Advertisement
ಜಲಪಾತ ನೋಡಲು ಅಣಿಯಾದೆವು. ಅಲ್ಲಿಯೇ ಹತ್ತಿರದ ಹೋಟೆಲ್‌ವೊಂದರಲ್ಲಿ ಉಪಹಾರ ಮುಗಿಸಿ ಬಳುಕಿನ ಹಾದಿಯಲ್ಲಿ ಮಲೆನಾಡ ಸೊಬಗನ್ನು ಸವಿಯುತ್ತಾ ಹೊರಟೆವು. ಎಲ್ಲೆಲ್ಲೂ ಹಚ್ಚ ಹಸಿರು, ನಡುನಡುವೆ ಸುರಿವ ತುಂತುರು. ಜೊತೆ ಜೊತೆಗೆ ಜೋರು ಮಳೆ. ಹಸಿರು ಗಿರಿಶ್ರೇಣಿಗಳ ಮೇಲೆ ಹಾರಾಡುತ್ತಾ ಹಸಿರು ಗುಡ್ಡಗಳಿಗೆ ಮುತ್ತಿಕ್ಕುವ ಮುದವಾದ ನೋಟ ನಮ್ಮ ಕಣ್ಣುಗಳನ್ನು ತಂಪಾಗಿಸಿತು. ದಾರಿಯ ನಡುವೆ ಸಿಗುವ ಸಣ್ಣ ಸಣ್ಣ ಜಲಪಾತಗಳು ಇನ್ನಷ್ಟು ಹುಚ್ಚೆಬ್ಬಿಸಿದ್ದವು. ಎಲ್ಲರೂ ಫೋಟೋ ಶೂಟ್ ನಡೆಸಿದ್ದೇ ನಡೆಸಿದ್ದು.
Related Articles
Advertisement
ನೋಡುತ್ತಾ ಅಲ್ಲಿಯೇ ಇದ್ದು ಇಡಬೇಕೆನಿಸುವಷ್ಟು ಆನಂದ. ಸ್ವಲ್ಪ ಮುಂದೆ ಸಾಗುತ್ತಿರುವಾಗಲೇ ಧುಮುಕುತ್ತಿರುವ ನೀರಿನ ಜಲಧಾರೆಯ ದರ್ಶನವಾಯ್ತು. ಅದೇ ಶಾಂತಿ ಜಲಪಾತ. ಜಲಧಾರೆಯ ಸೌಂದರ್ಯವನ್ನು ಕಣ್ತುಂಬಿಕೊಂಡು ಪ್ರಯಾಣ ಮುಂದುವರೆಸಿದೆವು.
ಮುಂದೆ ಸಿಕ್ಕಿದ್ದು, ಎಲ್ಲೆಲ್ಲೂ ಹಸಿರು ಸೀರೆಯನ್ನು ಉಟ್ಟ ಪರ್ವತ ಸಾಲುಗಳೇ. ಪ್ರಕೃತಿಯ ಹಸಿರ ಸೌಂದರ್ಯವನ್ನು ಆಸ್ವಾದಿಸುತ್ತಾ ಗುಡ್ಡದ ತುತ್ತತುದಿಯನ್ನು ತಲುಪಿದಾಗ ಸ್ವರ್ಗಕ್ಕೆ ಮೂರೇ ಗೇಣು. ಮೈಮನಗಳಲ್ಲಿ ನಿಜಾರ್ಥದಲ್ಲಿ ರೋಮಾಂಚನ ಉಂಟುಮಾಡುವಂಥ ಜಾಗ. ಸ್ವಲ್ಪ ಸಮಯ ಅಲ್ಲೇ ಕಾಲ ಕಳೆದು ವಾಪಸ್ ಹೊರಟೆವು.
ಕೆಮ್ಮಣ್ಣುಗುಂಡಿಯಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಲಾಡ್ಜ್, ಹೋಮ್‌ಸ್ಟೇ, ಕಾಟೇಜ್‌ಗಳ ಸೌಕರ್ಯವಿದೆ. ಊಟ ಉಪಹಾರಕ್ಕೆ ಅಷ್ಟೇನೂ ಹೇಳಿಕೊಳ್ಳುವಂತಹ ಹೋಟೆಲ್‌ಗಳಿಲ್ಲದಿದ್ದರೂ ಹಸಿವು ಮರೆಸುವುದರಲ್ಲಿ ಸಂಶಯವಿಲ್ಲ.
ಹೋಗುವುದು ಹೇಗೆಬೆಂಗಳೂರಿನಿಂದ ಹೋಗುವುದಾದರೆ 275 ಕಿ.ುà., ಮೈಸೂರಿನಿಂದ 216 ಕಿ.ಮೀ. ಕೆಮ್ಮಣ್ಣುಗುಂಡಿುಂದ 04 ಕಿ.ಮೀ ಸಾಗಿದರೆ ಸಿಗುತ್ತದೆ ಕಲ್ಲತ್ತಗಿರಿ ಜಲಪಾತಕ್ಕೆ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋದರೆ ಅನುಕೂಲ. ಲಕ್ಷ್ಮಿಕಾಂತ್ ಎಲ್.ವಿ