Advertisement

ನೋಡುಗರ ಕಣ್ಮನ ಸೆಳೆಯುತ್ತಿದೆ ನೀರಿನ ಝರಿ

10:01 AM Oct 26, 2021 | Team Udayavani |

ಚಿತ್ತಾಪುರ: ನಾಗಾವಿ ಕ್ಷೇತ್ರದ ಪರಿಸರದಲ್ಲಿ ನಿರಂತರವಾಗಿ ಹರಿಯುವ ನೀರಿನ ಝರಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದು, ಪ್ರವಾಸಿಗರಿಗೆ ಆಕರ್ಷಕ ಸ್ಥಳವಾಗಿದೆ.

Advertisement

ನಾಗಾವಿ ಪರಿಸರದಲ್ಲಿ ಭೂಮಿ ಮೇಲೆ ಭಂಡೆಹಾಸಿಗೆ ಇರುವುದು ವಿಶೇಷ, ಕಲಭಂಡೆ ಹಾಸಿಗೆ ಮೇಲೆ ಹರಿಯುವ ನೀರು ಶುದ್ಧವಾಗಿ ಇರುತ್ತದೆ. ಎಲ್ಲೆಂದರಲ್ಲಿ ಸಣ್ಣಪುಟ್ಟ ಹಳ್ಳಗಳಿವೆ. ಇದರಲ್ಲಿ ಸದಾ ನೀರು ಹರಿಯುತ್ತಿರುತ್ತದೆ.

ಇತಿಹಾಸದ ಪ್ರಕಾರ ಈ ಪ್ರದೇಶದಲ್ಲಿ 108 ಕುಂಡಗಳಿವೆ (ಬಾವಿಗಳು). ಒಂದೊಂದು ಬಾವಿಗೆ ವಿವಿಧ ತರಹದ ಹೆಸರುಗಳಿವೆ. ಅದರಂತೆ ನಂದಿಭಾವಿ, ಈಶಾಂಜನೇಯ ಬಾವಿ, ಸಿಡಿಲು ಬಾವಿ, ದೇವಿ ಸ್ನಾನದ ಬಾವಿ ಸೇರಿದಂತೆ ಇನ್ನಿತರ ಹೆಸರಿನ ಬಾವಿಗಳಿವೆ.

ಸದಾ ಜುಳು ಜುಳು ಎಂದು ಹರಿಯುವ ನೀರಿನ ನಾದ ಯಾವಾಗ ನೋಡಿದರೂ ಭೂದೇವಿ ಹಸಿರು ಸೀರೆಯನ್ನುಟ್ಟು ನರ್ತಿಸುವಂತೆ ಕಾಣುತ್ತದೆ. ಸಕಲ ಕಾಲದಲ್ಲಿಯೂ ಇಲ್ಲಿ ನೀರಿಗೆ ಬರವಿರುವುದಿಲ್ಲ. ಇಲ್ಲಿ ಸಂಪಿಗೆ, ಎಲೆವಳ್ಳಿ, ಲವಂಗ, ತೆಂಗು, ಬಾಳೆ, ಈಳೆ, ಕರ್ಪೂರ, ಅರಿಶಿನ ಮುಂತಾದ ಬೆಲೆಯುಳ್ಳ ಬೆಳೆ ಬೆಳೆಯುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ.

ಇದನ್ನೂ ಓದಿ: ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

Advertisement

ನಾಗಾವಿ ಕ್ಷೇತ್ರದಲ್ಲಿ ನಾಗಾವಿ ಯಲ್ಲಮ್ಮ, ತ್ರೈಪುರುಷ ದೇವಾಲಯ, ಸಿದ್ಧೇಶ್ವರ ದೇವಾಲಯ, ರಾಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಬಸವಣ್ಣ ನಂದೀಶ್ವರ ದೇವಾಲಯ, ಈಶ್ವರಲಿಂಗ, ಮಧುಸೂದನ ದೇವಾಲಯ, ಸಂಜೀವಿನಿ, ಈಶಾಂಜನೇಯ, ಮಲ್ಲಯ್ಯ, ದ್ಯಾವಮ್ಮ, ಈರಪಯ್ಯ ದೇವಸ್ಥಾನಗಳು ಸೇರಿದಂತೆ ಅನೇಕ ಮಸೀದಿಗಳು ಜೀರ್ಣೋದ್ಧಾರ ಕಾಣದೇ ಶಿಥಿಲಾವಸ್ಥೆಯಲ್ಲಿವೆ.

ಇನ್ನು ಸ್ವಲ್ಪದಿನ ಹೊದರೇ ಇಲ್ಲಿಯ ಇತಿಹಾಸವೇ ಮಾಯವಾಗಬಹುದೇನೋ ಎಂಬಂತೆ ಭಾಸವಾಗುತ್ತಿದೆ. ಇಂತಹ ಉಜ್ವಲ ಇತಿಹಾಸ ಉಳಿಸಿ, ಬೆಳೆಸಿ, ರಕ್ಷಿಸುವ ಆಸಕ್ತಿ ಹಾಗೂ ಜವಾಬ್ದಾರಿ ಇಲ್ಲಿಯ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಬರಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next