Advertisement

ಚಿಣ್ಣರ ಮೇಳ ಎಂಬ ಸುಂದರ ನೆನಪು

10:42 PM Jul 28, 2020 | Karthik A |

ಆ ವಯಸ್ಸೇ ಹಾಗೆ. ಆಟದಲ್ಲಿ ತಲ್ಲೀನರಾಗಿ ನಮ್ಮನ್ನು ನಾವು ಮರೆತು ಬಿಡುವ ಕಾಲ.

Advertisement

ಕುಂಟೆ ಬಿಲ್ಲೆ, ಪೋಲೋ, ಲಗೋರಿ ನನ್ನ ಮೆಚ್ಚಿನ ಆಟವಾಗಿದ್ದವು. ಆಗ ತಾನೆ ಹೈಸ್ಕೂಲ್‌ಗೆ ಪ್ರವೇಶ ಪಡೆದಿದ್ದೇ ತಡ ತಂದೆಗೆ ದಿನಾ ಶಿಬಿರಕ್ಕೆ ಸೇರಿಸು ಅಂತ ಪೀಡಿಸುತ್ತಿದ್ದೆ.

ಅದೇ ವರ್ಷ ಮೊದಲ ಬಾರಿ ಧಾರವಾಡದಲ್ಲಿ ರಂಗಾಯಣದ ಚಿಣ್ಣರ ಮೇಳ ಆಯೋಜಿಸಿದ್ದರು.

ರಂಗಾಯಣ ಎನ್ನುವುದು ನಮ್ಮಲ್ಲಿರುವ ಕ್ರಿಯಾಶೀಲ ಲೋಕ ತೆರೆದು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ.

ಕಲೆ, ಹಾಡು, ಕುಣಿತ, ಚಿತ್ರಕಲೆ ಅದರಲ್ಲೂ ವಿಶೇಷವಾಗಿ ನಾಟಕ ತರಬೇತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದರಲ್ಲಿ ಕೆಳಮನೆ, ಹಳೆಮನೆ,ಅಜ್ಜಿ ಮನೆ, ಹೊಸಮನೆ ಹಾಗೂ ಮೇಲ್ಮನೆ ಹೀಗೆ ವಯಸ್ಸಿನ ಮಿತಿಯ ಆಧಾರದಲ್ಲಿ ಗುಂಪು ಮಾಡಲಾಗುತ್ತದೆ. ನನ್ನದು ಅಜ್ಜಿಮನೆ ಮತ್ತು ನನ್ನೊಂದಿಗೆ ರಂಗಾಯಣಕ್ಕೆ ಬರುತ್ತಿದ್ದ ಅಕ್ಕ ಮೇಲ್ಮನೆ, ತಮ್ಮ ಹೊಸ ಮನೆ ಗುಂಪಲ್ಲಿದ್ದರು.

Advertisement

ಪ್ರತಿ ಗುಂಪಿಗೆ ಅದರದ್ದೇ ಆದ ವಿಶೇಷತೆ. ಪ್ರತಿದಿನ ಏನಾದರೊಂದು ಹೊಸ ಕಲಿಕೆ ಇದ್ದೇ ಇರುತ್ತಿತ್ತು. ಒಂದು ದಿನ ಮ್ಯಾಜಿಕ್‌ ಶೋ ಆದರೆ ಇನ್ನೊಂದು ದಿನ ಅಗ್ನಿಶಾಮಕ ದಳದ ಪ್ರದರ್ಶನ, ಮತ್ತೂಂದು ದಿನ ಶ್ವಾನದಳದ ಪ್ರದರ್ಶನ, ಪ್ಲೇಟ್‌ ಪೇಂಟಿಂಗ್‌, ದವಸ ಧಾನ್ಯಗಳನ್ನು ಬಳಸಿ ಚಿತ್ರಿಸುವುದು ಮುಂತಾದ ಮನೋರಂಜನೆ ಮತ್ತು ಕಲಿಕೆಯ ಕುರಿತಾದ ಚಟುವಟಿಕೆಗಳಿರುತ್ತಿದ್ದವು.

ಅಲ್ಲದೇ ಅಲ್ಲಿ ನಾನು ಬರೆದ ಮೊದಲ ಕವನ “ಅಮ್ಮನ ಕೈ ತುತ್ತು’ ಪ್ರಕಟಿಸಿದ್ದರು. ಕೊನೆಯ ಮೂರು ದಿನ ನಾಟಕ ಪ್ರದರ್ಶನ ಇರುತಿತ್ತು. ನಾನು, ನಮ್ಮ ತಂಡದ ನಾಟಕ “ಪುಣ್ಯ ಕೋಟಿ’ಯ ಲೀಡ್‌ ಡಾನ್ಸರ್‌ ಆಗಿದ್ದೆ. ಆ ಕ್ಷಣಗಳು ನನ್ನ ಜೀವನದಲ್ಲೇ ಮರೆಯಲಾಗದ ಅದ್ಭುತ ನೆನಪುಗಳು. ಅಲ್ಲಿ ಕಲಿತ ಕ್ರೀಯಾಶೀಲತೆ, ಡೈಲಾಗ್‌ ಡೆಲಿವರಿ, ಕೆಮರಾ ಫೇಸಿಂಗ್‌ ಮುಂತಾದ ಚಟುವಟಿಕೆಗಳನ್ನು ಮಾಡಿಸುವುದರಿಂದ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ತಮಗಿಷ್ಟವಾದ ಮತ್ತು ಆಸಕ್ತಿದಾಯಕವಾದ ಕ್ಷೇತ್ರಗಳನ್ನು ಆಯ್ಕೆ ಮಾಡಲು ಸಹಾಯಕ.

 ಶ್ರೀ ಅವಧಾನಿ, ಧಾರವಾಡ ವಿಶ್ವವಿದ್ಯಾನಿಲಯ

 

 

Advertisement

Udayavani is now on Telegram. Click here to join our channel and stay updated with the latest news.

Next