Advertisement
ಒಂದು ದಿನ ಓರಿಸ್ಸಾದ ಒಬ್ಬ ಆಕೆಯ ಕೈ ರುಚಿಯನ್ನು ಸವಿಯಬೇಕು ಎಂಬ ಆಸೆಯಿಂದ ಆಕೆಯ ಫೋಸ್ಟ್‌ಗೆ ಕೆಮಂಟ್ ಮಾಡಿ, ನನಗೆ ಕಳಿಸಿಕೊಡಿ, ನಿಮ್ಮ ಕೈರುಚಿ ನೋಡಬೇಕು ಎನ್ನುತ್ತಾನೆ. ಅದಕ್ಕೆ ಆ ಗೃಹಿಣಿ ಅವನಿಗೆಂದೇ ತಯಾರಿಸಿದ ವಿಶೇಷ ತ್ರಿಪುರ ದೇಶಿ ಉಪ್ಪಿನಕಾಯಿಯನ್ನು ಕಳಿಸಿಕೊಡುತ್ತಾಳೆ. ಅದರ ರುಚಿ ಸವಿದ ಓರಿಸ್ಸಾದವ ನೀವ್ಯಾಕೆ ಉಪ್ಪಿನಕಾಯಿ ಉದ್ಯಮ ಮಾಡಬಾರದು ಎಂದು ಸರಳವಾಗಿ ಪ್ರಶ್ನಿಸಿ ಬಿಡುತ್ತಾನೆ.
Related Articles
Advertisement
2017ರಲ್ಲಿ ಉಪ್ಪಿನಕಾಯಿ ಉದ್ಯಮವನ್ನು ಆರಂಭಿಸುತ್ತಾಳೆ. ತ್ರಿಪುರವು ಸುವಾಸಿತ ಪದಾರ್ಥಗಳ ಸಂಪತ್ತು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ರುಚಿ ರುಚಿಯಾದ ಭಕ್ಷ್ಯಭೋಜನಗಳನ್ನು ಸವಿಯಬಹುದಾಗಿದ್ದು, ರುಚಿಕರವಾದ ಬಿದಿರಿನ ಚಿಗುರಿನಿಂದ ತಯಾರಿಸುವ ಉಪ್ಪಿನಕಾಯಿಗೆ ದೇಶದೆಲ್ಲೆಡ ಬಹುಬೇಡಿಕೆ. ಇದನ್ನೇ ಬಂಡವಾಳವಾಗಿಸಿಕೊಂಡ ಪುಷ್ಪಿತಾ ಸೌಗಂಧಿತ ಬಿದುರಿನ ಚಿಗುರೆಲೆಗಳಿಂದ ಉಪ್ಪಿನಕಾಯಿ ಉದ್ಯಮ ಆರಂಭಿಸುತ್ತಾಳೆ. ಮೊದಲ ಪ್ರಯತ್ನವಾದರೂ ಕೂಡ ಪರಿಶ್ರಮದಿಂದ ಉದ್ಯಮ ಯಶಸ್ಸಿನತ್ತ ಸಾಗುತ್ತಿರುತ್ತದೆ. ಉದ್ಯಮ ಯಶಸ್ಸಿನತ್ತ ಸಾಗುತ್ತಿರುವಾಗಲೇ ಬರಸಿಡಿಲೊಂದು ಅಪ್ಪಳಿಸುತ್ತದೆ. ಅದು ಅಂತಿಂಥ ಬರಸಿಡಿಲು ಅಲ್ಲ. ಇಡೀ ಜೀವನವನ್ನೇ ಸರ್ವನಾಶ ಮಾಡುವ ಮಹಾಮಾರಿಯೊಂದು ಪುಷ್ಪಿತಾ ದೇಹದೊಳಗೆ ಹೊಕ್ಕಿರುತ್ತದೆ. ಅದುವೇ, ಬ್ರೆಸ್ಟ್ ಕ್ಯಾನ್ಸರ್.
2017ರಲ್ಲಿ ಪುಷ್ಪಿತಾನಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ತಿಳಿಯುತ್ತದೆ. ಆದರೆ ಪುಷ್ಪಿತಾ ಎಂದೆಗುಂದುವುದಿಲ್ಲ. ಇದನ್ನು ಗೆಲ್ಲುತ್ತೇನೆ ಎಂಬ ಹಠ ಆಕೆಗೆ ಬರುತ್ತದೆ. ಇದಕ್ಕೆ ಗಂಡ ಧೈರ್ಯ ತುಂಬುತ್ತಾನೆ. ಬಳಿಕ ಹಂತಹಂತವಾಗಿ ಪುಷ್ಪಿತಾ ದೇಹದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಅವಳಿಗೆ ತುಸು ನೆಮ್ಮದಿಯಾಗುತ್ತಾಳೆ. ಈಮಧ್ಯೆ ಉದ್ಯಮಕ್ಕೆ ಹೊಡೆತ ಬೀಳಬಾರದು ಎಂಬ ದೃಷ್ಟಿಯಿಂದ ಸ್ಪಲ್ಪ ಮಟ್ಟಿಗೆ ಉಪ್ಪಿನಕಾಯಿಗಳ ಆರ್ಡರ್ ತೆಗೆದುಕೊಂಡು ಮಾರಾಟ ಮಾಡುತ್ತಿರುತ್ತಾಳೆ.
ಪುಷ್ಪಿತಾ ಕುಟುಂಬ, ಉದ್ಯಮ ನಿರ್ವಹಣೆಯ ಸಹಿತ ತನ್ನ ಕ್ಯಾನ್ಸರ್‌ಗೆ ಅವಳು ಹಂತ ಹಂತವಾಗಿ ಕಿಮೊಥೆರೆಪಿಗೆ ಒಳಗಾಗುತ್ತಾಳೆ. ಅನಂತರ ಅವಳು ಬ್ರೆಸ್ಟ್ ಕ್ಯಾನ್ಸರ್ ನಿಂದ ಪೂರ್ಣ ಮುಕ್ತಳಾಗುತ್ತಾಳೆ. ಕೇವಲ ಒಂದೇ ಒಂದು ವರ್ಷದಲ್ಲಿ ಅವಳು ಕ್ಯಾನ್ಸರ್‌ನಿಂದ ಮುಕ್ತಳಾಗಿ ಮತ್ತೆ ತನ್ನ ಉದ್ಯಮಕ್ಕೆ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ.
ಬಳಿಕ ಪುಷ್ಪಿತಾ ಅಂದುಕೊಡಂತೆ ಉದ್ಯಮ ಮತ್ತೆ ಬಿದುರಿರಿನ ಎಲೆಯಿಂದ ಚಿಗುರೊಡೆಯುತ್ತದೆ. ಆಗ ಪುಷ್ಪಿತಾ ಎಂಬ ಹೆಸರಿನ ಉಪ್ಪಿನಕಾಯಿಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆಯುತ್ತವೆ. ತರೇಹವಾರಿ ಬಿದುರಿನ ಎಲೆಯ ಉಪ್ಪಿನಕಾಯಿ, ಚಿಕನ್ ಉಪ್ಪಿನ ಕಾಯಿ ಸೇರಿ ವಿವಿಧ ಬಗೆಯ ಉಪ್ಪಿನಕಾಯಿಗಗಳನ್ನು ಮಾರಿ ಅವರೀಗ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.