Advertisement

ನೋಡಬನ್ನಿ ಹುಲಿಕಲ್ ಜಲಧಾರೆಯ ಸೌಂದರ್ಯ

10:22 AM Jul 05, 2019 | sudhir |

ಕುಂದಾಪುರ: ಮಳೆರಾಯನ ಭೋರ್ಗರೆತಕ್ಕೆ ರುದ್ರರಮಣೀಯವಾಗಿ ಹಾಲ್ನೊರೆಯಂತೆ ಹರಿಯುವ ಜಲಪಾತದ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹುದೇ ಅತ್ಯದ್ಭುತವಾದ ದೃಶ್ಯವನ್ನು ನೀವು ಈಗ ಹೊಸಂಗಡಿ ಸಮೀಪದ ಬಾಳೆಬರೆ ಘಾಟಿಯಲ್ಲಿ ಸಂಚರಿಸುವಾಗ ಹುಲಿಕಲ್ ಜಲಪಾತದಲ್ಲಿ ಕಾಣಬಹುದು.

Advertisement

ಮಳೆಗಾಲದಲ್ಲಿ ಪಶ್ಚಿಮಘಟ್ಟದ ತಪ್ಪಲಿನ ರಸ್ತೆಯಲ್ಲಿ ಸಂಚರಿಸುವುದೇ ಮನಸ್ಸಿಗೆ ಮುದ ನೀಡುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು. ಇಲ್ಲಿ ಹೊಸತೊಂದು ಲೋಕವೇ ಧರೆಗಿಳಿದಂತೆ ಭಾಸವಾಗುತ್ತದೆ.

ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಸ್ವರ್ಗ. ಮಳೆಗಾಲ ಆರಂಭವಾಗುತ್ತಿದ್ದಂತೆ ಬಾಳೆಬರೆ ಜಲಪಾತವು ಹರಿಯಲು ಆರಂಭವಾಗುತ್ತದೆ. ಬಂಡೆಯಿಂದ, ಬಂಡೆಗೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಜಲಪಾತದ ಸೌಂದರ್ಯಕ್ಕೆ ಮನ ಸೋಲದವರಿಲ್ಲ. ಹೊಸನಗರ ತಾಲೂಕಿನ ಮಾಸ್ತಿಕಟ್ಟೆ – ಹೊಸಂಗಡಿಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಿದರೆ ಈ ಸುಂದರ ಜಲಧಾರೆಯನ್ನು ನೋಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next