Advertisement

ಮನೆಯ ಚೆಂದ ಹೆಚ್ಚಿಸುವ ಸುಂದರ ಕಾರ್ಪೆಟ್‌

09:15 PM Feb 21, 2020 | mahesh |

ಮನೆ ಸುಂದರವಾಗಿರಬೇಕು ಎನ್ನುವವರು ಮನೆಯ ಪ್ರತಿ ಅಂಶಗಳ ಮೇಲೂ ಗಮನ ಹರಿಸುತ್ತಾರೆ. ಪ್ರತಿಯೊಂದು ವಸ್ತು ವ್ಯವಸ್ಥಿವಾಗಿರಬೇಕು, ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾವಿರಾರು ರೂ. ಹಣವನ್ನು ವ್ಯಯಿಸುತ್ತಾರೆ. ಆದರೆ ಕೇವಲ ದುಬಾರಿ ವಸ್ತುಗಳನ್ನು ಖರೀದಿಸುವುದರಿಂದ ಮನೆಯನ್ನು ಸುಂದರ ಗೊಳಿಸಲು ಸಾಧ್ಯವಿಲ್ಲ.

Advertisement

ಮನೆಯ ಅಂದ ಹೆಚ್ಚಿಸುವುದರಲ್ಲಿ ಕಾರ್ಪೆಟ್‌ನ ಪಾತ್ರವೂ ಬಹುಮುಖ್ಯ. ಕಾರ್ಪೆಟ್‌ ಹೇಗಿರಬೇಕು, ಹೇಗೆ ಬಳಕೆ ಮಾಡಬೇಕೆಂಬ ಜ್ಞಾನವಿಲ್ಲದಿದ್ದರೆ ಮನೆ ಎಷ್ಟೇ ಅಂದವಾಗಿದ್ದರೂ ಸುಂದರವಾಗಿ ಕಾಣಿಸಲು ಸಾಧ್ಯವಿಲ್ಲ.

1 ಕೋಣೆಯ ಅಥವಾ ಹಾಲ್‌ನ ಅಂದ ಹೆಚ್ಚಿಸು ವುದರಲ್ಲಿ ಕಾರ್ಪೆಟ್‌ನ ಪಾತ್ರ ಹೆಚ್ಚು. ಆದ್ದರಿಂದ ಮನೆಗೆ ಹೊಂದಿಕೊಳ್ಳುವಂಥ‌ದ್ದನ್ನೇ ಖರೀದಿಸಿ.

2 ಹಾಲ್‌ಗ‌ಳ ವಿಸ್ತೀರ್ಣಕ್ಕನುಗುಣವಾಗಿ ಕಾರ್ಪೆಟ್‌ ಖರೀದಿಸುವುದು ಉತ್ತಮ. ಸಣ್ಣದಾದರೆ ಅದು ಸುಂದರವಾಗಿ ಕಾಣಿಸುವುದಿಲ್ಲ.

3 ಒಂದಕ್ಕಿಂದ ಅಧಿಕ ಕಾರ್ಪೆಟ್‌ಗಳನ್ನು ಖರೀದಿಸುವಾಗ ಅವು ಒಂದಕ್ಕೊಂದು ಹೊಂದಿಕೆಯಾಗುವಂತೆ ನೋಡಿಕೊಳ್ಳಿ. ಒಂದು ತೆಳು ಬಣ್ಣದ ಇನ್ನೊಂದು ಗಾಢ ಬಣ್ಣದ ಕಾರ್ಪೆಟ್‌ಗಳನ್ನು ಬಳಸಿದರೆ ಅದು ಮನೆಯ ಅಂದಕ್ಕೆ ಧಕ್ಕೆಯುಂಟುಮಾಡುತ್ತದೆ.

Advertisement

4 ಮನೆಯ ಪೈಂಟಿಂಗ್‌, ಸ್ಕ್ರೀನ್‌ಗಳ ಬಣ್ಣಕ್ಕೆ ಹೊಂದಿಕೆ ಯಾಗುವಂತಹ ಕಾರ್ಪೆಟ್‌ಗಳನ್ನು ಖರೀದಿಸಿಕೊಳ್ಳಿ. ಅವುಗಳ ಬಣ್ಣಗಳಿಗೆ ಹೊಂದಿಕೆ ಯಾಗದಿದ್ದರೆ ಸುಂದರವಾಗಿ ಕಾಣಿಸಲು ಸಾಧ್ಯವಿಲ್ಲ.

5 ದೊಡ್ಡ ಕೋಣೆಗೆ ಗಾಢ ಬಣ್ಣದ ಕಾರ್ಪೆಟ್‌ಬಳಸಿದರೆ ಸುಂದರವಾಗಿ ಕಾಣಿಸುತ್ತದೆ.

6 ಮನೆಯ ಫ‌ರ್ನಿಚರ್‌ಗಳ ಬಣ್ಣಗಳ ಕುರಿತು ಗಮನಹರಿಸಿ ಕಾರ್ಪೆಟ್‌ಗಳನ್ನು ಖರೀದಿಸಿ.

7 ಮನೆ ಸಾಂಪ್ರದಾಯಿಕ ವಾಗಿದೆಯೇ ಮಾಡರ್ನ್ ಮಾದರಿಯಲ್ಲಿದೆಯೇ ಎಂಬುದನ್ನು ತಿಳಿದುಕೊಂಡು ಕಾರ್ಪೆಟ್‌ಗಳನ್ನು ಆರಿಸಿಕೊಳ್ಳಿ,

8 ಕಾರ್ಪೆಟ್‌ಗಳ ಕ್ವಾಲಿಟಿಯನ್ನು ನೋಡಿಕೊಂಡು ಖರೀದಿಸಿಕೊಳ್ಳಿ. ಕೆಲವೊಂದು ಕಾರ್ಪೆಟ್‌ಗಳು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಆದ್ದರಿಂದ ಕಾರ್ಪೆಟ್‌ಗಳ ಕ್ವಾಲಿಟಿಗೆ ಹೆಚ್ಚು ಮಹತ್ವ ಕೊಡಿ.

ಆರೋಗ್ಯದ ಮೇಲೂ ಪರಿಣಾಮ
ಕಾರ್ಪೆಟ್‌ ಅನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರ್ಪೆಟ್‌ನಲ್ಲಿ ಧೂಳು ತುಂಬಿಕೊಳ್ಳುವುದರಿಂದ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸುಂದರವಾದ, ದುಬಾರಿಯಾದ ಕಾರ್ಪೆಟ್‌ ಖರೀದಿಸುವುದಕ್ಕಿಂತಲೂ ಅದರ ನಿರ್ವಹಣೆಗೆ ಹೆಚ್ಚು ಮಹತ್ವ ನಿಡಬೇಕು.

ಮನೆಯ ಸ್ವಚ್ಛತೆಗಾಗಿ ಕಾರ್ಪೆಟ್‌ಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಇವು ಮನೆಯ ಸೌಂದರ್ಯ ವೃದ್ಧಿಗೂ ಸಹಕಾರಿ. ಆದ್ದರಿಂದ ಕಾರ್ಪೆಟ್‌ ಖರೀದಿಸುವಾಗ ಗಮನಹರಿಸಿ ಮನೆಗೆ ಸೂಕ್ತವಾಗುವ ಕಾರ್ಪೆಟ್‌ ಖರೀದಿಸುವುದು ಉತ್ತಮ.

– ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next