Advertisement
ತ್ವಚೆಯ ಹೊಳಪುಏರೋಬಿಕ್ನಂತಹ ವ್ಯಾಯಾಮ ಹೃದಯ ಸಂಬಂಧಿ ಚಟುವಟಿಕೆಗೆ ನೇರವಾಗಿ ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆಗೊಂಡು ತ್ವಚ್ಚೆಯ ಹೊಳಪು ಮತ್ತು ಆರೋಗ್ಯವಂತ ಹೃದಯಕ್ಕೆ ನೆರವಾಗುತ್ತದೆ.
ವ್ಯಾಯಮವು ರಕ್ತದಲ್ಲಿರುವ ಕಾರ್ಟಿಸೋಲ್ ಎಂಬ ಹಾರ್ಮೋನ್ ಹೆಚ್ಚಿಸಿ ಶರೀರದ ಒತ್ತಡ ನಿಯಂತ್ರಿಸುವಲ್ಲಿ ಸಹಕರಿಸುತ್ತದೆ. ಹೀಗಾಗಿ ಮುಖದ ಸುಕ್ಕು ನಿವಾರಣೆಗೂ ಸಹಕಾರಿಯಾಗಲಿದೆ. ಮೊಡವೆಯಿಂದ ಮುಕ್ತಿ
ನಿತ್ಯವೂ ವ್ಯಾಯಾಮವು ನಮ್ಮ ಚರ್ಮವನ್ನು ಪೋಷಿಸಿ, ಹೆಚ್ಚು ರಕ್ತದ ಹರಿವು ಮತ್ತು ಮತ್ತು ಸರಿಯಾದ ಆಮ್ಲಜನಕ ಸರಬರಾಜಿಗೆ ನೆರವಾಗುತ್ತದೆ. ವ್ಯಾಯಾಮದಿಂದಾಗಿ ವಯಸ್ಕರಲಿ ಹಾರ್ಮೋನ್‌ನ ಅಸಮ ತೋಲನೆಯನ್ನು ತಡೆ ಹಿಡಿದು ಆ ಮೂಲಕ ಉಂಟಾಗುವ ಮೊಡವೆಯಂತಹ ಸಮಸ್ಯೆಯನ್ನು ನಿವಾರಿಸಬಹುದು. ಜತೆಗೆ ಬೆವರಿನಿಂದ ತ್ವಚೆಗೆ ಉಂಟಾಗ ಬಹುದಾದ ತೊಂದರೆ ತಪ್ಪಿಸಲು ಫಿಟ್ನೆಸ್ ಕಿಟ್ನಲ್ಲಿ ಸ್ವಚ್ಛ ಬಟ್ಟೆ, ನೈಸರ್ಗಿಕ ಫೇಸ್ ಕ್ರೀಮ್ ಬಳಸುವುದು ಉತ್ತಮ.
Related Articles
ಸುಧಾರಿತ ರಕ್ತದ ಹರಿವು ನಮ ್ಮಕೂದಲನ್ನು ಬಲ ಮತ್ತು ಆರೋಗ್ಯಕರವಾಗಿರಿಸುತ್ತದೆ. ಕೂದಲು ದೃಢವಾಗಲು ಮತ್ತು ಬೆಳವಣಿಗೆ ಹೊಂದಲು ವ್ಯಾಯಾಮ ಸಹಕಾರಿಯಾಗಿದೆ. ಕೆಲವು ಸರಳ ಯೋಗ ಭಂಗಿಗಳನ್ನು ಅಭ್ಯಾಯಿಸುವುದು, ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್ ಚಟುವಟಿಕೆಯಿಂದ ನಮ್ಮ ಕೂದಲು ಮತ್ತು ಚರ್ಮದ ಸೌಂದರ್ಯ ಹೆಚ್ಚುತ್ತದೆ ಎನ್ನುತ್ತದೆ ಸಂಶೋಧನೆಗಳು.
Advertisement
••ಕಾರ್ತಿಕ್ ಚಿತ್ರಾಪುರ