ಬೆಳಗಾವಿ: ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಲಪಾತಗಳ ಸ್ವರ್ಗ ಎಂದೇ ಖ್ಯಾತಿಯಾದ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಂಬೋಲಿ ಜಲಪಾತ ಮೈದುಂಬಿ ಹರಿಯುತ್ತಿದೆ.
ಬೆಳಗಾವಿಯಿಂದ 70 ಕಿ.ಮೀ. ದೂರದಲ್ಲಿರುವ ರಮಣೀಯ ಅಂಬೋಲಿ ಫಾಲ್ಸ್ ಗೆ ಈ ವರ್ಷವೂ ಕೋವಿಡ್ ಹೊಡೆತ ಬಿದ್ದಿದ್ದು, ಪ್ರೇಕ್ಷಣಿಯ ಸ್ಥಳ ನೋಡುವ ಅವಕಾಶವನ್ನು ಪ್ರವಾಸಿಗರು ಕಳೆದುಕೊಂಡಿದ್ದಾರೆ. ಈ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಈ ಬಾರಿಯೂ ನಿರ್ಬಂಧ ಹೇರಿದೆ.
ಇದನ್ನೂ ಓದಿ:ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿಂಧದುರ್ಗ ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸಿದೆ. ಈ ಮಾರ್ಗದಲ್ಲಿ ಓಡಾಡುತ್ತಿರುವ ವಾಹನ ಸವಾರರು ಜಲಪಾತದ ಬಳಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಅಂಬೋಲಿಯ ಪ್ರಕೃತಿ ನೋಡುವುದೇ ಸೊಗಸು. ಮುಂಗಾರು ಮಳೆ ಆರಂಭವಾದಾಗಿನಿಂದ ಇಲ್ಲಿಯ ಸುಂದರ ತಾಣ ಮಂಜಿನಿಂದ ರಸವತ್ತಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿರುವ ಅಂಬೋಲಿ ಮೈದುಂಬಿ ಹರಿಯುತ್ತಿದ್ದರೂ ಈ ಸಲವೂ ಜನರಿಲ್ಲ.