ಶ್ರೀ ವಾದಿರಾಜರ ಕುರಿತು ವಿಶೇಷ ಸಂಶೋಧನೆ ನಡೆಸಿದ ಬಳ್ಳಾರಿ ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಜಿ.ಕೆ. ನಿಪ್ಪಾಣಿ ಅವರು ಕೆಳಗಿನಂತೆ ಮಾಹಿತಿ ನೀಡುತ್ತಾರೆ: ಶ್ರೀಕೃಷ್ಣ ಮಠದಲ್ಲಿ 1522ರಲ್ಲಿ ಎರಡು ವರ್ಷಗಳ ಪರ್ಯಾಯವನ್ನು ಪಲಿಮಾರು ಮಠದಿಂದ ಆರಂಭಿಸಿದ ಬಳಿಕ 1532ರಲ್ಲಿ ವಾದಿರಾಜಸ್ವಾಮಿಗಳು ಸ್ವತಃ ಪರ್ಯಾಯ ಪೀಠವನ್ನು ಅಲಂಕರಿಸಿದರು. ಆಗ ಅವರಿಗೆ 52 ವರ್ಷ. ತಮ್ಮ ಪರ್ಯಾಯವಾದ ಬಳಿಕ 1538-39ರ ವೇಳೆ ವಿಜಯನಗರ ಸಾಮ್ರಾಜ್ಯದ ಕಡೆ ಸಂಚಾರಾರ್ಥ ತೆರಳುತ್ತಾರೆ. ಆಗ ರಾಜ ನಾಗಿದ್ದ ಅಚ್ಯುತದೇವರಾಯನ ಸಮಸ್ಯೆಗಳನ್ನು ಬಗೆಹರಿಸಿ 1541-42ರಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡರು. ಆಗ ದಿಲ್ಲಿ, ಬದರಿಗೆ ಹೋದರು. ಅದೇ ವೇಳೆ ಅಯೋಧ್ಯೆಗೆ ತೆರಳಿ ಅಲ್ಲಿ ಉತVನನ ಮಾಡಿಸಿ ಹನುಮ- ಗರುಡನ ವಿಗ್ರಹವನ್ನು ತಂದು ಸುಮಾರು 1545ರ ವೇಳೆ ಪ್ರತಿಷ್ಠೆ ಮಾಡಿದರು. 1548-49ರಲ್ಲಿ ಎರಡನೆಯ ಪರ್ಯಾಯವನ್ನು ನಡೆಸಿದರು.
Advertisement
ಇದು ವಾದಿರಾಜಗುರುಚರಿತಾಮೃತದಲ್ಲಿ ಹೀಗೆ ಉಲ್ಲೇಖವಿದೆ: ಪುನಃ ಸಂಚರಣಾಸಕೊ¤à ಗತೋ ಯೋಧ್ಯಾಂ ಪುರೀಂ ಮುನಿಃ| ತತ್ರತ್ಯ ಹನುಮತ್ತಾಕ್ಷì ಪ್ರತಿಮೇ ರೂಪ್ಯಪೀಠಕಮ್|…
ಇಷ್ಟು ವಿಷಯ ಮಾತ್ರ ದಾಖಲೆಯಿಂದ ತಿಳಿಯಬಹುದಾಗಿದೆ. ಇಲ್ಲಿ ಕೇವಲ ಮೂರು ಶ್ಲೋಕಗಳಿವೆ. ಇನ್ನೂ ಹೆಚ್ಚಿನ ವಿವರಗಳು ಪರಂಪರೆಯ ರಹಸ್ಯದಿಂದ ತಿಳಿದುಬರುತ್ತವೆ. ಇದನ್ನು ಸೋದೆ ಮಠದ ಮಠಾಧಿಪತಿಗಳಾಗಿದ್ದ ಶ್ರೀ ವಿಶೊÌàತ್ತಮತೀರ್ಥರು ಹಿಂದಿನ ಸಂಪ್ರದಾಯದಂತೆ ಹೀಗೆ ಹೇಳುತ್ತಿದ್ದರು: ತ್ರೇತಾಯುಗದಲ್ಲಿ ದಶರಥನ ಅರಮನೆಯಲ್ಲಿ ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು. ನಿತ್ಯ ಸಭೆ, ತಯಾರಿ, ಚರ್ಚೆ….
