳುಗುವುದು ಅದೇ ಸೂರ್ಯನೇ ಆಗಿದ್ದರೂ, ಪ್ರತಿಯೊಬ್ಬರೂ ಅದನ್ನು ನೋಡುವ ರೀತಿಯೇ ಬೇರೆ. ವೇಗದ ಜಗತ್ತಿನೊಂದಿಗೆ ದಿನನಿತ್ಯವೂ ಸೆಣಸಾಡುವ ಜನರ ಮನಸ್ಸಿಗೆ ಮುದ ನೀಡುವ ಕ್ಷಣ ಎಂದರೆ ಸೂರ್ಯೋದಯ-ಸೂರ್ಯಾ ಸ್ತ ಎಂದರೂ ತಪ್ಪಾಗಲಾರದು.

Advertisement

ದಿನವೂ ಹೊಸತನದೊಂದಿಗೆ ಉದಯಿಸುವ ಸೂರ್ಯನ ಸೊಬಗು ಹೇಳತೀರದು. ತನ್ನ ಹೊಂಗಿರಣದೊಂದಿಗೆ ಜಗತ್ತನ್ನೇ ತುಂಬಿಕೊಳ್ಳುವ ರೀತಿ ಇದರೊಂದಿಗೆ ಹಕ್ಕಿಗಳ ಚಿಲಿಪಿಲಿ ಹಾಗೇ ಜನರ ಕಾಯಕದ ಆರಂಭ ಇವೆಲ್ಲ ನಿತ್ಯವೂ ನಡೆದರೂ ಒಂದು ದಿನದಂತೆ ಇನ್ನೊಂದು ದಿನ ಇರಲಾರದು. ಮಧ್ಯಾಹ್ನದ ಸುಡುವ ಸೂರ್ಯನಿಗೆ ಎಷ್ಟು ಶಪಿಸುತ್ತೇವೆಯೋ ಅಂತೆಯೇ ಏನೋ ಕೆಲಸದಲ್ಲಿ ತೊಡಗಿದ್ದ ನಾವು ಸಂಜೆಯಾಯಿತೆಂದರೆ ಸೂರ್ಯಾಸ್ತದ ಸೊಬಗನ್ನು ನೋಡಿದಾಕ್ಷಣ ನಮ್ಮ ಮನಸ್ಸು ಒತ್ತಡ, ಸಂಕಷ್ಟ ಎಲ್ಲವನ್ನೂ ಮರೆತು ಹೊಸ ಯೋಜನೆ, ಯೋಚನೆಗಳತ್ತ ಸಾಗುತ್ತದೆ. ಪ್ರತೀ ದಿನ ಅದನ್ನು ನೋಡಿದಂತೆ ಅದರ ಸೊಬಗು ಇನ್ನಷ್ಟು ಹೆಚ್ಚುವಂತೆಯೇ ತೋರುತ್ತದೆ.

ಅಲ್ಲಲ್ಲಿ ಮೋಡಭರಿತ ಬಾನಂಗಳದಲ್ಲಿ  ಕ್ಷಣಕ್ಕೊಂದು ಸುಂದರ ಬಣ್ಣವಾಗಿ ಕಾಣುವ ಸೂರ್ಯನನ್ನು  ನೋಡ ನೋಡುತಿದ್ದಂತೆಯೇ ಮಾಯವಾಗುತ್ತಾನೆ. ಈ ಪ್ರಕೃತಿ ಸೌಂದರ್ಯ ನೋಡುಗರ ನೋಟಕ್ಕೆ ಬಿಟ್ಟಿದ್ದು. ಅದು ಸಂದರ್ಭಕ್ಕೆ ತಕ್ಕಂತೆ ಬದಲಾಗುವುದೂ ಸಹಜ. ಪ್ರಕೃತಿಯಲ್ಲಿ ಕೆಲವರು ಹೊಸದನ್ನು ಕಂಡುಕೊಳ್ಳುತ್ತಾ ಅಲ್ಲಿನ ಚಿಕ್ಕಪುಟ್ಟ ಬದಲಾವಣೆಗಳನ್ನು ಗಮನಿಸಿ ಸಂತಸಪಡುವ ದಿನ ಒಂದೆಡೆಯಾದರೆ, ನಿಸರ್ಗದಲ್ಲಿ ಏನೇ ಬದಲಾದರೂ ಅದನ್ನ ಗಮನಿಸದೆ, ಕಂಡೂ ಕಾಣದಂತೆ ಇದ್ದು ಅದನ್ನು ಆಸ್ವಾದಿಸದ ಜನ ಇನ್ನೊಂದೆಡೆ. ಆದರೆ ನಿಸರ್ಗದ ಅದ್ಭುತ ದೃಶ್ಯಗಳು ಎಂಥವರನ್ನೇ ಆದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿವೆ.

-  ಶಿಲ್ಪಾ ಬಿದ್ರೆಮನೆ ವಿವಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next