Advertisement

ಸುಂದರವಾಗಿದೆ ಸೂರಗೊಂಡನಕೊಪ್ಪ

06:29 AM Feb 11, 2019 | |

ಹೊನ್ನಾಳಿ: ಸಂತ ಸೇವಾಲಾಲರು ಜನಿಸಿದ ಸುಕ್ಷೇತ್ರ ಸೂರಗೊಂಡನಕೊಪ್ಪವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ್‌ ಹೇಳಿದರು. ಭಾನುವಾರ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಲಾಗಿರುವ ಸಪ್ತ ಮಾತೃಕೆಯರ ಪವಿತ್ರ ಕೊಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಬಂಜಾರಾ ಜನಾಂಗದ ಸಂತ ಸೇವಾಲಾಲರು ಹುಟ್ಟಿದ ಪವಿತ್ರ ಕ್ಷೇತ್ರ ಈಗ ಸುಂದರ ತಾಣವಾಗಿ ಮಾರ್ಪಟ್ಟಿದೆ. ಲಮಾಣಿ ಜನಾಂಗದವರು ಶ್ರಮಜೀವಿಗಳು. ಅವರ ಶ್ರಮ ಉತ್ತಮ ಫಲ ನೀಡಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಮಾಜಿ ಸಚಿವ ರುದ್ರಪ್ಪ ಲಮಾಣಿ, ಸೇವಾಲಾಲರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದಲ್ಲಿ ಸಪ್ತ ದೇವತೆಗಳು ಸ್ನಾನ ಮಾಡಿ, ಜನ್ಮ ನೀಡಿದ ಸೇವಾಲಾಲರನ್ನು ಆಶೀರ್ವದಿಸಿದರು ಎಂದು ಇತಿಹಾಸ ಹೇಳುತ್ತದೆ. ಈ ಪವಿತ್ರ ಕೊಳವನ್ನು ತಾಂಡಾ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂತ ಸೇವಾಲಾಲರು ಜನಿಸಿದ ಈ ಕ್ಷೇತ್ರ ಅತ್ಯಂತ ತೀವ್ರಗತಿಯಲ್ಲಿ ಬೆಳೆದು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಇಂತಹ ಕ್ಷೇತ್ರವು ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಂತೆ ಪ್ರಸಿದ್ಧಿ ಪಡೆಯವಂತಾಗಲಿ ಎಂದು ಆಶಿಸಿದರು.

ಬಂಜಾರಾ ಸಮುದಾಯ ಸದಾ ಕಾಯಕದಲ್ಲಿ ತೊಡಗಿದ ಸಮುದಾಯ. ಕಾಡುಮೇಡುಗಳಿಂದ ಕಟ್ಟಿಗೆ ತಂದು, ಮಾರಿ ಜೀವನ ಸಾಗಿಸುವಂತಹ ಕಸುಬನ್ನು ಇಂದಿಗೂ ಮಾಡುವ ಶ್ರಮಜೀವಿಗಳು ಎಂದ ಅವರು, ಲಂಬಾಣಿ ಜನಾಂಗದ ಯುವಕರು ಈಚಿನ ದಿನಗಳಲ್ಲಿ ವಿದ್ಯಾವಂತರಾಗಿ ಉತ್ತಮ ಜೀವನ ಸಾಗಿಸುತ್ತಿರುವುದು ಸಮಾಜದ ಏಳ್ಗೆಯ ಸಂಕೇತವಾಗಿದೆ ಎಂದು ಹೇಳಿದರು.

Advertisement

ಸಾಗರ ತಾಲೂಕು ವೀರಾಪುರ ಮಠದ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿ.ಪಂ ಸದಸ್ಯರಾದ ಸುರೇಂದ್ರನಾಯ್ಕ, ಉಮಾ ರಮೇಶ್‌, ತಾ.ಪಂ ಸದಸ್ಯ ಪೀರ್ಯಾನಾಯ್ಕ, ಸಮಾಜದ ಮುಖಂಡ ಡಾ| ಎಲ್‌.ಈಶ್ವರನಾಯ್ಕ ಇತರರು ಉಪಸ್ಥಿತರಿದ್ದರು. ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೀರಾಲಾಲ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next