ಪೇಜಾವರ ಮಠದ ವಿಜಯಧ್ವಜ ಅತಿಥಿಗೃಹದಲ್ಲಿರುವ ಧರ್ಮಸಂಸದ್ ಕಾರ್ಯಾಲಯದಲ್ಲಿ ನಿತ್ಯವೂ ಸಭೆ, ಚರ್ಚೆ, ತಯಾರಿ ನಡೆಯುತ್ತಿದೆ. ನ. 26 ಸಂಜೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಸಂಬಂಧಿಸಿ ಪಾರ್ಕಿಂಗ್, ನೀರು, ಅಡುಗೆ ತಯಾರಿ ಕುರಿತಂತೆ ಶುಕ್ರವಾರ ಸಭೆ ನಡೆಯಿತು. ಶನಿವಾರ ಜನಪ್ರತಿನಿಧಿಗಳು, ಆಟೋರಿಕ್ಷಾ- ಟ್ಯಾಕ್ಸಿಯವರ ಸಭೆ ನಡೆಯಲಿದೆ.
Related Articles
Advertisement
ಏಕೆ ತಂದು ಪ್ರತಿಷ್ಠಾಪಿಸಿದರು ? ಭಗವಂತನಿಗೆ ವಿಶೇಷ ಸೇವೆ ಮಾಡಿದ ದೇವತಾ ರೂಪಗಳಿವು. ರಾಮನನ್ನು ಹನುಮಂತ ಹೊತ್ತುಕೊಂಡ ಕತೆ ರಾಮಾಯಣದಲ್ಲಿ ಕೇಳಿದ್ದೇವೆ. ಕೃಷ್ಣನಾಗಿದ್ದಾಗ ಗರುಡಾರೂಢನಾಗಿದ್ದ ಕತೆ ಕೇಳಿದ್ದೇವೆ. ಹೀಗೆ ಪ್ರಧಾನ ಕಿಂಕರ ದೇವತೆಗಳಾಗಿ ವಾದಿರಾಜರು ಪ್ರತಿಷ್ಠಾಪಿಸಿದರು.ವಾದಿರಾಜರು ಯಾವುದೋ ಒಂದು ಹನುಮ, ಗರುಡ ಪ್ರತಿಮೆ ತಂದದ್ದಲ್ಲ. ಅಯೋಧ್ಯೆಯಲ್ಲಿದ್ದ ಪ್ರತಿಮೆಯನ್ನು ತಂದು ಉತ್ತರ, ದಕ್ಷಿಣದ ಸಂಬಂಧದ ಸೇತು ನಿರ್ಮಿಸಿದರು. ಈ ಸೇತು ನಿರ್ಮಿಸಿದ್ದು ಬಹುತೇಕರಿಗೆ ಗೊತ್ತಿಲ್ಲದಿದ್ದರೂ 1985ರಲ್ಲಿ ಧರ್ಮಸಂಸದ್ ಮೂಲಕ ಅದೇ ಸೇತು ಆಧಾರದಲ್ಲಿ ನಿರ್ಣಯ ತಳೆಯಲಾಯಿತು,
ಈಗ ಮತ್ತೆ ಅಂತಹ ನಿರ್ಣಯ ತಳೆಯುವ ಸನಿಹದಲ್ಲಿದ್ದೇವೆ. ಶ್ರೀ ವಾದಿರಾಜ ಸ್ವಾಮಿಗಳು ತಮ್ಮ ಮೊದಲ (1532 -33) ಮತ್ತು ಎರಡನೆಯ ಪರ್ಯಾಯದ (1548-49) ನಡುವಿನ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಮುಖ್ಯಪ್ರಾಣ ಮತ್ತು ಗರುಡನ ವಿಗ್ರಹಗಳನ್ನು ಅಯೋಧ್ಯೆಯಿಂದ ತಂದು ಪ್ರತಿಷ್ಠಾಪಿಸಿದರು. 1947ರಿಂದ ಅಯೋಧ್ಯಾ ರಾಮ ಮಂದಿರದ ಸ್ಥಳದಲ್ಲಿ ಪೂಜೆ ನಡೆಯುತ್ತಿತ್ತಾದರೂ ಸಾರ್ವಜನಿಕ ದರ್ಶನವಿರಲಿಲ್ಲ. 1985ರಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ತಮ್ಮ ಮೂರನೆಯ ಪರ್ಯಾಯ ಅವಧಿಯಲ್ಲಿ ಎರಡನೆಯ ಧರ್ಮಸಂಸದ್ ಅಧಿವೇಶನ ಆಯೋಜಿಸಿದರು. ಆಗಲೇ ರಾಮಮಂದಿರದ ದರ್ಶನ ಸಾರ್ವಜನಿಕರಿಗೆ ದೊರಕಬೇಕು ಎಂಬ ನಿರ್ಣಯ ತಳೆಯಲಾಯಿತು. ಈಗ ಮತ್ತೆ ಧರ್ಮಸಂಸದ್ ಅಧಿವೇಶನ ಪೇಜಾವರ ಶ್ರೀಗಳ ಐದನೆಯ ಪರ್ಯಾಯದಲ್ಲಿ ನಡೆಯುತ್ತಿದೆ. ಮಟಪಾಡಿ ಕುಮಾರಸ್ವಾಮಿ